ಆಟೋಗಳ ಉಪಟಳ ಹೆಚ್ಚಿದೆ. ಏನಾದರೂ ಹೇಳಲು ಹೋದರೆ ಉಡಾಫೆ ಮಾಡುತ್ತಾರೆ. ಇಡೀ ಪಟ್ಟಣವೇ ಆಟೋ ನಿಲ್ದಾಣವಾಗಿ ಮಾರ್ಪಟ್ಟಿದೆ. ವಯೋವೃದ್ಧರು ರಸ್ತೆಯ ಮೇಲೆ ಓಡಾಡುವುದೇ ಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಗಂಗಪ್ಪ, ಸ್ಥಳೀಯ ನಿವಾಸಿ
ಕೆಲ ಆಟೋಗಳ ಚಾಲಕರು ಮನ ಬಂದಂತೆ ವರ್ತಿಸುತ್ತಾರೆ. ಪ್ರಯಾಣಿಕರಿಗಾಗಲೀ, ಸಾರ್ವಜನಿಕರಿಗಾಗಲೀ ರಕ್ಷಣೆಯೇ ಇಲ್ಲದಂತಾಗಿದೆ'
ಸೋಮಶೇಖರ್, ಎಸ್‍ಎಫ್‍ಐ ಜಿಲ್ಲಾ ಮುಖಂಡ
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ, ಅಡ್ಡಾದಿಡ್ಡಿ ಚಾಲನೆ, ಎಲ್ಲೆಂದರಲ್ಲಿ ವಾಹನ ನಿಲುಗಡೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸಭೆಗಳಲ್ಲಿ ತಿಳಿಸಲಾಗುವುದು.
ಪೈಪಾಳ್ಯರವಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಆಟೋಗಳ ಚಾಲಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು