ಯಳಂದೂರು: ತಾಲ್ಲೂಕು ದುಗ್ಗಹಟ್ಟಿ ಗ್ರಾಮದಲ್ಲಿ ಮಂಗಳವಾರ ನಸುಕಿನ ಮೂರು ಗಂಟೆ ಸಮಯದಲ್ಲಿ ಕಳ್ಳರು ₹ 1.25 ಲಕ್ಷ ಮೌಲ್ಯದ 25 ಕುರಿಯನ್ನು ಇನ್ನೋವ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.

ಗ್ರಾಮದ ಮಹದೇವಸ್ವಾಮಿ ಜೀವನ ನಿರ್ವಹಣೆಗೆ 50 ಕುರಿಗಳನ್ನು ಸಾಕಿದ್ದರು. ಮನೆಗೆ ಹೊಂದಿಕೊಂಡ ಶೆಡ್‌ನಲ್ಲಿ ಕಟ್ಟಿದ್ದರು. ಮೂರು ಗಂಟೆ ಸಮಯದಲ್ಲಿ ಊರೊಳಗೆ ನುಗ್ಗಿರುವ ಕಳ್ಳರು ಕುರಿಗಳನ್ನು ಕಾರಿಗೆ ತುಂಬಿದ್ದಾರೆ. ಮಾಲೀಕರು ಕುರಿಗಳ ಶಬ್ದದಿಂದ ಎಚ್ಚರಗೊಂಡು ಹತ್ತಿರ ತೆರಳಿದಾಗ ಕಳ್ಳರು ವಾಹನ ಚಲಾಯಿಸಿಕೊಂಡು ಹೊರಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದರು.

ದೂರು ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ವಿವಿಧ ಭಾಗಗಳ ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿ, ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ಕಳ್ಳರನ್ನು ಅತಿ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್‌ಐ ಚಂದ್ರಹಾಸನಾಯಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.