ಬಾಗೇಪಲ್ಲಿ: ₹3 ಕೋಟಿ ವೆಚ್ಚದಲ್ಲಿ 3 ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆಗೆ ತಾಲ್ಲೂಕಿನ ದೇವಿರೆಡ್ಡಿಪಲ್ಲಿ ಗ್ರಾಮದ ಬಳಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಈಚೆಗೆ ಭೂಮಿಪೂಜೆ ನೆರವೇರಿಸಿದರು.

ಗುಡಿಬಂಡೆ ತಾಲ್ಲೂಕಿನ ಲಕ್ಕೇನಹಳ್ಳಿ ಬಳಿ ಇರುವ ಕುಶಾವತಿಯ ನದಿಗೆ ಅಡ್ಡಲಾಗಿ ಇರುವ ಚೆಕ್ ಡ್ಯಾಂನಿಂದ 7 ಕಿ.ಮೀ ದೂರದ ದೇವಿರೆಡ್ಡಿಪಲ್ಲಿ ಗ್ರಾಮದ ಮಂಗಸಂದ್ರ ಕೆರೆ ತುಂಬಿ, ಪರಗೋಡು ಹಳೆಕೆರೆ ಹಾಗೂ ಹೊಸ ಕೆರೆಯನ್ನು ತುಂಬಿಸಲಿದೆ. 10 ಗ್ರಾಮಗಳ ಸಾವಿರಾರು ಕೃಷಿ ಭೂಮಿಗೆ ನೀರು ಲಭ್ಯವಾಗಲಿದೆ. ಕೆರೆಗಳಿಗೆ ನೀರು ತುಂಬಿಸುವುದು ಮೊದಲ ಆದ್ಯತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ರಾಜಕಾಲುವೆಯ ನಿರ್ವಹಣೆ ಇಲ್ಲದೇ, ನೀರು ಕೆರೆಗಳಿಗೆ ಹರಿಯಲು ಆಗಿರಲಿಲ್ಲ. ಈ ಬಗ್ಗೆ 8 ವರ್ಷಗಳಿಂದ ಗ್ರಾಮಸ್ಥರು ಕೆರೆ ಕಾಲುವೆ ಅಭಿವೃದ್ಧಿಪಡಿಸಲು ಅನುದಾನ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದೀಗ ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿ ಮಾಡಲಾಗಿದೆ. ಹತ್ತಾರು ಕೆರೆಗಳು ಕೋಡಿ ಹೋದರೆ 250 ಹೆಕ್ಟರ್ ಜಮೀನಿಗೆ ನೀರಾವರಿ ಸಿಗಲಿದೆ ಎಂದರು.

ತಾಲ್ಲೂಕಿನ ದೇವಿರೆಡ್ಡಿಪಲ್ಲಿ ಗ್ರಾಮಕ್ಕೆ 3 ಕಡೆಗಳಿಂದ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಜಗಜೀವನರಾಂ ಭವನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ, ಸಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಪರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಮಣಿ ಸದಾಶಿವಾರೆಡ್ಡಿ, ಉಪಾಧ್ಯಕ್ಷೆ ಅರುಣನಾಗರಾಜ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಸುನಿಲ್, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ಎಚ್.ವಿ.ನಾಗರಾಜ್, ಡಿ.ಎನ್.ಸುಧಾಕರೆಡ್ಡಿ, ಶಿವಪ್ಪ, ಡಿ.ಎನ್.ಮದ್ದಿಲೇಟಿರೆಡ್ಡಿ, ನರಸರಾಮರೆಡ್ಡಿ, ಬಿ.ನರಸಿಂಹರೆಡ್ಡಿ, ನಾಗರಾಜರೆಡ್ಡಿ, ನರಸಿಂಹಪ್ಪ, ಲಕ್ಷ್ಮಿನಾರಾಯಣ, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.