ಅರಣ್ಯದಲ್ಲಿ ನಿರ್ಮಿಸಿರುವ ತೊಟ್ಟಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿರುವುದು
ಬೇಸಿಗೆಗೂ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ನೀರಿನ ಸಮಸ್ಯೆ ತಲೆದೋರಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು
ಸುರೇಂದ್ರ ಡಿಸಿಎಫ್ ಕಾವೇರಿ ವನ್ಯಧಾಮ.
2017ರಲ್ಲಿ ಈ ರೀತಿಯ ಬರ ಕಾಣಿಸಿಕೊಂಡಿತ್ತು. ಏಳು ವರ್ಷಗಳ ಬಳಿಕ ಮತ್ತೆ ಈ ಪರಿಸ್ಥಿತಿ ಎದುರಾಗಿದೆ. ಪ್ರಾಣಿ್ಗಳಿಗೆ ನೀರು ಪೂರೈಸಲು ನಾವು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ
ಎಂ.ಎನ್ ಅಂಕರಾಜು ಎಸಿಎಫ್ ಕಾವೇರಿ ವನ್ಯಧಾಮ.
ರೈತನಿಂದ ಚೆಕ್ ಡ್ಯಾಂಗೆ ನೀರು
ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪಡುವ ಕಷ್ಟವನ್ನು ಗಮನಿಸಿರುವ ಕಾಡಂಚಿನ ಜಮೀನಿನ ರೈತರೊಬ್ಬರು ಅರಣ್ಯದಲ್ಲಿನ ಚೆಕ್ ಡ್ಯಾಂಗೆ ನೀರು ಹರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹನೂರು ವನ್ಯಜೀವಿ ವಲಯದ ಅರಣ್ಯದಂಚಿನಲ್ಲಿರುವ ನಂಜುಂಡ ಎಂಬುವವರು ಕೃಷಿಗೆ ನೀರು ಬಳಸಿಕೊಂಡ ನಂತರ ಉಳಿದ ನೀರನ್ನು ಅರಣ್ಯದ ಚೆಕ್ ಡ್ಯಾಂಗೆ ಹರಸಿದ್ದಾರೆ. ಇದುವರೆಗೆ ಮೂರು ಬಾರಿ ಚೆಕ್ ಡ್ಯಾಂ ತುಂಬಿಸಿದ್ದಾರೆ. ಇದರಿಂದ ವನ್ಯಪ್ರಾಣಿಗಳಿಗೆ ಅನುಕೂಲವಾಗಿದೆ. ನಂಜುಂಡ ಅವರ ಸಹಕಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳೂ ಶ್ಲಾಘಿಸಿದ್ದಾರೆ. ‘ಬೇಸಿಗೆಯಲ್ಲಿ ಪ್ರಾಣಿಗಳು ನೀರಿಗಾಗಿ ಜಮೀನಿನತ್ತ ಬರುತ್ತಿದ್ದವು. ಇದನ್ನು ಗಮನಿಸಿ ಚೆಕ್ ಡ್ಯಾಂಗೆ ನೀರು ಹರಿಸಿದೆ. ಆ ಬಳಿಕ ಪ್ರಾಣಿಗಳು ಬರುವುದು ತಪ್ಪಿದೆ. ಜತೆಗೆ ವೈಯಕ್ತಿಕವಾಗಿ ನನ್ನ ಮನಸ್ಸಿಗೂ ಖುಷಿಯಾಗಿದೆ’ ಎಂದು ರೈತ ನಂಜುಂಡ ‘ಪ್ರಜಾವಾಣಿ’ಗೆ ತಿಳಿಸಿದರು.