ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಮಹಾರಾಷ್ಟ್ರ ಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಖಲೆ ಇಲ್ಲದೆ ಸೂರತ್ ನಿಂದ ಹೈದರಾಬಾದ್ಗೆ ಸಾಗಿಸುತ್ತಿದ್ದ 200 ಸೀರೆಗಳನ್ನು ಜಪ್ತಿ ಮಾಡಲಾಗಿದೆ.

ಲೋಕಸಭೆ ಚುನಾವಣೆ ಅಂಗವಾಗಿ ಇಲ್ಲಿನ ಚೆಕ್ ಪೋಸ್ಟ್ ನಲ್ಲಿ ಕಾರು ಪರಿಶೀಲಿಸಿದಾಗ ಸೀರೆ ಇರುವುದು ಗೊತ್ತಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಮಹೇಶ ಪಾಟೀಲ ನೇತೃತ್ವದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಸೀರೆಗಳನ್ನು ಜಪ್ತಿ ಮಾಡಲಾಯಿತು. ಕಣ್ಗಾವಲು ಸಮಿತಿಯ ಸದಸ್ಯರಾದ ಆನಂದ, ಪೊಲೀಸ್ ಅಧಿಕಾರಿ ಕವಿತಾ ಮತ್ತಿತರರು ಉಪಸ್ಥಿತರಿದ್ದರು.

ಮಾಹಿತಿ ನೀಡಿ: ಚುನಾವಣೆ ಅಥವಾ ಇತರೆ ಯಾವುದೇ ಕಾರಣಕ್ಕಾಗಿ ಉಚಿತವಾಗಿ ಸೀರೆ, ಕುಕ್ಕರ್ ಮತ್ತಿತರೆ ಸಾಮಗ್ರಿ ವಿತರಿಸುವುದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಮಹೇಶ ಪಾಟೀಲ ಸಲಹೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ತಿ ಮಾಡಿಕೊಂಡಿದ್ದ 200 ಸೀರೆಗಳನ್ನು ₹20 ಸಾವಿರ ದಂಡ ವಿಧಿಸಿ ಹಿಂದಿರುಗಿಸಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.