ಹನೂರು | 5 ತಿಂಗಳಿಂದಿಲ್ಲ ಗೌರವ ಧನ: ಅತಿಥಿ ಶಿಕ್ಷಕರ ಪರದಾಟ
ಎರಡನೇ ಹಂತದಲ್ಲಿ ನೇಮಕ ಆದವರಿಗೆ ಬಂದಿಲ್ಲ ಸಂಬಳ, ಪ್ರಾಥಮಿಕ ಶಾಲೆಯವರಿಗೆ 2 ತಿಂಗಳಿಂದ ಬಾಕಿ
ಬಿ. ಬಸವರಾಜು
Published : 8 ಫೆಬ್ರುವರಿ 2024, 7:19 IST
Last Updated : 8 ಫೆಬ್ರುವರಿ 2024, 7:19 IST
ಫಾಲೋ ಮಾಡಿ
Comments
ರಾಮಚಂದ್ರರಾಜೇ ಅರಸ್
ಪ್ರೌಢಶಾಲೆಗಳಿಗೆ ಎರಡನೇ ಅವಧಿಗೆ ನೇಮಕ ಮಾಡಿಕೊಂಡ ಅತಿಶಿ ಶಿಕ್ಷಕರಿಗೆ ಈ ತಿಂಗಳೊಳಗೆ ಗೌರವ ಧನ ಪಾವತಿಯಾಗಲಿದೆ
-ರಾಮಚಂದ್ರ ರಾಜೇ ಅರಸ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಎರಡು ಹಂತಗಳಲ್ಲಿ ನೇಮಕ
2023–24ನೇ ಶೈಕ್ಷಣಿಕ ವರ್ಷ ಆರಂಭವಾಗುವಾಗ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 821 ಶಿಕ್ಷಕರ ಕೊರತೆ ಇತ್ತು. ಸರ್ಕಾರಿ ಪ್ರೌಢಶಾಲೆಗಳಲ್ಲಿ 162 ಶಿಕ್ಷಕರ ಕೊರತೆ ಇತ್ತು. ಶಿಕ್ಷಣ ಇಲಾಖೆ ಎರಡು ಹಂತಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿತ್ತು. ಶೈಕ್ಷಣಿಕ ವರ್ಷ ಆರಂಭವಾಗುವಾಗಲೇ ಪ್ರಾಥಮಿಕ ಶಾಲೆಗಳಿಗೆ 409 ಮತ್ತು ಪ್ರೌಢ ಶಾಲೆಗಳಿಗೆ 96 ಮಂದಿಯನ್ನು ನೇಮಿಸಲಾಗಿತ್ತು. ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಮತ್ತೆ ಪ್ರಾಥಮಿಕ ಶಾಲೆಗಳಿಗೆ 144 ಮತ್ತು ಪ್ರೌಢ ಶಾಲೆಗಳಿಗೆ 63 ಮಂದಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು.