ಅಭಿಪ್ರಾಯಗಳು
' ಕಾಮಗಾರಿಗಳು ಬಹುತೇಕವಾಗಿ ಪೂರ್ಣಗೊಂಡಿದ್ದು ಪ್ರಯೋಗಾರ್ಥವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರಬೇಕಾಗಿದೆ. ಇದರ ಬಗ್ಗೆ ವಿಚಾರ ಮಾಡಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ತಿಳಿಸುತ್ತೇವೆ. ಶೀಘ್ರದಲ್ಲೇ ಮೇಲ್ಸೇತುವೆ ಕಾಮಗಾರಿಯ ಲೋಕಾರ್ಪಣೆ ಮಾಡಿ ನಗರ ಹಾಗೂ ತಾಲ್ಲೂಕಿನ ಜನತೆಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು '- ಕೆ.ಎಚ್.ಪುಟ್ಟಸ್ವಾಮಿಗೌಡ, ಶಾಸಕರು, ಗೌರಿಬಿದನೂರು.
' ಕಾಮಗಾರಿ ಕಾರ್ಯ ಆರಂಭವಾದಾಗಿನಿಂದಲೂ ಈ ಭಾಗದ ಜನತೆಗೆ ಸಂಕಷ್ಟ ತಪ್ಪಿದ್ದಲ್ಲ. ಕನಿಷ್ಟ ಕಾಮಗಾರಿ ಮುಗಿಯುವವರೆಗೂ ಗುತ್ತಿಗೆದಾರರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ನಾಗರೀಕರಿಗೆ ತಿಳಿಸಬೇಕಾಗಿತ್ತು. ಆದರೆ ಅಪೂರ್ಣಗೊಂಡ ಮೇಲ್ಸೇತುವೆಯಲ್ಲಿ ಈ ರೀತಿ ವಾಹನಗಳ ಸಂಚಾರ ಅವೈಜ್ಞಾನಿಕ ಮತ್ತು ಅಪಾಯವಾಗಿದೆ '- ಮಂಜುನಾಥ್, ಅರವಿಂದ ನಗರ ನಿವಾಸಿ.
' ರೈಲ್ವೆ ಮೇಲ್ಸೆತುವೆ ಕಾಮಗಾರಿಯು ಜನತೆಗೆ ಅಗತ್ಯವಾಗಿತ್ತು, ಆದರೆ ಇಷ್ಟೊಂದು ವಿಳಂಬವಾಗುವುದಾದರೆ ಈ ಹಿಂದಿನ ರೀತಿಯಲ್ಲಿಯೇ ನಾಗರೀಕರು ಸಂಚರಿಸುತ್ತಿದ್ದರು. ಅನಾವಶ್ಯಕವಾಗಿ ಸರ್ಕಾರದ ಹಣವನ್ನು ವೆಚ್ಚ ಮಾಡಿ ನಿಗಧಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ '- ಜಿ.ವಿ.ಲೋಕೇಶ್ ಗೌಡ, ಗುಂಡಾಪುರ ನಿವಾಸಿ,
' ಕಳೆದ 15 ವರ್ಷಗಳಿಂದಲೂ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದೇವೆ, ಆದರೆ ಕಳೆದ 6 ವರ್ಷದಲ್ಲಿ ಅನಿಭವಿಸಿದ ಯಾತನೆ ನಿಜಕ್ಕೂ ಸ್ಥಳೀಯ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಿದೆ. ಕಾಮಗಾರಿಯಲ್ಲಿ ಚುರುಕು ಕಾಣದ ಕಾರಣ ಅನಾವಶ್ಯಕವಾಗಿ ನಾಗರೀಕರನ್ನು ಹೈರಾಣ ಮಾಡಿದ್ದಾರೆ '- ಲಕ್ಷ್ಮಿದೇವಮ್ಮ, ಶಿಕ್ಷಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.