ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ: ಬಸವೇಶ್ವರ ಚೌಕ್‌ನಲ್ಲಿ ಕೋಟೆ ಆಕರ್ಷಣೆ

ಗಣೇಶ ಮಂಡಳ 51 ವರ್ಷ ಪೂರೈಸಿದಕ್ಕೆ ಗಣೇಶನಿಗೆ ವಿಶೇಷ ಅಲಂಕಾರ
Published : 9 ಸೆಪ್ಟೆಂಬರ್ 2024, 4:21 IST
Last Updated : 9 ಸೆಪ್ಟೆಂಬರ್ 2024, 4:21 IST
ಫಾಲೋ ಮಾಡಿ
Comments

ಬಸವಕಲ್ಯಾಣ: ನಗರದ‌ ಬಸವೇಶ್ವರ ಚೌಕ್‌ನ ಗಣೇಶ ಮಂಡಳಕ್ಕೆ 51 ವರ್ಷ ಪೂರೈಸಿದ್ದು, ಈ ಬಾರಿ ಗಣೇಶನಿಗೆ ಕೋಟೆ ಮಾದರಿ ಮಂಟಪ ನಿರ್ಮಿಸಲಾಗಿದೆ.

ಈ ಮಂಡಳದವರು ಆರಂಭದಿಂದಲೂ ಗಣೇಶನಿಗೆ ವಿಶಿಷ್ಟ ಅಲಂಕಾರ ಮಾಡುತ್ತಲೇ ಬಂದಿದ್ದಾರೆ. ಮೆರವಣಿಗೆಯಲ್ಲೂ ಸಾಮಾಜಿಕ ಸಂದೇಶದ ಸ್ತಬ್ಧ‌‌ಚಿತ್ರಗಳನ್ನು ಕೊಂಡೊಯ್ಯುತ್ತಾರೆ. ಅದಕ್ಕಾಗಿ ಈ ಮಂಡಳಕ್ಕೆ ಅನೇಕ ಬಹುಮಾನಗಳೂ ಸಂದಿವೆ.

ಈ ಕೋಟೆ ಮಾದರಿ ಅಲಂಕಾರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಇದೀಗ ಜನಾಕರ್ಷಣೆ ಹಾಗೂ ಭಕ್ತಿ ಕೇಂದ್ರವಾಗಿ ಬದಲಾಗಿದೆ. ಭಾನುವಾರ ರಜೆಯ ದಿನವಾಗಿದ್ದರಿಂದ ಮಹಿಳೆಯರು ಮಕ್ಕಳಾದಿಯಾಗಿ ಅನೇಕರು ಈ ಸ್ಥಳಕ್ಕೆ ಭೇಟಿ ನೀಡಿ ಕೋಟೆ ಮಾದರಿ ಕಣ್ತುಂಬಿಕೊಂಡು ಗಣೇಶನಿಗೆ ನಮಿಸಿ ಭಕ್ತಿ ಮೆರೆದರು. ನಗರದಲ್ಲಿ 40ಕ್ಕೂ ಅಧಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶಗಳ ಪ್ರತಿಷ್ಠಾಪನೆ ಆಗಿದೆ. ಅವುಗಳಲ್ಲಿ ಈ ಗಣೇಶನ ಮಂಟಪ ತುಸು ಅಧಿಕ ಆಕರ್ಷಣೀಯವಾಗಿದೆ.

‘ಬಸವೇಶ್ವರ ವೃತ್ತದಲ್ಲಿನ ಗಣೇಶನ‌ ಈ ಸಲದ ಅಲಂಕಾರ ಮೊದಲಿನಕ್ಕಿಂತಲೂ ಭಿನ್ನವಾಗಿದೆ. ಗಣೇಶ ಮೂರ್ತಿ ಸಹ ಎತ್ತರದ್ದಾಗಿದೆ. ತ್ರಿಶೂಲ ಹಾಗೂ ಇತರೆ ಆಯುಧ‌‌ ಹಿಡಿದಿರುವ ಮತ್ತು ಹಿಂದೆ ಸಿಂಹ ಇರುವಂಥ ಎದುರಲ್ಲಿ ಲಿಂಗವಿರುವ ಮೂರ್ತಿ ಜನರ ಗಮನ ಸೆಳೆಯುತ್ತಿದೆ’ ಎಂದು ಮಂಡಳದ ಉಪಾಧ್ಯಕ್ಷರೂ ಆಗಿರುವ ಕಲಾವಿದ ಶಿವಕುಮಾರ ಕಟಗಿಮಠ ತಿಳಿಸಿದ್ದಾರೆ.

‘11ನೇ ದಿನಕ್ಕೆ ವಿಸರ್ಜನಾ ಕಾರ್ಯಕ್ರಮ ಇರುತ್ತದೆ. ಅಂದು ದಿನ ಅನ್ನದಾಸೋಹ ಏರ್ಪಡಿಸಲಾಗುತ್ತದೆ. ವಿಶಿಷ್ಟ ಸ್ತಬ್ಧಚಿತ್ರ ಕೊಂಡೊಯ್ಯಲು ಸಹ ಯೋಜಿಸಲಾಗಿದೆ’ ಎಂದು ಮಂಡಳದ ಪ್ರಮುಖರಾದ ದೀಪಕ ಗುಡ್ಡಾ, ವಿಜಯಕುಮಾರ ಶಿವಣಗೆ, ರಾಜಪ್ಪ ಖಾನಾಪುರೆ ತಿಳಿಸಿದ್ದಾರೆ.

ಗಣೇಶ ಪ್ರತಿಷ್ಠಾಪನೆಯ ನಂತರದ ಇಲ್ಲಿ ಭಾನುವಾರ ಪ್ರಥಮ ವಿಶೇಷ‌ ಪೂಜೆ ನಡೆಯಿತು. ಮಂಡಳದ ಪ್ರಮುಖರಾದ ದೀಪಕ ಗುಡ್ಡಾ, ಶಿವಕುಮಾರ ಕಟಗಿಮಠ, ವಿಜಯಕುಮಾರ ಶಿವಣಗೆ, ರಾಜಪ್ಪ ಖಾನಾಪುರೆ, ಸಂತೋಷ ಹರಕೆ, ಗೌಸ್ ಇಸ್ಮಾಯಿಲ್ ನಾರಾಯಣಪುರೆ, ರಾಜಪ್ಪ ಮಂಠಾಳೆ, ಬಸಯ್ಯಸ್ವಾಮಿ, ರಾಜಕುಮಾರ ಗರೂಡ, ರೇವಣಸಿದ್ದಯ್ಯ ಮಠಪತಿ, ವೆಂಕಟಗಿರಿ ಗೋಸಾಯಿ, ಜಗದೀಶ ಮಠಪತಿ ‍ಪಾಲ್ಗೊಂಡಿದ್ದರು.

ಬಸವಕಲ್ಯಾಣದ ಬಸವೇಶ್ವರ ಚೌಕ್ ನಲ್ಲಿನ ಗಣೇಶನಿಗೆ ಕೋಟೆ ಮಾದರಿಯ ಮಂಟಪ ನಿರ್ಮಿಸಿರುವುದು
ಬಸವಕಲ್ಯಾಣದ ಬಸವೇಶ್ವರ ಚೌಕ್ ನಲ್ಲಿನ ಗಣೇಶನಿಗೆ ಕೋಟೆ ಮಾದರಿಯ ಮಂಟಪ ನಿರ್ಮಿಸಿರುವುದು
ಬಸವಕಲ್ಯಾಣದ ಬಸವೇಶ್ವರ ಚೌಕ್ ನಲ್ಲಿನ ಕೋಟೆ ಮಾದರಿಯ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಗಣೇಶ
ಬಸವಕಲ್ಯಾಣದ ಬಸವೇಶ್ವರ ಚೌಕ್ ನಲ್ಲಿನ ಕೋಟೆ ಮಾದರಿಯ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಗಣೇಶ
ನಾನು ಜಿಲ್ಲಾಡಳಿತದ ವಿವಿಧ ಸ್ತಬ್ಧ ಚಿತ್ರಗಳನ್ನು‌ ನಿರ್ಮಿಸಿದ್ದು ಗಣೇಶ ಹಬ್ಬವೂ ವಿಶಿಷ್ಟವಾಗಲಿ ಎಂದು ಕೆಲ‌ದಿನ ಶ್ರಮಿಸಿ ಆಕರ್ಷಕ ಕೋಟೆ ಅಲಂಕಾರ ಮಾಡಿದ್ದೇನೆ
ಶಿವಕುಮಾರ ಕಟಗಿಮಠ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT