108 ಆಂಬುಲೆನ್ಸ್ ಬದಲಾಗಿ ಸೇವೆ ನೀಡುತ್ತಿರುವ ಖಾಸಗಿ ಆಂಬುಲೆನ್ಸ್
ಶಿವರುದ್ರ
ಮಲೆ ಮಹದೇಶ್ವರ ಬೆಟ್ಟದಲ್ಲಿ ತುರ್ತು ಆಂಬುಲೆನ್ಸ್ ಸೇವೆ ಸಿಗದ ಬಡವರಿಗೆ ಸಮಸ್ಯೆಯಾಗಿದೆ. 108 ಆಂಬುಲೆನ್ಸ್ ಸೇವೆಯನ್ನು ಪುನರಾರಂಭಿಸಬೇಕು. ಇಲ್ಲವಾದರೆ ಮುಂದೆ ತೀವ್ರ ಹೋರಾಟ ಮಾಡಬೇಕಾಗುತ್ತದೆ.
–ಶಿವರುದ್ರ ಸ್ಥಳೀಯರು
‘ಆಂಬುಲೆನ್ಸ್ ನಿರ್ವಹಣೆ ಕಷ್ಟ’
‘ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಸ ಆಂಬುಲೆನ್ಸ್ ವಾಹನವಿದ್ದು ಅಮಾವಾಸ್ಯೆ ಹಾಗೂ ಜಾತ್ರಾ ಸಂದರ್ಭಗಳಲ್ಲಿ ಮಾತ್ರ ಮಹದೇಶ್ವರ ಬೆಟ್ಟದಲ್ಲಿ ತುರ್ತು ಆರೋಗ್ಯ ಸೇವೆ ನೀಡಲು ವಾಹನವನ್ನು ನಿಯೋಜನೆ ಮಾಡಲಾಗುತ್ತದೆ. ಉಳಿದ ದಿನ ಕೊಳ್ಳೇಗಾಲ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡಲಾಗುತ್ತದೆ. ಒಂದು ವಾಹನಕ್ಕೆ 4 ಜನ ಸಿಬ್ಬಂದಿ ಬೇಕಿರುವುದರಿಂದ ಮಹದೆಶ್ವರ ಬೆಟ್ಟದಲ್ಲಿ ವಾಹನ ನಿಯೋಜಿಸಿದರೆ ನಿರ್ವಹಣೆ ಕಷ್ಟ ಎಂಬ ಉದ್ದೇಶದಿಂದ ಕೊಳ್ಳೇಗಾಲದಲ್ಲಿ ಸೇವೆ ನೀಡಲಾಗುತ್ತಿದೆ. ತಾತ್ಕಾಲಿವಕಾಗಿ ಬೋಲೆರೋ ಆಂಬುಲೆನ್ಸ್ ವಾಹನ ಸೇವೆ ಮಹದೇಶ್ವರ ಬೆಟ್ಟದಲ್ಲಿ ಸಿಗುತ್ತಿದೆ ಎಂದು ಪ್ರಜಾವಾಣಿಗೆ 108 ಸೇವೆ ನಿರ್ವಹಣೆಯ ಹೊಣೆ ಹೊತ್ತಿರುವ ರಿತೇಶ್ ತಿಳಿಸಿದರು.
ತೀರಾ ಹಿಂದುಳಿದಿರುವ ಭಾಗ
ಮಲೆ ಮಹದೇಶ್ವರ ಬೆಟ್ಟ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು ಹೊರ ಜಿಲ್ಲೆ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಭೇಟಿನೀಡುತ್ತಾರೆ. ಧಾರ್ಮಿಕವಾಗಿ ಶ್ರೀಮಂತವಾಗಿರುವ ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಕಾಡಂಚಿನ ಗ್ರಾಮಗಳಲ್ಲಿ ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ಪ್ರದೇಶದಲ್ಲಿ ರೋಗಿಗಳು ಅನಾರೋಗ್ಯಕ್ಕೆ ತುತ್ತಾದರೆ ಸರ್ಕಾರದ 108 ಸೇವೆ ಲಭ್ಯವಾಗುತ್ತಿಲ್ಲ. ಸಾವಿರಾರು ರೂಪಾಯಿ ತೆತ್ತು ಖಾಸಗಿ ವಾಹನಗಳಲ್ಲಿ ದೂರದ ಕೊಳ್ಳೇಗಾಲ ಅಥವಾ ತಮಿಳುನಾಡಿಗೆ ರೋಗಿಗಳನ್ನು ಚಿಕಿತ್ಸೆಗೆ ಕರೆದೊಯ್ಯಬೇಕು.