ಕೊಳ್ಳೇಗಾಲ: ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ದೂರಿ, ಚಾಮರಾಜನಗರಕ್ಕೆ ಹೆಚ್ಚಿನ ಬಸ್ ಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ಮಾಡಿದರು.

ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಲಕಾಲ ಘೋಷಣೆಗಳನ್ನು ಕೂಗಿ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಅವಿನಾಶ್ ಮಾತನಾಡಿ,ಕೆಎಸ್ಆರ್ಟಿಸಿ ಬಸ್ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಇದರಿಂದ ನಮಗೆ ಕಾಲೇಜಿಗೆ ಹೋಗಲು ತೊಂದರೆ ಉಂಟಾಗುತ್ತಿದೆ. ಹೆಚ್ಚಿನ ಬಸ್ಗಳನ್ನು ಮೈಸೂರಿಗೆ ಬಿಟ್ಟಿದ್ದಾರೆ. ನೂರಾರು ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಚಾಮರಾಜನಗರಕ್ಕೆ ಹೋಗಬೇಕು. ಇಲ್ಲಿನ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಬಸ್ಗಳನ್ನು ಮೈಸೂರಿಗೆ ಹಾಗೂ ಹೊರ ಜಿಲ್ಲೆಗಳಿಗೆ ಬಿಡುತ್ತಿದ್ದಾರೆ. ಚಾಮರಾಜನಗರಕ್ಕೆ ಬಸ್ಗಳನ್ನು ಕಡಿಮೆ ಸಂಖ್ಯೆಯಲ್ಲಿ ಬಿಟ್ಟಿದ್ದಾರೆ. ವಿದ್ಯಾರ್ಥಿಗಳು ಹೋಗುವ ಬೆಳಗಿನ ಸಮಯದಲ್ಲಿ ಬಸ್ಗಳ ಸಂಖ್ಯೆ ಕಡಿಮೆ ಇದ್ದು, ತೊಂದರೆ ಉಂಟಾಗುತ್ತಿದೆ ಎಂದರು.

ಚಾಮರಾಜನಗರಕ್ಕೆ ಹೆಚ್ಚು ಬಸ್ಗಳನ್ನು ಬಿಡಬೇಕು, ಅಗತ್ಯವಿದೆ ಎಂದು ಡಿಪೋ ಮ್ಯಾನೇಜರ್ಗೆ ಲಿಖಿತ ಮನವಿಯನ್ನೂ ನೀಡಿದ್ದೇವೆ. ಬಸ್ಗಳ ಸಮಯ ಸರಿಪಡಿಸದಿದ್ದರೆ, ಚಾಮರಾಜ ನಗರಕ್ಕೆ ಹೆಚ್ಚು ಬಸ್ ಬಿಡದಿದ್ದರೆ ಹೋರಾಟ ತೀವ್ರ ಗೊಳಿಸಬೇಕಾಗುತ್ತದೆ ಎಂದು ಪ್ರತಿಭಟಿಸಿದರು. ಟಿಸಿ ನಾಗರಾಜು ಸ್ಥಳಕ್ಕೆ ಬಂದು ಎರಡು ಬಸ್ ಗಳನ್ನು ಚಾಮರಾಜನಗರಕ್ಕೆ ಕಳುಹಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಪ್ರತಿಭಟನೆಯನ್ನು ಕೈಬಿಟ್ಟರು.

ಮನೋಜ್, ರಾಘವೇಂದ್ರ, ಮಂಜುನಾಥ್, ಸುನಿಲ್, ಮಹದೇವ, ಸುಶ್ಮಿತಾ, ರಮ್ಯಾ, ಸಿಂಧು ಸೇರಿದಂತೆ ನೂರಾರು ವಿದ್ಯಾರ್ಥಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.