ಚಿಟಗುಪ್ಪ: ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ಗುತ್ತೆದಾರ ಪೆಟ್ರೋಲ್ ಪಂಪ್ ಎದುರುಗಡೆಯ ರಸ್ತೆಯಿಂದ ಶಿವಾಜಿ ವೃತ್ತದ ಮಾರ್ಗವಾಗಿ ಬಸವರಾಜ ವೃತ್ತದವರೆಗಿನ ಅತಿಕ್ರಮಣ ಕಟ್ಟಡಗಳನ್ನು ಜೆಸಿಬಿ ಕಾರ್ಯಾಚರಣೆ ಮೂಲಕ ತೆರವು ಗೊಳಿಸಲಾಯಿತು.

ತಹಶೀಲ್ದಾರ್ ರವೀಂದ್ರ ದಾಮಾ, ವೃತ್ತ ನಿರೀಕ್ಷಕ ಶ್ರೀನಿವಾಸ ಅಲ್ಲಾಪುರ್, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ನೇತೃತ್ವದಲ್ಲಿ ಬೆಳಗಿನ ಜಾವ 5.30ಕ್ಕೆ ಆರಂಭವಾದ ತೆರವು ಕಾರ್ಯಾಚರಣೆ ಮುಂಜಾನೆ 9 ಗಂಟೆಯವರೆಗೆ ನಡೆಯಿತು.
ಅತಿಕ್ರಮಣ ಕಟ್ಟಡಗಳ ಕೆಲವು ಮಾಲೀಕರು ಪುರಸಭೆ ಮಾತಿಗೆ ಮನ್ನಣೆ ನೀಡಿ ತಾವಾಗಿಯೇ ಕಟ್ಟಡ ತೆರವುಗೊಳಿಸಿದರೆ, ಕೆಲವರು ನಿರ್ಲಕ್ಷ್ಯ ಮಾಡಿದ್ದರಿಂದ ಪೊಲೀಸ್ ಸಿಬ್ಬಂದಿ ಹಾಗೂ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ತಹಶೀಲ್ದಾರ್ ರವೀಂದ್ರ ದಾಮಾ ತಿಳಿಸಿದರು.

ಸಿಟಿ ಸರ್ವೆ ನಕ್ಷೆ ಪ್ರಕಾರ ಅಳತೆ ಮಾಡಿ ಅತಿಕ್ರಮಿಸಿಕೊಂಡ ಜಾಗದವರೆಗೆ ಮಾರ್ಕ್ ಮಾಡಿದ ಹಲವು ಕಟ್ಟಡಗಳ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ನಿತ್ಯ ಮೂರು ಬಾರಿ ಧ್ವನಿವರ್ಧಕ ಬಳಸಿ ನಾಗರಿಕರಿಗೆ ನಾಳೆಯ ತೆರವುಗೊಳಿಸುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಅದರಂತೆ ಕಾರ್ಯಾಚರಣೆ ನಡೆಸಲಾಗುತಿದೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.