ಸಂತೇಮರಹಳ್ಳಿ: ತಾಲ್ಲೂಕಿನ ಪ್ರಮುಖ ಹೋಬಳಿ ಸಂತೇಮರಹಳ್ಳಿಯಲ್ಲಿ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ವಿತರಣಾ ವ್ಯವಸ್ಥೆಯ ಜಾಲ ಅವ್ಯವಸ್ಥಿತವಾಗಿದ್ದು, ಸ್ಥಳೀಯರು ತೊಂದರೆಪಡುವಂತಾಗಿದೆ.

ಸಂತೇಮರಹಳ್ಳಿ ಕೇಂದ್ರಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಕೇಂದ್ರ ಇಲ್ಲದಿರುವುದರಿಂದ ಕುಟುಂಬಗಳ ದೈನಂದಿನ ಬಳಕೆಯಲ್ಲಿ ಅತಿ ಅಗತ್ಯವಾಗಿರುವ ಗ್ಯಾಸ್ ಸಿಲಿಂಡರ್ ಪಡೆಯಲು ನಿವಾಸಿಗಳು ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದೆ ವಿಧಾನಸಭಾ ಕ್ಷೇತ್ರವಾಗಿದ್ದ, ವಿಸ್ತಾರವಾದ ಹೋಬಳಿಯಾಗಿರುವ, ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ವಾಸವಿದ್ದರೂ ಇಲ್ಲಿನ ಜನರ ಸಂಖ್ಯೆಗೆ ಅನುಗುಣವಾಗಿ ಗ್ಯಾಸ್ ಸಿಲಿಂಡರ್ ಮಾರಾಟ ಕೇಂದ್ರ ಇಲ್ಲದಿರುವುದು ಸಮಸ್ಯೆಯ ಗಂಭೀರತೆ ಹೆಚ್ಚಿಸಿದೆ.

ಗ್ಯಾಸ್ ಸಿಲಿಂಡರ್ ಪಡೆಯಲು ದೂರದ ಪಟ್ಟಣ ಪ್ರದೇಶಗಳಿಗೆ ಸಂತೇಮರಹಳ್ಳಿ ಭಾಗದ ನಾಗರಿಕರು ಅಲೆದಾಡ ಬೇಕಿದೆ. ಹೋಬಳಿಯ ಪ್ರತಿ ಮನೆಯಲ್ಲೂ ಬಹುತೇಕ ಗ್ಯಾಸ್ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದಿರುವ ಫಲಾನುಭವಿಗಳೂ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳು ಸೇರಿದಂತೆ ಸಾರ್ವಜನಿಕರು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ದೂರದ ಜಿಲ್ಲಾ ಕೇಂದ್ರ ಚಾಮರಾಜನಗರ, ತಾಲ್ಲೂಕು ಕೇಂದ್ರ ಯಳಂದೂರು, ಪ್ರಮುಖ ಭಾಗಗಳಾದ ಉಮ್ಮತ್ತೂರು ಹಾಗೂ ಮೂಗೂರು ಗ್ರಾಮಗಳನ್ನು ಆಶ್ರಯಿಸಬೇಕಿದೆ.

ದೂರದ ಸ್ಥಳಗಳಿಂದ ಸಮಯಕ್ಕೆ ಸರಿಯಾಗಿ ಗ್ರಾಮೀಣ ಪ್ರದೇಶಗಳಿಗೆ ಗ್ಯಾಸ್ ಸಿಲಿಂಡರ್ ವಿತರಣೆಯ ವಾಹನಗಳು ಬಾರದೆ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಸಂತೇಮರಹಳ್ಳಿ ಹೋಬಳಿಗೆ ಗ್ಯಾಸ್ ಸಿಲಿಂಡರ್ ವಾಹನಗಳು ಬಂದು ಹೋಗುತ್ತವೆ. ಕೂಲಿ, ನಾಲಿಗೆ ತೆರಳಿರುವವರು ಈ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಸಿಲಿಂಡರ್ಗಾಗಿ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.

ಗ್ಯಾಸ್ ಸಿಲಿಂಡರ್ ತೀರಾ ಅವಶ್ಯಕತೆ ಇರುವವರು ಬಾಡಿಗೆ ಕೊಟ್ಟು ಆಟೋರಿಕ್ಷಾಗಳಲ್ಲಿ ಸಿಲಿಂಡರ್ ತರಬೇಕಾಗಿದೆ. ಇಲ್ಲವಾದರೆ ಖಾಸಗಿಯಾಗಿ ದುಬಾರಿ ಬೆಲೆ ನೀಡಿ ಸಿಲಿಂಡರ್ ಖರೀದಿಸಬೇಕು. ಇದು ಬಡವರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಕೇಂದ್ರ ಸ್ಥಾನದಲ್ಲಿ ವಾಹನಗಳ ಸಂಚಾರ ವ್ಯವಸ್ಥೆ ಉತ್ತಮವಾಗಿದೆ. ಗ್ರಾಮೀಣ ಭಾಗದ ಜನರು ಬಂದು ಹೋಗಲು ಅನುಕೂಲಕರ ಪರಿಸ್ಥಿತಿ ಇದೆ. ಹಾಗಾಗಿ ಹೋಬಳಿಗೊಂದು ಗ್ಯಾಸ್ ಸಿಲಿಂಡರ್ ಮಾರಾಟ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಮುಖಂಡ ಜಯಶಂಕರ್ ಆಗ್ರಹಿಸಿದ್ದಾರೆ.

Highlights - ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಸೇವೆ ಪರಿತಪಿಸುತ್ತಿರುವ ಕೂಲಿ ಕಾರ್ಮಿಕರು, ಬಡ ಮಧ್ಯಮವರ್ಗ ಆಟೋ ಬಾಡಿಗೆ ಮಾಡಿಕೊಂಡು ಸಿಲಿಂಡರ್ ಪಡೆಯುವ ಅನಿವಾರ್ಯತೆ

Cut-off box - ‘ಶೀಘ್ರ ವಿತರಣ ಕೇಂದ್ರ ಮಂಜೂರು’ ಸಂತೇಮರಹಳ್ಳಿ ಕೇಂದ್ರಸ್ಥಾನಕ್ಕೆ ಗ್ಯಾಸ್ ಸಿಲಿಂಡರ್ ವಿತರಣೆ ಹಾಗೂ ಮಾರಾಟ ಕೇಂದ್ರದ ಅವಶ್ಯಕತೆ ಇದ್ದು ಸಂಸದ ಸುನೀಲ್ ಬೋಸ್ ಅವರ ಶಿಪಾರಸ್ಸಿನೊಂದಿಗೆ ಗ್ಯಾಸ್ ವಿತರಣಾ ಕೇಂದ್ರ ತೆರೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

Cut-off box - ‘ಗ್ಯಾಸ್ ಸಿಲಿಂಡರ್ ಕೇಂದ್ರ ಬೇಕು’ ಸಂತೇಮರಹಳ್ಳಿಯು ಹೋಬಳಿ ಕೇಂದ್ರ ಸ್ಥಾನವಾಗಿರುವುದರ ಜೊತೆಗೆ ಪ್ರಮುಖ ಪಟ್ಟಣ ಪ್ರದೇಶವೂ ಹೌದು. ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಬಹುದಿನಗಳ ಬೇಡಿಕೆ ಇಲ್ಲಿನ ಜನರದ್ದು. ಈ ಭಾಗವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ಭರವಸೆ ನೀಡುತ್ತಿದ್ದಾರೆ. ಪ್ರಮುಖ ಕೇಂದ್ರಸ್ಥಾನವಾಗಿರುವ ಸಂತೇಮರಹಳ್ಳಿಗೆ ಗ್ಯಾಸ್ ಸಿಲಿಂಡರ್ ಮಾರಾಟ ಕೇಂದ್ರ ಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 11 ಗ್ರಾಮಪಂಚಾಯಿತಿಗಳಿದ್ದು 43 ಕಂದಾಯ ಗ್ರಾಮಗಳು ಸೇರಿವೆ. 2011ರ ಜನಗಣತಿಯ ಪ್ರಕಾರ 17974 ಕುಟುಂಬಗಳು ಸಂತೇಮರಹಳ್ಳಿ ವ್ಯಾಪ್ತಿಯಲ್ಲಿವೆ. ಹೋಬಳಿ ಕೇಂದ್ರದ ವ್ಯಾಪ್ತಿ ವಿಶಾಲವಾಗಿದ್ದರೂ ಗ್ಯಾಸ್ ಸಿಲಿಂಡರ್ ಮಾರಾಟ ಕೇಂದ್ರ ಇಲ್ಲದಿರುವುದಕ್ಕೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ಇಲ್ಲಿನ ಜನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.