ರಥೋತ್ಸವಕ್ಕಾಗಿ ಸಜ್ಜಾಗಿ ನಿಂತಿರುವ ಬ್ರಹ್ಮರಥ
ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹದೇಶ್ವರ ಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ
ಮಕ್ಕಳಿಗೆ ಹಾಲುಣಿಸುವುದಕ್ಕಾಗಿ ನಿರ್ಮಿಸಿರುವ ಮಾತೃ ಕುಟೀರ
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಬುಧವಾರ ಭಕ್ತರೊಂದಿಗೆ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು
‘ಎಲ್ಲ ಸಿದ್ಧತೆಗಳು ಪೂರ್ಣ’ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಕಾರ್ಯದರ್ಶಿ ರಘು ‘ಜಾತ್ರೆ ಪ್ರಯುಕ್ತ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ದಾಸೋಹ ಕುಡಿಯುವ ನೀರು ಲಾಡು ಕೌಂಟರ್ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಕ್ಕೆ ಕ್ರಮವಹಿಸಲಾಗಿದೆ. ಮಾತೃ ಕುಟೀರ ಮತ್ತು ಅಲ್ಲಲ್ಲಿ ಮಡಕೆ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ’ ಎಂದರು. ‘ದೇವಸ್ಥಾನ ಆವರಣ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಪೌರ ಕಾರ್ಮಿಕರು ನೈರ್ಲಮ್ಯ ಕಾಪಾಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಭಕ್ತರೂ ನಮಗೆ ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.
600 ಬಸ್ ವ್ಯವಸ್ಥೆ
‘ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಕೆಎಸ್‌ಆರ್‌ಟಿಸಿಯು ಗುರುವಾರದಿಂದ 600 ಬಸ್‌ಗಳ ವ್ಯವಸ್ಥೆ ಮಾಡಿದೆ. ‘ಬುಧವಾರ 400 ಬಸ್‌ಗಳು ಸಂಚರಿಸಿವೆ. ಗುರುವಾರ ಇನ್ನೂ 200 ಬಸ್‌ಗಳು ಸಂಚರಿಸಲಿವೆ. ಕೊನೆಯ ದಿನದವರೆಗೂ ಬಸ್‌ಗಳು ಕಾರ್ಯಾಚರಿಸಲಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಂಗಳವಾರ ನಾವು ಹೆಚ್ಚುವರಿ ಬಸ್‌ಗಳನ್ನು ಹಾಕಿರಲಿಲ್ಲ. ಆದರೆ ಭಕ್ತರು ನಿರೀಕ್ಷೆಗೂ ಮೀರಿ ಇದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಯಿತು’ ಎಂದು ಅವರು ಮಾಹಿತಿ ನೀಡಿದರು.