ಬೆಂಗಳೂರು: ಲಿಂಗ ಸಮಾನತೆ ಹಾಗೂ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹಿಳೆಯರು ನಗರದಲ್ಲಿ ಭಾನುವಾರ ಬೈಕ್ ಜಾಥಾ ನಡೆಸಿ, ಜಾಗೃತಿ ಮೂಡಿಸಿದರು.

ಮಾರತಹಳ್ಳಿಯ ರೈನ್‌ಬೋ ಮಕ್ಕಳ ಆಸ್ಪತ್ರೆಯು ‘ಮಿಡ್‌ನೈಟ್ ರೈಡ್ 2022’ ಶೀರ್ಷಿಕೆಯಡಿ ಹಮ್ಮಿಕೊಂಡ ಜಾಥಾಕ್ಕೆ ಆಸ್ಪತ್ರೆಯ ಅಧ್ಯಕ್ಷಡಾ. ರಮೇಶ್ ಕಂಚಾರ್ಲ, ನಟಿ ಮೇಘನಾ ರಾಜ್ ಮತ್ತು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ. ಮೌದ್ಗಿಲ್ ಚಾಲನೆ ನೀಡಿದರು.

‘ಸಮಾಜದಲ್ಲಿ ಸಮಾನತೆ ಮೂಡಿಸುವ ಅಗತ್ಯವಿದೆ. ಮಹಿಳೆಯರು ರಾತ್ರಿ ವೇಳೆ ಹೊರಗಡೆ ಸಂಚರಿಸಬಾರದು ಎನ್ನುವುದು ಸರಿಯಲ್ಲ. ಪುರುಷರು ಹೊರಗಡೆ ಸಂಚರಿಸಿದರೆ ಯಾರು ಅವರನ್ನು ಪ್ರಶ್ನಿಸುವುದಿಲ್ಲ. ಆದರೆ, ಮಹಿಳೆಯರಿಗೆ ನೂರೆಂಟು ಪ್ರಶ್ನೆ ಹಾಕಲಾಗುತ್ತದೆ.ಮಹಿಳೆಯರು ಯಾವುದೇ ಸ್ಥಳದಲ್ಲಿ ವಾಹನ ಚಲಾಯಿಸಬಹುದು ಎಂಬುದನ್ನು ಈ ಜಾಥಾ ತೋರಿಸಿಕೊಟ್ಟಿದೆ’ ಎಂದುಡಾ. ರಮೇಶ್ ಕಂಚಾರ್ಲ ತಿಳಿಸಿದರು.

‘ದೇಶದಲ್ಲಿ ಮಹಿಳೆಯರು ಸಂಜೆ ವೇಳೆ ಮನೆಯಿಂದ ಹೊರಗಡೆ ತೆರಳುವಾಗ ಪುರುಷರ ಅನುಮತಿ ಪಡೆಯಬೇಕಿದೆ. ಪುರುಷರಿಗೆ ಎಲ್ಲ ಸ್ವಾತಂತ್ರ್ಯ ಇರುವಾಗ ಮಹಿಳೆಯರಿಗೆ ಏಕೆ ನಿರ್ಬಂಧ’ ಎಂದುರೂಪಾ ಡಿ. ಮೌದ್ಗಿಲ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.