ಚಾಮರಾಜನಗರ: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016ರ ನಿಯಮ (4)2ರ ಪ್ರಕಾರ ತಿದ್ದುಪಡಿಯಂತೆ ಪಾಲಿಸೈರೀನ್ ಮತ್ತು ವಿಸ್ತರಿತ ಪಾಲಿಸೈರೀನ್ ಸೇರಿದಂತೆ ವಿವಿಧ ಏಕ ಬಳಕೆಯ ಪ್ಲಾಸ್ಟಿಕ್ (ಎಸ್‌ಯುಪಿ) ತಯಾರಿಕೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಳೆದ ವರ್ಷದ ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಹನೂರು ಪಟ್ಟಣ ಪಂಚಾಯಿತಿ ತಿಳಿಸಿದೆ.

ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕ್ಯಾರಿ ಬ್ಯಾಗ್, ಬ್ಯಾನರ್‌ಗಳು, ಬಂಟಿಂಗ್ಸ್, ಪ್ಲೆಕ್ಸ್, ಪ್ಲೇಟ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಕಪ್‌ಗಳು, ಸ್ಪೂನ್‌ಗಳು, ಅಂಟಿಕೊಳ್ಳುವ ಫಿಲ್ಮ್‌ಗಳು, ಎಲ್ಲ ದಪ್ಪದ ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಹಾಳೆಗಳು, ಸ್ಟ್ರಾ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೊ ಮಣಿಗಳಿಂದ ಮಾಡಿದ ವಸ್ತುಗಳನ್ನು ತಯಾರಿಸುವಂತಿಲ್ಲ, ಬಳಸುವಂತಿಲ್ಲ.

ಪ್ಲಾಸ್ಟಿಕ್ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು, ಇತರೆ ಸಂಸ್ಥೆಗಳು ಮತ್ತು ಸಾರ್ವಜನಿಕರು ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.

ಇದೇ 28ರವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಪಡುವ ಸೂಪರ್ ಮಾರ್ಕೆಟ್ ಮತ್ತು ಇತರೆ ವಾಣಿಜ್ಯ ಸಾರ್ವಜನಿಕ ಸ್ಥಳಗಳು ಪ್ಲಾಸ್ಟಿಕ್ ಉಪಕ್ರಮಗಳನ್ನು ಅನುಸರಿಸಿದರೆ ಸದರಿ ಸಂಸ್ಥೆಗೆ ಹಸಿರು ಸಂಸ್ಥೆ ಎಂದು ಘೋಷಿಸಲಾಗುವುದು. ಆದೇಶ ಉಲ್ಲಂಘಿಸಿದರೆ ನಗರಾಭಿವೃದ್ದಿ ಇಲಾಖೆಯ ಆದೇಶ ಅನುಸಾರ ₹100ರಿಂದ ಪ್ರತಿಟನ್‌ಗೆ ₹5000ವರೆಗೆ ದಂಡ ವಿಧಿಸಲಾಗುವುದು. ಪುನರಾವರ್ತಿತವಾದರೆ ಅದಕ್ಕೂ ಹೆಚ್ಚು ದಂಡ ವಿಧಿಸಿ ಪರವಾನಗಿ ರದ್ದುಪಡಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಹನೂರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.