ಬಾಗೇಪಲ್ಲಿ: ಪಟ್ಟಣದಲ್ಲಿ ಅಂಗೈಯಷ್ಟು ಅಗಲ ಇರುವ ವೀರಣ್ಣ ಇಡ್ಲಿಗಳೆಂದರೆ ಅಚ್ಚುಮೆಚ್ಚು. ಕಿರಿಯರು, ಹಿರಿಯರು ಸೇರಿದಂತೆ ಅಧಿಕಾರಿ ವರ್ಗ ಸ್ಥಳದಲ್ಲಿಯೇ ಸೇವಿಸಿ, ಕುಟುಂಬದ ಮನೆ ಮಂದಿಗೆಲ್ಲಾ ತೆಗೆದುಕೊಂಡುಹೋಗುತ್ತಾರೆ. ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಪಟ್ಟಣದ ಮೂಲತಃ ಯರ್ರಕಾಲುವೆಯ ನಿವಾಸಿ ವೀರಣ್ಣ ಕಳೆದ 40 ವರ್ಷಗಳ ಹಿಂದೆ ತಾಯಿ ಮನೆಯಲ್ಲಿ ಇಡ್ಲಿ ಮಾಡಿಕೊಡುತ್ತಿದ್ದರು. ಆಗ 7ನೇ ತರಗತಿಯ ಹುಡುಗ ವೀರಣ್ಣ, ಇಡೀ ಪಟ್ಟಣದಲ್ಲಿ ಮನೆ ಮನೆಗೆ ಹಾಗೂ ಕಚೇರಿಗಳಿಗೆ ಹೋಗಿ ಇಡ್ಲಿ ಮಾರಾಟ ಮಾಡುತ್ತಿದ್ದರು. ತಾಯಿ ಜೊತೆ ಇಡ್ಲಿ ಮಾಡುವ ಶೈಲಿಯನ್ನು ವೀರಣ್ಣ ಕಲಿತಿದ್ದಾರೆ.

ವೀರಣ್ಣ ಅವರು ಪಟ್ಟಣದ ಗೀತಾಮಂದಿರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದರು. ನಂತರ ಪಟ್ಟಣದ ಟಿ.ಬಿ.ಕ್ರಾಸ್ನಲ್ಲಿ, ಮುಖ್ಯರಸ್ತೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರಾಟ ಮಾಡಿತ್ತಿದ್ದರು.

ವೀರಣ್ಣ ಪತ್ನಿ ಕೆ.ಮಮತ ಅವರು ಸಹ ಇಡ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಅವಧಿಯಲ್ಲಿ ವ್ಯಾಪಾರ ಬಂದ್ ಆಗಿತ್ತು. ನಂತರ 5 ವರ್ಷಗಳಿಂದ ಸ್ವತಃ ಮನೆಯ ಯರ್ರಕಾಲುವೆಯ ಪಕ್ಕದಲ್ಲಿ ಅಂಗಡಿಯೊಂದರಲ್ಲಿ ಇದೀಗ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಇಡ್ಲಿಗಳು ಬಹಳ ಮೃದುವಾಗಿದೆ. ಇದರ ಜೊತೆಗೆ ಕಡಲೆಯಿಂದ ತಯಾರಿಸುವ ಚಟ್ನಿ ನೀಡುತ್ತಾರೆ.

ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿ ವರ್ಗದವರು, ಕೃಷಿಕೂಲಿಕಾರ್ಮಿಕರು ಸೇರಿದಂತೆ ಜನರು ಇಡ್ಲಿ ಸೇವಿಸಲು ವೀರಣ್ಣ ಹೋಟೆಲ್ ಮುಂದೆ ಜಮಾಯಿಸುತ್ತಾರೆ. ಇಡ್ಲಿ ಜೊತೆಗೆ ಟೊಮೆಟೊ ರೈಸ್ ಬಾತ್, ಪಲಾವ್, ವಡೆ, ಮೆಣಸಿನಕಾಯಿ ಬಜ್ಜಿ, ಪೂರಿ, ಚಿತ್ರಾನ್ನ, ದೋಸೆ ತಯಾರಿಸುತ್ತಾರೆ. ಇಡ್ಲಿ ಜೊತೆಗೆ ಇತರೆ ತಿಂಡಿಗಳಿಗೂ ಭಾರಿ ಬೇಡಿಕೆ ಇದೆ.

ಆರ್.ವೀರಣ್ಣ ಜೊತೆ ಪತ್ನಿ ಕೆ.ಮಮತ ಹಾಗೂ ಸಹಾಯಕರೊಬ್ಬರು ಇಡ್ಲಿ ತಯಾರು, ಮಾರಾಟದಲ್ಲಿ ಇದ್ದಾರೆ. ಪ್ರತಿದಿನ ವೀರಣ್ಣ ₹15 ಸಾವಿರ ಸಂಪಾದನೆ ಮಾಡುತ್ತಾರೆ. ಒಂದು ಇಡ್ಲಿ, ವಡೆಗೆ ತಲಾ ₹10ಕ್ಕೆ ಮಾರಾಟ ಮಾಡುತ್ತಿದ್ದಾರೆ.

‘ವೀರಣ್ಣ ಇಡ್ಲಿಗಳು ಎಂದರೆ ನಮಗೆ ಇಷ್ಟ, ಮೃದುವಾದ ಇಡ್ಲಿಗಳು ಬಹಳ ರುಚಿಕರವಾಗಿರುತ್ತದೆ. ಭಾನುವಾರ ಬಂತೆಂದರೆ ಇಡೀ ಕುಟುಂಬದ ಮಂದಿಯೆಲ್ಲಾ ಬೆಳಗಿನ ಉಪಹಾರಕ್ಕೆ ಇಡ್ಲಿ ಸೇವಿಸುತ್ತೇವೆ. ಅಂಗೈಯಷ್ಟಿನ 3 ಇಡ್ಲಿ ತಿಂದರೆ ಹೊಟ್ಟೆ ತುಂಬುತ್ತದೆ’ ಎಂದು ಪಟ್ಟಣದ ನಿವಾಸಿ ಸುಪ್ರಿತ್ ಹೇಳುತ್ತಾರೆ.

‘ವೀರಣ್ಣ ಇಡ್ಲಿಗಳಿಗೆ ಸೇರಿದಂತೆ ತಿಂಡಿಗಳಿಗೆ ರುಚಿ ಬರಲು ಟೇಸ್ಟಿಂಗ್ ಪೌಡರ್ ಬಳಕೆ ಮಾಡಲ್ಲ. ಇಡ್ಲಿಗಳು ಮೃದುವಾಗಿದ್ದರೆ ಮಾತ್ರ ಸೇವಿಸಬಹುದು. ಇಡ್ಲಿ, ಚಟ್ನಿ ಹಾಗೂ ತಿಂಡಿಗಳು ರುಚಿಕರ ಆಗಿರುವುದರಿಂದ ಭಾರಿ ಬೇಡಿಕೆ ಇದೆ. ಜನರಿಗೆ ಇಡ್ಲಿ ವೀರಣ್ಣ ಎಂದರೆ ಅಚ್ಚುಮೆಚ್ಚು’ ಎಂದು ಇಡ್ಲಿ ವ್ಯಾಪಾರಿ ಆರ್.ವೀರಣ್ಣ ಪತ್ನಿ ಕೆ.ಮಮತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.