ಚಾಮರಾಜನಗರ: ಜಿಲ್ಲೆಯಾದ್ಯಂತ ಈಚೆಗೆ ಸುರಿದ ಉತ್ತಮ ಮಳೆಯಿಂದ ಹಿಂಗಾರು ಬಿತ್ತನೆಗೆ ಪೂರಕ ವಾತಾವರಣವಿದ್ದು, ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿವೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 31,030 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಇದುವರೆಗೂ 10,107 ಹೆಕ್ಟೇರ್ನಲ್ಲಿ ಬಿತ್ತನೆ ಪೂರ್ಣಗೊಂಡಿದ್ದು ಶೇ 32.57ರಷ್ಟು ಗುರಿ ಸಾಧನೆಯಾಗಿದೆ. ಈ ಬಾರಿ ಹಿಂಗಾರು ಬಿತ್ತನೆ ಆರಂಭವಾಗುವ ಸಂದರ್ಭ ಉತ್ತಮ ಮಳೆಯಾದ ಕಾರಣ ನೀರಿನ ಸಮಸ್ಯೆ ತಲೆದೋರಿಲ್ಲ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯೂ ಕಾಡಿಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಮುಸುಕಿನ ಜೋಳ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಹಿಂಗಾರು ಮಳೆ ಕೈಕೊಟ್ಟರೂ ಈ ಅವಧಿಯಲ್ಲಿ ಸುರಿಯುವ ಇಬ್ಬನಿಯ ಹನಿ ಬೆಳೆ ನಾಶವಾಗದಂತೆ ಕಾಯುತ್ತದೆ ಎಂಬುದು ವಾಡಿಕೆ.

ಯಳಂದೂರಿನಲ್ಲಿ ಹೆಚ್ಚು ಬಿತ್ತನೆ: ಜಿಲ್ಲೆಯಲ್ಲಿ ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಬಿತ್ತನೆ ನಡೆದಿದೆ. 1,290 ಹೆಕ್ಟೇರ್ ಗುರಿಗೆ ಪ್ರತಿಯಾಗಿ 875 ಹೆಕ್ಟೇರ್ ಬಿತ್ತನೆ ನಡೆದಿದ್ದು ಶೇ 67.83ರಷ್ಟು ಪ್ರಗತಿಯಾಗಿದೆ. ಭತ್ತ 150 ಹೆಕ್ಟೇರ್ ಗುರಿಗೆ ಪ್ರತಿಯಾಗಿ 160 ಹೆಕ್ಟೇರ್ ನಾಟಿಯಾಗಿದೆ. ಉಳಿದಂತೆ 220 ಹೆಕ್ಟೇರ್ನಲ್ಲಿ ಮುಸುಕಿನ ಜೋಳ, ಕಡಲೆ 120, ಹುರುಳಿ 150 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು ಭರದಿಂದ ಸಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 340 ಹೆಕ್ಟೇರ್ ಕಡಲೆ, 1,475 ಹೆಕ್ಟೇರ್ ಹುರುಳಿ, ತಲಾ 20 ಹೆಕ್ಟೇರ್ ಹಲಸಂದೆ, ಅವರೆ ಬಿತ್ತನೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 5,602 ಹೆಕ್ಟೇರ್ ಹುರುಳಿ, ಕೊಳ್ಳೇಗಾಲ ತಾಲ್ಲೂಕಿನಲ್ಲಿ 134 ಹೆಕ್ಟೇರ್ ಮುಸುಕಿನ ಜೋಳ, 150 ಹೆಕ್ಟೇರ್ ಹುರಳಿ, 210 ಹೆಕ್ಟೇರ್ ಕಬ್ಬು (ಕೂಳೆ ಸೇರಿ) ಬಿತ್ತನೆಯಾಗಿದೆ.

ಹನೂರು ತಾಲ್ಲೂಕಿನಲ್ಲಿ 560 ಹೆಕ್ಟೇರ್ ಮುಸುಕಿನ ಜೋಳ, 518 ಹೆಕ್ಟೇರ್ ಹುರುಳಿ, 18 ಹೆಕ್ಟೇರ್ ಕಡಲೆ, 27 ಹೆಕ್ಟೇರ್ ಸೂರ್ಯಕಾಂತಿ, 81 ಹೆಕ್ಟೇರ್ ಕಬ್ಬು ಬಿತ್ತನೆಯಾಗಿದೆ.

ಮಳೆಯ ವಿವರ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಹಿಂಗಾರು ಅವಧಿಯಾದ ಅಕ್ಟೋಬರ್ನಲ್ಲಿ 162 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 188 ಮಿ.ಮೀಮಳೆ ಬಿದ್ದಿದೆ. ಕಳೆದ ವರ್ಷ ಕೇವಲ 76 ಮಿ.ಮೀ ಮಳೆಯಾಗಿತ್ತು. ನವೆಂಬರ್ನಲ್ಲಿ 29 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಇದುವರೆಗೂ 11.4 ಮಿ.ಮೀ ಮಳೆಯಾಗಿದ್ದು ವಾಡಿಕೆಗಿಂತ ಹೆಚ್ಚು ಸುರಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಮುಂಗಾರು ಪೂರ್ವ, ಮುಂಗಾರು ಹಾಗೂ ಹಿಂಗಾರು ಅವಧಿ ಸೇರಿ ಜಿಲ್ಲೆಯಲ್ಲಿ 715 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 748 ಮಿ.ಮೀ ಮಳೆ ಬಿದ್ದಿದ್ದು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಹಿಂಗಾರು ಅವಧಿಯಲ್ಲಿ ಬಿತ್ತನೆಗೆ ಪೂರಕ ಮಳೆ ಸುರಿದಿರುವುದರಿಂದ ಮುಸುಕಿನ ಜೋಳ ಹುರುಳಿ ಹಸಿ ಕಡಲೆ ಬಿತ್ತನೆ ಚುರುಕಾಗಿದ್ದು ಗುರಿ ಮುಟ್ಟುವ ನಿರೀಕ್ಷೆ ಇದೆ.
ಬೀಜ ರಸಗೊಬ್ಬರ ಕೊರತೆಯೂ ಕಾಡಿಲ್ಲ ಅಬಿದ್ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.