ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತ ಹಾಕುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಮತದಾರರೊಬ್ಬರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೊದಲು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಹೆಸರಿನ ಮುಂದೆ ಬೆರಳಿಟ್ಟು, ಆನಂತರ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೆಸರಿಗೆ ಮತ ಹಾಕಿ ಸನ್ನೆ ಮಾಡಿದ್ದಾರೆ. ವಿ.ವಿ ಪ್ಯಾಟಿನಲ್ಲಿ ಬಂದ ವಿವರವೂ ಇದರಲ್ಲಿದೆ.

ಇನ್‌ಸ್ಟಾಗ್ರಾಮ್ ಸೇರಿ ವಾಟ್ಸ್‌ಆ್ಯಪ್‌ನಲ್ಲಿ ಅಭ್ಯರ್ಥಿಗಳ ವಿಡಿಯೊ ಹರಿದಾಡುತ್ತಿದೆ.

ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ ಮತದಾರ ಹೇಗೆ ಮೊಬೈಲ್ ಕೊಂಡೊಯ್ದ ಮತ್ತು ಚಿತ್ರೀಕರಿಸಿಕೊಂಡ ಎಂಬ ಬಗ್ಗೆ ಚರ್ಚೆ ನಡೆದಿದೆ. ವಿಡಿಯೊ ಸೆರೆ ಹಿಡಿದು, ಜಾಲತಾಣದಲ್ಲಿ ಹಂಚಿಕೊಂಡ ಮತದಾರ ಯಾರು ಮತ್ತು ಇದು ಯಾವ ಮತಗಟ್ಟೆಯಲ್ಲಿ ನಡೆದಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.