ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಚರ್ಮ, ಎಲುಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ತಾಲ್ಲೂಕಿನ ಗುಂಡಾಲ್ ಜಲಾಶಯದ ಬಳಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ಹನೂರು ತಾಲ್ಲೂಕಿನ ನಲ್ಲಿಕತ್ರಿ ಗ್ರಾಮದ ಮಹಾದೇವ, ಕುಮಾರ್, ಗೊಂಬೆಗಲ್ಲು ಗ್ರಾಮದ ಮಹದೇವ, ರಂಗಸ್ವಾಮಿ ಎಂಬುವವರನ್ನು ಬಂಧಿಸಿದ್ದಾರೆ. ನಾಲ್ವರು ಕೂಡ ಸೋಲಿಗ ಸಮುದಾಯದವರು.

ಬಂಧಿತರಿಂದ ಒಂದು ಹುಲಿಯ ಮೂಳೆಗಳು, ನಾಲ್ಕು ಉಗುರುಗಳು, ಚಿರತೆಯ ಎರಡು ಉಗುರುಗಳು, ಎರಡು ಜಿಂಕೆ ಚರ್ಮ, ಎರಡು ಕಾಡುಕುರಿ ಚರ್ಮ, ಕಡವೆಯ ಚರ್ಮ, ಸೀಳು ನಾಯಿ ಚರ್ಮ ಹಾಗೂ ಮೂಳೆಗಳು, ಎರಡು ಹಾರುವ ಅಳಿಲಿನ ಚರ್ಮ ಸೇರಿದಂತೆಎರಡು ಬೈಕ್ಗಳನ್ನುವಶಪಡಿಸಿಕೊಳ್ಳಲಾಗಿದೆ.

ಮಲೆಮಹದೇಶ್ವರ ವನ್ಯಧಾಮ, ಬಿಆರ್ಟಿ ಹುಲಿಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಧಾಮದ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.