ಹನೂರು: ಕಾರಿನ ಮೇಲೆ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದ ಸಮೀಪದಲ್ಲಿರುವ ಹೊಸದೊಡ್ಡಿಯಲ್ಲಿ ನಡೆದಿದೆ.

ಒಡೆಯರ ಪಾಳ್ಯದಿಂದ ಹನೂರು ಕೊಳ್ಳೇಗಾಲ ಮಾರ್ಗವಾಗಿ ತೆರಳುತ್ತಿದ್ದ ಭ್ರಮರಾಂಭ ಹೆಸರಿನ ಖಾಸಗಿ ಬಸ್ ರಾಮಪುರದಿಂದ ತಮಿಳುನಾಡಿನ ಕಡೆಗೆ ತೆರಳುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ.
.ಹನೂರು: ತಲೆ ಎತ್ತಲಿದೆ ಬುದ್ದನ ಬೃಹತ್ ಪ್ರತಿಮೆ.
ಹೊಸದೊಡ್ಡಿ ಸಮೀಪದ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ ಕಾರು, ಬಸ್ನಲ್ಲಿದ್ದ ಹಲವರಿಗೆ ಗಾಯಗಳಿವೆ. ಅವರನ್ನು ಹೋಲಿಕ್ರಾಸ್ ಆಸ್ಪತ್ರೆ ಹಾಗೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
.ಹನೂರು | ವಿಜ್ಞಾನ ವಸ್ತು ಪ್ರದರ್ಶನ: ಗಮನ ಸೆಳೆದ ಮಾದರಿ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಜಿಲ್ಲಾ ವೈಧ್ಯಾಧಿಕಾರಿ ಡಾ.ಚಿದಂಬರಂ ಭೇಟಿನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಒಬ್ಬರಿಗೆ ತಲೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಹನೂರು: ಪಾಲಾರ್ ನದಿಯಲ್ಲಿ ಕಾವೇರಿ ಆರತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.