ಚಿಂತಾಮಣಿ: ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಕಳ್ಳತನ ಪ್ರಕರಣ ನಾಗರಿಕರನ್ನು ಬೆಚ್ಚಿಬೀಳಿಸಿದೆ. ನಗರದ ಸೊಣ್ಣಶೆಟ್ಟಹಳ್ಳಿ ರಸ್ತೆ ಮುಂದೆ ವ್ಯಕ್ತಿಯೊಬ್ಬರು ಕಾರನ್ನು ನಿಲ್ಲಿಸಿದ್ದರು. ಅವರು ಬ್ಯಾಂಕ್ನಲ್ಲಿ ₹5 ಲಕ್ಷ ಡ್ರಾ ಮಾಡಿಕೊಂಡು ಕಾರಿನಲ್ಲಿ ಇಟ್ಟಿದ್ದರು. ದೇವರ ದರ್ಶನ ಮಾಡಿಕೊಂಡು ಹೊರಗಡೆ ಬರುವಷ್ಟರಲ್ಲಿ ಕಳ್ಳರು ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿ ಪರಾರಿಯಾಗಿದ್ದರು.

ನಗರದ ಕೋಲಾರ ರಸ್ತೆಯ ಹೋಟೆಲ್ ಒಂದರ ಮುಂದೆ ವ್ಯಾಪಾರಿಯೊಬ್ಬರು ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು. ಕಾರಿನಲ್ಲಿ ₹3 ಲಕ್ಷ ಇಟ್ಟಿದ್ದರು. ಹೋಟೆಲ್ನಿಂದ ಹೊರಬಂದಾಗ ಆಘಾತ ಕಾದಿತ್ತು. ಕಳ್ಳರು ಕಾರಿನಲ್ಲಿದ್ದ ಹಣ ದೋಚಿದ್ದರು.

ಪೊಲೀಸರು ಎರಡು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಬೇಧಿಸಲು ಸಹಕಾರಿಯಾಗಿದ್ದು ಕಾರಿನ ಕ್ಯಾಮೆರಾಗಳಲ್ಲಿ ದೊರೆತಿದ್ದ ಫೂಟೇಜ್ಗಳು. ಈ ಪ್ರಕರಣಗಳು ಸಿ.ಸಿ ಕ್ಯಾಮೆರಾದ ಮಹತ್ವದ ಕುರಿತು ಜಾಗೃತಿ ಮೂಡಿಸಿವೆ.

ನಗರದಲ್ಲಿ ನಡೆಯುವ ಕಳ್ಳತನ, ಕೊಲೆ, ದರೋಡೆ ಮೊದಲಾದ ಅಪರಾಧ ಪ್ರಕರಣ ಪತ್ತೆ ಹಚ್ಚಲು ಅತ್ಯಾಧುನಿಕ ಸಿ.ಸಿ ಟಿವಿ ಕ್ಯಾಮೆರಾಗಳು ಪೊಲೀಸರಿಗೆ ಸಹಕಾರಿಯಾಗುತ್ತವೆ. ವಾಹನ ಸವಾರರ ಸುಗಮ ಸಂಚಾರಕ್ಕೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟ್ರಾಫಿಕ್ ಸಿಗ್ನಲ್ ನೆರವಾಗುತ್ತವೆ. ಈ ಎರಡು ಸೌಲಭ್ಯದ ಕೊರತೆ ಕಾಡುತ್ತಿವೆ.

ನಗರದ ಪ್ರಮುಖ ವೃತ್ತಗಳಲ್ಲಿ 54 ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳಲ್ಲಿ ಕೆಲವು ಕೆಟ್ಟುನಿಂತಿವೆ. 3 ವರ್ಷದ ಹಿಂದೆ ಅಳವಡಿಸಿರುವ ಕ್ಯಾಮೆರಾಗಳ ತಂತ್ರಜ್ಞಾನ ಹಳೆಯದಾಗಿದೆ.

ನಗರದ ಬೆಂಗಳೂರು ವೃತ್ತ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತದಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಟ್ರಾಫಿಕ್ ಸಿಗ್ನಲ್ ಇಲ್ಲ. ರಸ್ತೆಗಳು ಕಿರಿದಾಗಿರುವ ಕಡೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಎಲ್ಲ ಕಡೆ ಸಿಗ್ನಲ್ ಇಲ್ಲ. ಇರುವ ಕಡೆ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ.

ಕೊಲೆ, ಗಲಭೆ, ಕಳ್ಳತನ, ದರೋಡೆ ಅಪಘಾತ ಹಾಗೂ ಇತರೆ ಕೃತ್ಯಗಳನ್ನು ಪತ್ತೆ ಮಾಡಲು ಮಾಹಿತಿ ಸಂಗ್ರಹಿಸಲು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಪೊಲೀಸರಿಗೆ ನೆರವಾಗುತ್ತಿವೆ. ನಗರದ ವಿವಿಧ ಭಾಗಗಳಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಅವಶ್ಯಕ ಎಂದು ಇನ್ಸ್ಪೆಕ್ಟರ್ ವಿಜಿಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಾರಾಟಕ್ಕೆ ಸರಕು ಹಾಗೂ ಕೊಳ್ಳುವ ವ್ಯಾಪಾರಿಗಳು ಬರುತ್ತಾರೆ. ಟೊಮೆಟೊ ಮಾರುಕಟ್ಟೆ ಪ್ರತಿನಿತ್ಯ ದೊಡ್ಡಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತದೆ. ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತದೆ. ಶನಿವಾರ ರಾತ್ರಿಯೇ ಸಂತೆ ಜಮಾವಣೆಗೊಳ್ಳುತ್ತದೆ. ಭಾನುವಾರ ನಸುಕಿನಲ್ಲೇ ವ್ಯಾಪಾರ ಶುರುವಾಗುತ್ತದೆ. ಕುರಿ-ಮೇಕೆ, ಹಸು ಸೇರಿದಂತೆ ಜಾನುವಾರುಗಳ ಸಂತೆ ನಡೆಯುತ್ತದೆ. ಇಲ್ಲಿ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.

ನಗರದಲ್ಲಿ ಮನೆಕಳ್ಳತನ, ಸರಗಳ್ಳತನ, ಅಂಗಡಿಗಳಿಗೆ ವ್ಯಾಪಾರಿಗಳ ಸೋಗಿನಲ್ಲಿ ನುಗ್ಗಿ ಕ್ಯಾಷ್ ಕೌಂಟರ್ಗಳಿಂದ ಹಣ ಎಗರಿಸುವುದು, ಆಭರಣಗಳನ್ನು ಕದಿಯುವುದು, ಕಾರುಗಳಲ್ಲಿ ಇಟ್ಟಿರುವ ಹಣ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಕದಿಯುವ ಪ್ರಕರಣ ಹೆಚ್ಚಾಗುತ್ತಿವೆ ಎನ್ನುತ್ತಾರೆ ಪೊಲೀಸರು.

ಚಿಂತಾಮಣಿ ವಿಸ್ತಾರವಾದ ನಗರವಾಗಿದೆ ಹಾಗೂ ವೇಗವಾಗಿ ಬೆಳೆಯುತ್ತಿದೆ. ನಗರದಲ್ಲಿ ಕೇವಲ ಮೂರು ವೃತ್ತಗಳಲ್ಲಿ ಮಾತ್ರ ಟ್ರಾಫಿಕ್ ಸಿಗ್ನಲ್ ಇವೆ. ತಾಲ್ಲೂಕು ಆಡಳಿತ ಭವನದ ಮುಂಭಾಗದ ವೃತ್ತ, ಗಜಾನನ ವೃತ್ತ, ಎಪಿಎಂಸಿ ಯಾರ್ಡ್ ಮುಂಭಾಗ ಮೊದಲಾದೆಡೆ ಸಿಗ್ನಲ್ ಅವಶ್ಯಕತೆ ಇದೆ.

ನಗರದ ಜೋಡಿ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಕೆಲವು ಭಾಗಗಳು ಸದಾ ಜನ, ವಾಹನಗಳಿಂದ ತುಂಬಿರುತ್ತವೆ.

ಸಂಚಾರಿ ಪೊಲೀಸ್ ಠಾಣೆ ಬೇಕು: ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿದಿನ ನೂರಾರು ವಾಹನಗಳು ನೋಂದಣಿಯಾಗುತ್ತವೆ. ವಾಹನಗಳ ದಟ್ಟಣೆ ಹಾಗೂ ಜನಸಂಖ್ಯೆ ಹೆಚ್ಚಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಠಾಣೆಯಿಂದ ಸುಗಮ ಸಂಚಾರ ನಿಯಂತ್ರಣ ಕಷ್ಟಸಾಧ್ಯ. ನಗರದಲ್ಲಿ ಪ್ರತ್ಯೇಕ ಸಂಚಾರಿ ಪೊಲೀಸ್ ಠಾಣೆ ಆರಂಭಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ ಸಾಕಾರಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.