ಈಗಾಗಲೇ ಒಂದು ಬಾರಿ ತಮಿಳುನಾಡಿನ ಅಧಿಕಾರಿಗಳೊಂದಿಗೆ ಗಡಿ ಸಭೆ ನಡೆಸಲಾಗಿದೆ. ಎರಡು ಸಭೆ ಕರೆದು ಬೇಟೆ ಪ್ರಕರಣ ಬಗ್ಗೆ ಚರ್ಚಿಸಲಾಗುವುದು
-ಎಂ ಮಾಲತಿಪ್ರಿಯಾ ಚಾಮರಾಜನಗರ ವೃತ್ತದ ಪ್ರಭಾರ ಸಿಸಿಎಫ್
ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಹಗಲು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ
-ಜಿ.ಸಂತೋಷ್‌ಕುಮಾರ್ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್
ಬೇಟೆ ಪ್ರಕರಣ ತಗ್ಗುವ ನಿರೀಕ್ಷೆ
ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಮೀಸಲು ಅರಣ್ಯ ಪ್ರದೇಶಗಳನ್ನು ಸೇರಿಸಿ ಕಾವೇರಿ ದಕ್ಷಿಣ ವನ್ಯಧಾಮ ಎಂದು ತಮಿಳುನಾಡು ಸರ್ಕಾರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಘೋಷಣೆ ಮಾಡಿತ್ತು. ಈ ವನ್ಯಧಾಮವು ರಾಜ್ಯದ ಕಾವೇರಿ ವನ್ಯಧಾಮದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಹೊಸ ವನ್ಯಧಾಮದಲ್ಲಿ ಬೇಟೆ ತಡೆ ಶಿಬಿರ ಸ್ಥಾಪನೆ ಸೇರಿದಂತೆ ಕಠಿಣ ಸಂರಕ್ಷಣಾ ಕ್ರಮಗಳ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ ನಂತರ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಹಾವಳಿ ತಗ್ಗಬಹುದು ಎಂಬ ನಿರೀಕ್ಷೆಯಲ್ಲಿ ಅರಣ್ಯ ಅಧಿಕಾರಿಗಳು ಇದ್ದಾರೆ.