ರೇಡಿಯೊ ಕಾಲರ್ ಹಾಕಿರುವ ಆನೆಯೇ?
ಉಪಟಳ ನೀಡುತ್ತಿರುವ ಒಂಟಿ ಆನೆಗೆ ಈ ಹಿಂದೆ ರೇಡಿಯೊ ಹಾಕಲಾಗಿತ್ತು ಎಂದು ಹೇಳುತ್ತಾರೆ ಗ್ರಾಮಸ್ಥರು. ವರ್ಷದ ಹಿಂದೆ ಪೊನ್ನಾಚಿಯಲ್ಲಿ ಉಪಟಳ ಕೊಡುತ್ತಿದ್ದ ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ತೊಂದರೆ ಕೊಡುವ ಆನೆ ಗ್ರಾಮಕ್ಕೆ ಬರುತ್ತಿದ್ದಂತೆ ಸ್ಥಳೀಯ ವಲಯ ಅರಣ್ಯಾಧಿಕಾರಿಗೆ ಜಿಪಿಎಸ್ ಮೂಲಕ ಸಂದೇಶ ಹೋಗುವುದರಿಂದ ಆನೆ ಹಾವಳಿಯನ್ನು ಮುಂಚಿತವಾಗಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ‘ರೇಡಿಯಪ ಕಾಲರ್ ಅಳವಡಿಸಿದ್ದ ಆನೆ ಕೆಲವು ತಿಂಗಳಲ್ಲೇ ಕಾಲರ್ ಕಳಚಿಕೊಂಡಿದೆ. ಅರಣ್ಯಾಧಿಕಾರಿಗಳು ರೇಡಿಯೊ ಕಾಲರ್ ಅಳವಡಿಸಿದ್ದ ಆನೆಯೇ ಈಗ ಹೆಚ್ಚು ತೊಂದರೆ ಕೊಡುತ್ತಿದೆ. ಹಾಗಾಗಿ ಕಾಡಾನೆಯನ್ನು ಬೇಗ ಸೆರೆ ಹಿಡಿಯಬೇಕು’ ಎಂದು ಪೊನ್ನಾಚಿಯ ನಿವಾಸಿ ರಾಜು ಒತ್ತಾಯಿಸಿದರು.