ಬಾಗೇಪಲ್ಲಿ: ‘ಜಗತ್ತಿಗೆ ವಿಶ್ವಶಾಂತಿ ಸಂಕೇತ ಮತ್ತು ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ ಸಂತ ವಿವೇಕಾನಂದರ ಯುವಕ, ಯುವತಿಯರು ರೂಢಿಸಿಕೊಳ್ಳಬೇಕು’ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥರೆಡ್ಡಿ ತಿಳಿಸಿದರು.

ಪಟ್ಟಣದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಇಡೀ ಜಗತ್ತಿಗೆ ಭಾರತದ ಸಂಸ್ಕೃತಿ, ಆಧ್ಯಾತ್ಮದ ಬಗ್ಗೆ ವಿವೇಕಾನಂದರು ಸಾರಿ ತಿಳಿಸಿದ್ದಾರೆ. ಭಾರತದ ಸಂಸ್ಕೃತಿ ಇತರೆ ದೇಶಗಳಿಗಿಂತ ಭಿನ್ನವಾಗಿದೆ. ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಆರಾಧಿಸುತ್ತಾರೆ. ಇಂತಹ ಅದ್ಭುತ ಸಂಸ್ಕೃತಿಯನ್ನು ಯುವಕ, ಯುವತಿಯರು ರೂಢಿಸಿಕೊಳ್ಳಬೇಕು. ವಿವೇಕಾನಂದ ಮೌಢ್ಯಾಚರಣೆ ಹಾಗೂ ಮೂಢನಂಬಿಕೆಗಳ ವಿರುದ್ಧ ಹೋರಾಡಿದ್ದಾರೆ’ ಎಂದರು.

ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಸೋಮಶೇಖರ್ ಮಾತನಾಡಿ, ‘ಸ್ವಾಮಿ ವಿವೇಕಾನಂದರು ಸಂತ ಆಗಿದ್ದರೂ, ಯುವಕರಲ್ಲಿ ಚೈತನ್ಯ ಮತ್ತು ಸ್ಫೂರ್ತಿ ತುಂಬಿದ್ದರು. ಯುವಕ, ಯುವತಿಯರಿಗೆ ಏಳಿ, ಏದ್ದೇಳಿ, ಗುರಿ ಮುಟ್ಟುವವರಿಗೆ ನಿಲ್ಲದಿರಿ ಎಂಬ ಸಂದೇಶ ನೀಡಿದ್ದಾರೆ. ಅದರಂತೆ ಪದ್ಮಭೂಷಣ ಡಾ.ಎಚ್. ನರಸಿಂಹಯ್ಯ ಅವರು ಪ್ರಶ್ನಿಸದೇ ಒಪ್ಪಬೇಡಿ ಎಂಬುದನ್ನು ಹೇಳಿಕೊಟ್ಟಿದ್ದಾರೆ’ ಎಂದು ಹೇಳಿದರು.

ನಗರ ಹೊರವರ್ತುಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ. ಮುನಿರಾಜು ಅವರು ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಬ್ಯಾಗು ಮತ್ತು ಪುಸ್ತಕ ವಿತರಿಸಿದರು.

ನ್ಯಾಷನಲ್ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಇಮ್ತಿಯಾಜ್ ಅಹಮದ್ ಮುಬೀನ್, ಗ್ರಂಥಪಾಲಕ ಟಿ.ಎನ್. ಜಯರಾಮರೆಡ್ಡಿ, ನ್ಯಾಷನಲ್ ಪಿಯು ಕಾಲೇಜಿನ ಉಪನ್ಯಾಸಕ ವೆಂಕಟೇಶ್ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ಆರ್. ಪ್ರತಾಪ್, ರಾಘವೇಂದ್ರ, ಪುರಸಭಾ ಸದಸ್ಯ ಎ. ನರಸಿಂಹಮೂರ್ತಿ, ಕೆಡಿಪಿ ಸದಸ್ಯ ವೆಂಕಟೇಶ್, ತಾ. ಪಂ ಮಾಜಿ ಸದಸ್ಯ ಸುಧಾಕರರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.