ಆಕ್ಷೇಪಣೆ ಏನು?
‘ಎಂ.ಆರ್.ಸೀತಾರಾಂ ಮತ್ತು ಎಂ.ಎಲ್.ಅನಿಲ್ ಕುಮಾರ್ ನಗರಸಭೆಯ ಸದಸ್ಯರಲ್ಲ. ಇವರಿಬ್ಬರೂ ನಾಮನಿರ್ದೇಶಿತ ಸದಸ್ಯರು. ಅಂತೆಯೇ, ಭೋಗ್ಯಕ್ಕೆ ಹಾಕಿಸಿಕೊಂಡ ಮನೆಯ ವಿಳಾಸ ತೋರಿಸುವ ಮೂಲಕ ಇಲ್ಲಿನ ನಿವಾಸಿಗಳು ಎಂದು ಪ್ರತಿಪಾದಿಸಿದ್ದಾರೆ. ಆದರೆ, ಇವರು ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಗಳಲ್ಲ. ಕಾನೂನುಬಾಹಿರವಾಗಿ ಉಪವಿಭಾಗಾಧಿಕಾರಿ ಇವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಹಾಗಾಗಿ, ಸಂವಿಧಾನದ 243 (ಆರ್)(2)(ಎ)(1)ನೇ ವಿಧಿಯ ಅನುಸಾರ ಅವರಿಗೆ ಮತದಾನ ಮಾಡುವ ಹಕ್ಕಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಎಸ್.ಎನ್.ಚನ್ನಬಸಪ್ಪ ಮತ್ತು ಎಸ್.ಹೊನ್ನಪ್ಪ ವಾದ ಮಂಡಿಸಿದರು.