ಯಳಂದೂರು: ನಿರಂತರ ಸುರಿಯುತ್ತಿರುವ ವರ್ಷಧಾರೆಗೆ ಕಬಿನಿ ಕಾಲುವೆ, ನದಿ, ಹೊಳೆ ಹಾಗೂ ಕೆರೆಗಳಲ್ಲಿ ಸಣ್ಣ ಮೀನುಗಳು ಯಥೇಚ್ಛವಾಗಿ ಕಾಣಿಸಿಕೊಂಡಿವೆ.

ಮೀನಿನ ಸುಗ್ಗಿ ಕಂಡು ಸ್ಥಳೀಯರು ಶಿಕಾರಿ ಮಾಡಲು ಮುಗಿಬಿದ್ದಿದ್ದು, ಕೈಗೆ ಸಿಕ್ಕಷ್ಟು ಮೀನುಗಳನ್ನು ಹಿಡಿದು ಮನೆಗೆ ಕೊಂಡೊಯ್ಯುತ್ತಿದ್ದಾರೆ. ನೀರಿಗೆ ಇಳಿಯದವರು ಗಾಳ ಹಾಕಿ ಮೀನುಗಳನ್ನು ಹೆಕ್ಕುತ್ತಿರುವ ದೃಶ್ಯ ತಾಲ್ಲೂಕಿನ ಹಲವೆಡೆ ಸಾಮಾನ್ಯವಾಗಿ ಕಾಣಸಿಗುತ್ತಿದೆ.

ತಾಲ್ಲೂಕಿನಲ್ಲಿ ತಿಂಗಳ ಹಿಂದಿನಿಂದಲೇ ಕಬಿನಿ ಆಣೆಕಟ್ಟೆಯಿಂದ ನೀರು ಹರಿಸಲಾಗಿದ್ದು ದೊಡ್ಡ ಕಾಲುವೆ ಮೂಲಕ ನೀರು ಹೊಲ, ಗದ್ದೆ, ಕೆರೆಗಳನ್ನು ಸೇರಿವೆ. ಜಲ ಮೂಲಗಳ ಮೂಲಕ ಹತ್ತಾರು ಜಾತಿಯ ಮೀನುಗಳು ಸಣ್ಣಪುಟ್ಟ ಜಲಾವರಗಳನ್ನು ಸೇರಿಕೊಂಡಿವೆ. ಮಳೆ ಹೆಚ್ಚಾಗಿ ಸುವರ್ಣಾವತಿ ನದಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಸಣ್ಣ ಮೀನುಗಳು ಹೆಚ್ಚಾಗಿ ಕಾಣಸಿಗುತ್ತಿವೆ.

ಹೊಳೆ ನೀರಿಗೆ ವಿರುದ್ಧವಾಗಿ ಜಿಗಿಯುವ ಮೀನುಗಳನ್ನು ಸ್ಥಳೀಯರು ಹಿಡಿದು ಮಾರಾಟ ಮಾಡಿದರೆ, ಕೆಲವರು ಸಂಗ್ರಹಿಸಿ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಸಣ್ಣ ಮೀನು ಸಾರು ಬಹಳ ರುಚಿಯಾಗಿರುವ ಕಾರಣ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಹೆಚ್ಚು ಮೀನು ಸಿಕ್ಕವರು ಬಿಸಿಲಿನಲ್ಲಿ ಒಣಗಿಸಿ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ತುಸು ಆದಾಯ ಕೈಸೇರುವಂತಾಗಿದೆ ಎನ್ನುತ್ತಾರೆ ಕಂದಹಳ್ಳಿ ಮಹೇಶ್ ಕುಮಾರ್.

ಮಳೆ ಹೆಚ್ಚಾಗಿ ಸುರಿಯುತ್ತಿರುವುದರಿಂದ ಕೃಷಿ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದು ಬಿಡುವು ಸಿಕ್ಕಿರುವುದರಿಂದ ಕಬಿನಿ ಕಾಲುವೆ ಬಳಿ ಗಾಳ ಹಾಕುತ್ತಿದ್ದೇವೆ. ಸಣ್ಣಮೀನುಗಳ ಜೊತೆಯಲ್ಲಿ ಗೆಂಡೆ ಮೀನುಗಳು ಸಿಗುತ್ತಿವೆ. ದಿನಕ್ಕೆ 1 ಕೆಜಿಗೂ ಹೆಚ್ಚು ಮೀನನ್ನು ಮನೆಗೆ ಹೊಯ್ಯುತ್ತೇವೆ ಎನ್ನುತಾರೆ ವೈ.ಕೆ.ಮೋಳೆ ನಾಗರಾಜ್.

ಸಣ್ಣ ಮೀನು ಪಾವು ಮತ್ತು ಸೇರು ಲೆಕ್ಕದಲ್ಲಿ ಗ್ರಾಹಕರು ಖರೀದಿಸುತ್ತಾರೆ. 1 ಸೇರಿಗೆ 100 ದರ ಇದೆ. ಮೀನು ಸಣ್ಣದಾದಷ್ಟು ದರ ಹೆಚ್ಚಾಗುತ್ತದೆ. ಹಸಿಮೀನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಅವರು.

ಎರಡು ವರ್ಷಗಳಿಂದ ಹೊಳೆ ಮತ್ತು ಕಬಿನಿ ಕಾಲುವೆಗಳಲ್ಲಿ ನೀರು ಅಷ್ಟಾಗಿ ಹರಿದಿರಲಿಲ್ಲ. ಹೀಗಾಗಿ, ಮೀನಿನ ಬರ ಎದುರಾಗಿತ್ತು. ಈ ಬಾರಿ ಉತ್ತಮ ಮಳೆ ಸುರಿಯುತ್ತಿದ್ದು, ಕಬಿನಿ ಅಣೆಕಟ್ಟೆಯ ನೀರು ಹರಿಯುತ್ತಿದ್ದು ಮೀನಿನ ಲಭ್ಯತೆಯೂ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಹತ್ತಾರು ಮೀನು: ನೂರೆಂಟು ರುಚಿ– ನದಿಯಲ್ಲಿ ನೀರಿನ ತೀವ್ರತೆ ಕಡಿಮೆ ಇದ್ದಾಗ ಹತ್ತಾರು ಬಗೆಯ ಮೀನುಗಳು ಬಲೆಗೆ ಸೇರುತ್ತವೆ. ಮೀನುಗಾರರು ಯಾವುದೇ ಕೊಡವೆ ಬಲೆ ಬಳಸದೆ ಮೀನು ಗುಂಡಿಯಲ್ಲಿ ಬಿದ್ದಾಗ ಸಂಗ್ರಹಿಸುತ್ತಾರೆ. ಆದರೆ, ಮಳೆಗಾಲದ ಸಮಯದಲ್ಲಿ ಹತ್ತಾರು ಬಗೆಯ ಮೀನುಗಳು ಜೊತೆಯಾಗುತ್ತವೆ. ಮೀನು ಪ್ರಿಯರ ಬಾಯಲ್ಲಿ ರುಚಿಮೊಗ್ಗು ಅರಳಿಸುತ್ತದೆ.

ಗೆಂಡೆಮೀನು, ಕರಿಮೀನು, ಮಳ್ಳಿಮೀನು, ಕುರುಚುಲು ಮೀನು, ಸಣ್ಣಮೀನು ಹೊಳೆ ಮತ್ತು ಕಾಲುವೆಯಲ್ಲಿ ಹೆಚ್ಚು ಕಂಡುಬರುತ್ತಿದ್ದು ಮೀನು ಪ್ರಿಯರು ಸ್ಥಳಕ್ಕೆ ತೆರಳಿ ಖರೀದಿಸುತ್ತಿದ್ದಾರೆ. ಮೀನು ಒಣಗಿಸಿ ಅಗತ್ಯ ಬಿದ್ದಾಗ ಬಳಸಬಹುದಾಗಿದ್ದು ಕೆಲವರು ಕೆಂಡದಲ್ಲಿ ಸುಟ್ಟು ಊಟದ ಜೊತೆ ನೆಂಚಿಕೊಳ್ಳುತ್ತಾರೆ ಎನ್ನುತ್ತಾರೆ ಕಂದಹಳ್ಳಿ ಮಾರಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.