ಹನೂರು (ಚಾಮರಾಜನಗರ): ವಿವಿಧ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ಮೂಳೆ ಹಾಗೂ ಉಗುರುಗಳನ್ನು ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಅರಣ್ಯಾಧಿಕಾರಿಗಳು ಗುರುವಾರ ಮುಂಜಾವು ಬಂಧಿಸಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನಲ್ಲಿ ಮಹದೇವ ಎಂಬುವವರನ್ನು ಗುರುವಾರ ಮುಂಜಾವು 3 ಗಂಟೆ ಸುಮಾರಿಗೆ ಬಂಧಿಸಲಾಗಿದೆ. ಅವರನ್ನು ಐದನೇ ಆರೋಪಿ ಎಂದು ಹೆಸರಿಸಲಾಗಿದೆ.

ಇತ್ತೀಚೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಮಲೆಮಹದೇಶ್ವರ ವನ್ಯಧಾಮ, ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಧಾಮದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಅವರ ಬಳಿಯಿಂದ ಹುಲಿಯ ಎರಡು ಉಗುರು, ಮೂಳೆಗಳು, ಚಿರತೆ ಉಗುರು, ಎರಡು ಜಿಂಕೆ, ಎರಡು ಕಾಡು ಕುರಿ, ಎರಡು ಹಾರುವ ಅಳಿಲು, ಸೀಳು ನಾಯಿಯ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ...ಕಾಡು ಪ್ರಾಣಿಗಳ ಕಳ್ಳಬೇಟೆ: ನಾಲ್ವರು ಆರೋಪಿಗಳ ಬಂಧನ

ತಲೆಮರೆಸಿಕೊಂಡಿದ್ದ ಇನ್ನೂ ಮೂವರು ಆರೋಪಿಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.

ಬಂಧಿತ ಆರೋಪಿಗಳು ವಿಚಾರಣೆ ವೇಳೆ ನೀಡಿದ ವಿವರಗಳನ್ನು ಆಧರಿಸಿ, ಕಾರ್ಯಾಚರಣೆ ಆರಂಭಿಸಿದ ಅರಣ್ಯಾಧಿಕಾರಿಗಳು, ಮಹದೇವ ಎಂಬುವವರನ್ನು ಬಂಧಿಸಿದ್ದಾರೆ.

ತನಿಖಾಧಿಕಾರಿಗಳು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.