ಚಾಮರಾಜನಗರ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಶುಕ್ರವಾರ ಸೆರೆಹಿಡಿದು ಕರ್ನಾಟಕದ ಬಂಡಿಪುರದ ಶಿಬಿರಕ್ಕೆ ಕರೆತರುವ ಮಾರ್ಗದಲ್ಲೇ ತನ್ನೀರ್ ಕೊಂಬನ್ ಆನೆ ಮೃತಪಟ್ಟಿದೆ ಎಂದು ಬಂಡೀಪುರದ ಆಡಳಿತ ಶನಿವಾರ ಸಂಜೆ ಪತ್ರಿಕಾ ಹೇಳಿಕೆ ನೀಡಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಕೇರಳದ ಮಾನಂದವಾಡಿ ಪಟ್ಟಣಕ್ಕೆ ಶುಕ್ರವಾರ ನುಗ್ಗಿದ್ದ ಗಂಡಾನೆಯನ್ನು ಸೆರೆ ಹಿಡಿದು, ಬಂಡೀಪುರ ರಾಂಪುರ ಶಿಬಿರಕ್ಕೆ ಕರೆತರಲಾಗಿತ್ತು.
.ಕಾರ್ಯಾಚರಣೆಯಲ್ಲಿ ಮೃತಪಟ್ಟ ತನ್ನೀರ್ ಕೊಂಬನ್: ಲೋಪ ಪತ್ತೆಗೆ ತನಿಖೆಗೆ ಆದೇಶ.
ತನ್ನೀರ್ ಕೊಂಬನ್ ಎನ್ನುವ ಈ ಆನೆಯನ್ನು ಜನವರಿ 16ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹೆದ್ದರವಳ್ಳಿ ಗ್ರಾಮದಲ್ಲಿ ಸೆರೆ ಹಿಡಿದು ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು.

ಬಂಡೀಪುರ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಆನೆ, ನೆರೆಯ ಕೇರಳದ ವಯನಾಡು ಸಂರಕ್ಷಿತ ಪ್ರದೇಶದಲ್ಲಿ ಸಾಗಿ ಶುಕ್ರವಾರ ಮಾನಂದವಾಡಿ ಪಟ್ಟದಾದ್ಯಂತ ಓಡಾಡಿ, ಜನರಲ್ಲಿ ಭಯ ಹುಟ್ಟುಹಾಕಿತ್ತು.

ಕೇರಳದ ಅರಣ್ಯ ಇಲಾಖೆ ಸಂಜೆಯ ಹೊತ್ತಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಸೆರೆ ಹಿಡಿದಿತ್ತು. ಕೇರಳ ಹಾಗೂ ಕರ್ನಾಟಕದ ಅರಣ್ಯ ಇಲಾಖೆ ಸಿಬ್ಬಂದಿಯು ಶುಕ್ರವಾರ ತಡ ರಾತ್ರಿ ಆನೆಯನ್ನು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಕರೆದುಕೊಂಡು ಬಂದಿದ್ದರು.
.ಬಂಡೀಪುರ–ವಯನಾಡು ಹೆದ್ದಾರಿ: ಕೂದಲೆಳೆ ಅಂತರದಲ್ಲಿ ಆನೆ ದಾಳಿಯಿಂದ ಪಾರಾದ ವ್ಯಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.