ಯಳಂದೂರು:ಮನುಕುಲಕ್ಕೆ ಜಲ ಜೀವನಾಧಾರ. ಕಲಿಯುವ ಮಕ್ಕಳ ಪಾಲಿಗೆ ಪರಿಶುದ್ಧ ನೀರಿನ ಸೇವನೆಹಿತಕರ. ಹಾಗಾಗಿ, ಶಾಲಾ ಸಮಯದಲ್ಲಿ ನೀರು ಕುಡಿಯುವುದನ್ನು ನೆನಪಿಸಲು ಕೇರಳ ಸರ್ಕಾರಅಲ್ಲಿನ ಶಾಲೆಗಳಲ್ಲಿ ‘ನೀರಿನ ಗಂಟೆ’ ಅಳವಡಿಸಿದೆ.

ಇದೇ ಮಾದರಿಯಲ್ಲಿ ರಾಜ್ಯದಾದ್ಯಂತ ಶಾಲೆಗಳಲ್ಲಿ ಬೋಧಕರು ನೀರಿನ ಗಂಟೆ ಅಳವಡಿಸಲುಮುಂದಾಗಿದ್ದಾರೆ. ಅಗರ ಹೋಬಳಿಯ ಬನ್ನಿಸಾರಿಗೆ ಗ್ರಾಮದ ಸರ್ಕಾರಿ ಶಾಲೆ ಈ ವ್ಯವಸ್ಥೆ ಅಳವಡಿಸಿಕೊಂಡಿದೆ. ಜಿಲ್ಲೆಯಲ್ಲಿ ಈ ನೀರಿನ ಗಂಟೆ ಅಳವಡಿಸಿದ ಮೊದಲ ಸರ್ಕಾರಿ ಶಾಲೆ ಇದು.

‘ನಮ್ಮ ಶಾಲೆಯಲ್ಲಿ 100 ಮಕ್ಕಳು ಇದ್ದಾರೆ. ಊಟದ ಸಮಯದಲ್ಲಿ ಮಾತ್ರ ಇವರು ನೀರುಕುಡಿಯುತ್ತಿದ್ದರು. ಈಗ ಪ್ರತಿದಿನ ಬೆಳಿಗ್ಗೆ 11, ಮಧ್ಯಾಹ್ನ 2.30 ಹಾಗೂ ಸಂಜೆ4 ಗಂಟೆಗೆ ನೀರಿನ ಗಂಟೆ ಮೊಳಗಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳು ನೀರು ಕುಡಿಯುತ್ತಾರೆ. ಬೇಸಿಗೆಯಲ್ಲಿ 4 ಬಾರಿ ಗಂಟೆ ಬಾರಿಸಲಾಗುತ್ತದೆ’ ಎಂದು ಮುಖ್ಯಶಿಕ್ಷಕಿ ಜಯಮ್ಮ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರುಕೇರಳದಲ್ಲಿ ಜಾರಿ ಮಾಡಲಾಗಿದ್ದ ಪದ್ಧತಿಯನ್ನು ಕರ್ನಾಟಕದಲ್ಲೂ ಜಾರಿ ಮಾಡುವ ಚಿಂತನೆ ಇದೆ ಎಂದು ಟ್ವೀಟರ್ನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ, ಶಾಲಾ ಸಿಬ್ಬಂದಿ ಚರ್ಚಿಸಿ ನೀರಿನಗಂಟೆ ಅಳವಡಿಸಿದ್ದಾರೆ.

‘ಕಲುಷಿತ ನೀರಿನಿಂದವಾಂತಿ, ಭೇದಿ, ಕೆಮ್ಮು, ನೆಗಡಿ, ಗಂಟಲು ನೋವು, ಜ್ವರದಂತಹ ಸಾಮಾನ್ಯ ಕಾಯಿಲೆಗಳು ಬರಬಹುದು. ಹಾಗಾಗಿ, ಕುದಿಸಿ ಆರಿಸಿದ ನೀರನ್ನು ಮಕ್ಕಳುತರುವಂತೆ ಪ್ರೇರೇಪಿಸಲಾಗಿದೆ. ಉತ್ತಮ ಆರೋಗ್ಯ ಮತ್ತು ನೀರನ್ನು ಸದಾಬಾಟಲಿಯಲ್ಲಿಟ್ಟು ಬೇಕೆಂದಾಗ ಸೇವಿಸುವ ಹವ್ಯಾಸ ಬೆಳೆಸುವುದರ ಉದ್ದೇಶವೂ ಇದರಲ್ಲಿಸೇರಿದೆ’ ಎಂದು ವಿಜ್ಞಾನ ಶಿಕ್ಷಕ ಮಹೇಶ್ ಹೇಳಿದರು.

ನೆರವು:ಕೃಷಿಕರು ಮತ್ತು ಶ್ರಮಿಕರ ಮಕ್ಕಳೇ ಇಲ್ಲಿ ಹೆಚ್ಚು ಇದ್ದಾರೆ. 1ರಿಂದ 8ನೇ ತರಗತಿಯ 100ಮಕ್ಕಳು ಕಲಿಯುತ್ತಿದ್ದಾರೆ. ಆಟದ ಮೈದಾನಕ್ಕೆ ₹ 45 ಸಾವಿರ ಮೊತ್ತವನ್ನು ಎಸ್ಡಿಎಂಸಿಮತ್ತು ಗ್ರಾಮಸ್ಥರು ಒದಗಿಸಿದ್ದಾರೆ. ಪ್ರವಾಸ, ಶಾಲಾ ವಾರ್ಷಿಕೋತ್ಸವ ಆಚರಣೆಗೆಪೋಷಕರ ಬೆಂಬಲವೂ ಇದೆ. ನೀರಿನ ಫಿಲ್ಟರ್, ಮೈಕ್ ಮತ್ತು ಪ್ರೊಜೆಕ್ಟರ್ ಒದಗಿಸಲುದಾನಿಗಳು ಮುಂದೆ ಬಂದಿದ್ದಾರೆ.

‘ರಾಜ್ಯದಲ್ಲಿ ನಾರಾಯಣಪುರ ಹಾಗೂ ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ ಈಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಇದನ್ನು ಮನಗಂಡು ನಮ್ಮ ಮಕ್ಕಳಿಗೂ ಈ ಪದ್ಧತಿಪರಿಚಯಿಸಲು ಶಿಕ್ಷಣ ತಜ್ಞರಿಂದ ಮಾಹಿತಿ ಪಡೆದು ಕಾರ್ಯೋನ್ಮುಖರಾದೆವು’ ಎಂದುಶಿಕ್ಷಕರಾದ ಸೌಮ್ಮ, ಉಷಾ, ವಿಜಯ ಮತ್ತು ಚಾಮರಾಜು ತಿಳಿಸಿದರು.

ಕುಡಿಯುವುದಕ್ಕೂ ಮುನ್ನ ಹೀಗೆ ಮಾಡಿ
ನೀರನ್ನು ಆರೋಗ್ಯ ವರ್ಧಕವಾಗಿಸಲು 10 ನಿಮಿಷ ಕುದಿಸಬೇಕು. ಇದರಿಂದ ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ಷಣೆ ಪಡೆಯಬಹುದು. ಚಳಿಗಾಲದಲ್ಲಿ ಶುಂಠಿ ಹಾಕಿ ಕುದಿಸುವುದರಿಂದ ಕಫಉಂಟಾಗುವುದಿಲ್ಲ. ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಆಹಾರಜೀರ್ಣವಾಗಲೂ ನೀರು ಸಹಕಾರಿ ಎಂದು ಹೇಳುತ್ತಾರೆ ವೈದ್ಯರು.

‘ಗಂಟಲು ನೋವು, ಉಬ್ಬಸ ಇದ್ದಾಗ ಬಿಸಿ ನೀರು ಕುಡಿದರೆ ಒಳ್ಳೆಯದು. ಹೊರಗೆ ನೀರುಕುಡಿಯಬೇಕಾದ ಸಂದರ್ಭ ಬಂದಾಗ ಆದಷ್ಟೂ ಎಚ್ಚರಿಕೆಯಿಂದ ಇರಬೇಕು. ಮಕ್ಕಳು ಪ್ರವಾಸ ಮತ್ತುಸುತ್ತಾಟದಲ್ಲಿ ನೀರಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಉತ್ತಮ’ ಎಂದುಸಲಹೆ ನೀಡುತ್ತಾರೆ ಅಗರ–ಮಾಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅರುಣ್ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.