ಯಳಂದೂರು: ತಾಲ್ಲೂಕಿನ ಬಹುಭಾಗ ಈ ಬಾರಿ ಕಬಿನಿ ಹರಿದಿದ್ದು ಜಲಾನಯನ ಪ್ರದೇಶವಾಗಿ ಮಾರ್ಪಟ್ಟಿದೆ. ಕಬಿನಿ ಹರಿದ ಭೂಮಿಯಲ್ಲಿ ಹಸಿರಿನ ಮುದ್ರೆ ಒತ್ತಿದಂತಾಗಿದ್ದು ಭತ್ತ, ರಾಗಿ ಮತ್ತಿತರ ಬೆಳೆಗಳು ತೊನೆದಾಡುತ್ತಿವೆ. ಈ ಬಾರಿ ರೈತರು ಉತ್ತಮ ಇಳುವರಿ ಕೈಸೇರುವ ನಿರೀಕ್ಷೆಯಲ್ಲಿದ್ದಾರೆ.

ಕಬಿನಿ ಅಣೆಕಟ್ಟೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ನಿರ್ಮಾಣ ಮಾಡಲಾಗಿದ್ದು ಕೇರಳದ ವೈನಾಡು ಸುತ್ತಮುತ್ತ ಮಳೆ ಸುರಿದರೆ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತದೆ. ಕಬಿನಿ ಜಲಾಶಯದಿಂದ ಕಾಲುವೆ ಮೂಲಕ ಹರಿಯುವ ನೀರು ನಂಜನಗೂಡು ಮೂಲಕ ತಾಲ್ಲೂಕು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಈ ಬಾರಿ ಉತ್ತಮ ಮಳೆಯಾಗಿದ್ದು ನಾಲೆಗಳಿಂದ ನೀರು ಬಿಟ್ಟಿರುವ ಪರಿಣಾಮ ಅಚ್ಚುಕಟ್ಟು ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಹಸಿರಿನ ವಾತಾವರಣ ಸೃಷ್ಠಿಸುತ್ತದೆ. ಸಾವಿರಾರು ಹೆಕ್ಟೇರ್ ಸಾಗುವಳಿ ಭೂಮಿಯನ್ನು ಒಳಗೊಂಡಿರುವ ಜಿಲ್ಲೆಯ 3 ತಾಲ್ಲೂಕುಗಳಲ್ಲೂ ಕಬಿನಿ ಹಸಿರ ಹಾಸು ಸೃಷ್ಟಿಸಿದೆ.

ಮಳೆ ಬರಲಿಲ್ಲ: ಕಬಿನಿ ಕೈ ಬಿಡಲಿಲ್ಲ:

ಪ್ರಸಕ್ತ ವರ್ಷದಲ್ಲಿ ತಾಲ್ಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಭತ್ತ , 1 ಸಾವಿರ ಹೆಕ್ಟೇರ್ ರಾಗಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಳು ಸೇರಿ 2 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕಬಿನಿ ಕಾಲುವೆಯಿಂದ ಹರಿಯುವ ನೀರು ಒಟ್ಟಾರೆ 6 ಸಾವಿರ ಹೆಕ್ಟೇರ್ ಭೂಮಿಯ ಬೆಳೆಯನ್ನು ಪೊರೆಯುತ್ತದೆ.

ಕೊಳವೆಬಾವಿ ಹಾಗೂ ಕೆರೆಗಳ ಮೂಲಕ 4 ಸಾವಿರ ಹೆಕ್ಟೇರ್ ಸಾಗುವಳಿ ಪ್ರದೇಶಕ್ಕೆ ನೀರು ಉಣಿಸಲಾಗುತ್ತದೆ. ಈ ಬಾರಿ ಮುಂಗಾರು ಹಂಗಾಮು ನಿರೀಕ್ಷಿಸಿದ ಸಮಯದಲ್ಲಿ ಸುರಿಯದೆ ಬಿತ್ತನೆಗೆ ಹಿನ್ನಡೆಯಾಗಿತ್ತು. ಆದರೆ, ಕಬಿನಿ ಡ್ಯಾಂನಿಂದ ನೀರು ಹರಿಸಿದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿಲ್ಲ. ಕಬಿನಿ ಹಿಡುವಳಿದಾರರ ಕೈಹಿಡಿಯಿತು ಎನ್ನುತ್ತಾರೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.

ಕಬಿನಿ ಯೋಜನೆಯ ಮೂಲಕ ನೀರಾವರಿಗೆ ಒಳಪಟ್ಟ ಹೊಲ, ಗದ್ದೆಗಳಲ್ಲಿ ಭತ್ತದ ಪೈರು ನಳನಳಿಸುತ್ತಿವೆ. ಕಾಲುವೆ ಸುತ್ತಮುತ್ತಲಿನ ಪ್ರದೇಶಗಳ ಕೆರೆ ಕಟ್ಟೆಗಳ ಜಲಾವರಗಳ ಒಡಲನ್ನು ಸಮೃದ್ಧಗೊಳಿಸಿದೆ. ಜನ ಮತ್ತು ಜಾನುವಾರುಗೆ ಬೇಕಾದ ಅಗತ್ಯ ನೀರು ದೊರೆತಿದೆ. ಸಕಾಲದಲ್ಲಿ ಕಬಿನಿಯ ನೀರು ಕಾಲುವೆಗಳಲ್ಲಿ ಹರಿಯಬಿಟ್ಟ ಪರಿಣಾಮ ಅಂತರ್ಜಲ ಹೆಚ್ಚಳವಾಗಿದೆ. ಮಳೆ ಋತುವಿನಲ್ಲಿ ಐದಾರು ತಿಂಗಳು ನೀರು ಹರಿಯುವುದರಿಂದ ಆಹಾರ ಬೆಳೆಗಳ ಅಗತ್ಯತೆ ನೀಗುತ್ತದೆ ಎನ್ನುತ್ತಾರೆ ಅಗರ ಕೃಷಿಕ ಪುಟ್ಟಬಸಪ್ಪ.

ಕಣ್ಣು ಬಿಟ್ಟಲ್ಲೆಲ್ಲಾ ಹಸಿರು:

ಈ ಸಲ ಭತ್ತ ಮತ್ತು ರಾಗಿ ಗದ್ದೆಗಳು ಸೊಗಸಾಗಿ ಹಸಿರುಹೊದ್ದಿಕೊಂಡು ಕಣ್ಮನ ಸೆಳೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತಲೂ ಹಸಿರ ರಾಶಿ ಮೈದುಂಬಿಕೊಂಡಿದೆ. ರಸ್ತೆ ಮಾರ್ಗದಲ್ಲಿ ತೆರಳುವ ಪ್ರವಾಸಿಗರು ಮತ್ತು ಪರಿಸರ ಪ್ರಿಯರು ಹೊಲದ ಬದಿ ವಾಹನ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದಾರೆ. ಭತ್ತ, ರಾಗಿಯ ಪೈರು ಹಾಲು ತುಂಬಿಕೊಂಡಿದ್ದು, ಹೆಚ್ಚಿನ ಕೀಟಬಾಧೆ ಇಲ್ಲದೆ ಬೆಳೆ ಕಟಾವು ಹಂತಕ್ಕೆ ಬರುತ್ತಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಇಳಿ ಸಂಜೆ ಮತ್ತು ಮುಂಜಾನೆ ಸೂರ್ಯನ ಬೆಳಕಿನ ಕಿರಣಗಳು ಕೃಷಿಭೂಮಿಯನ್ನು ಕಂಗೊಳಿಸುವಂತೆ ಮಾಡಿವೆ. ಹಸಿರ ಸಿರಿ ಮಲೆನಾಡನ್ನು ನಾಚಿಸುವಂತಿದೆ ಎನ್ನುತ್ತಾರೆ ಮಾಂಬಳ್ಳಿ ಕೃಷಿಕ ನಾಗಪ್ಪ.

ಕಾಳುಕಟ್ಟಿದ ಹಂತದಲ್ಲಿ ಭತ್ತದ ತೆನೆ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರು ಮಲೆನಾಡಿನ ವಾತಾವರಣ ಸೃಷ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.