ಚಿಕ್ಕಮಗಳೂರು: ಅಕಾಲಿಕ ಮಳೆ ಜಿಲ್ಲೆಯ ಎಲ್ಲಾ ಕೆರೆಗಳನ್ನೂ ಭರ್ತಿ ಮಾಡಿದೆ. ಆದರೆ, ಹಿಂಗಾರು ಬಿತ್ತನೆ ಕಾರ್ಯಕ್ಕೆ ಬಿಡುವು ನೀಡಿಲ್ಲ. ಶೇ 21ರಷ್ಟು ಮಾತ್ರ ಬಿತ್ತನೆಯಾಗಿದ್ದು, ಒಟ್ಟಾರೆ ಹಿಂಗಾರು ಬಿತ್ತನೆಗೆ ಹಿನ್ನೆಡೆಯಾಗಿದೆ.

ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಅಜ್ಜಂಪುರದಲ್ಲಿ ಮುಂಗಾರು ಮತ್ತು ಹಿಂಗಾರು ಬಿತ್ತನೆಯಾಗುತ್ತದೆ. ಉಳಿದ ಮಲೆನಾಡಿನ ತಾಲ್ಲೂಕುಗಳಲ್ಲಿ ಪ್ಲಾಂಟೇಷನ್ ಬೆಳೆಗಳು ಪ್ರಮುಖವಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರಿನಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಕೂಡ ಚುರುಕಾಗಿತ್ತು. 98,300 ಹೆಕ್ಟೇರ್ನಲ್ಲಿ ಬಿತ್ತನೆ ಗುರಿಯಲ್ಲಿ 87,002 ಹೆಕ್ಟೇರ್ನಲ್ಲಿ ಬಿತ್ತನೆಯಾಗಿತ್ತು. ಗುರಿಯಲ್ಲಿ ಶೇ 88.7ರಷ್ಟು ಸಾಧನೆಯಾಗಿತ್ತು. ಕಳೆದ ವರ್ಷ 81,922 ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಸಾಧನೆ ಶೇ 82ರಷ್ಟಿತ್ತು.

ಈ ವರ್ಷ ಹಿಂಗಾರಿನಲ್ಲೂ ಉತ್ತಮ ಮಳೆಯಾಗಿದ್ದು, ಬಿತ್ತನೆ ಪ್ರಮಾಣ ಮಾತ್ರ ಕಡಿಮೆಯಾಗಿದೆ. ನಿರಂತರವಾಗಿ ಮಳೆ ಸುರಿದಿದ್ದರಿಂದ ಬಿತ್ತನೆ ಸಾಧ್ಯವಾಗಿಲ್ಲ. ಭೂಮಿಯಲ್ಲಿ ತೇವಾಂಶ ಕಡಿಮೆಯಾಗಲು ರೈತರು ಕಾದಿದ್ದಾರೆ. ವಾಡಿಕೆಯಂತೆ ಮಳೆಯಾಗಿದ್ದರೆ ಈ ವೇಳೆಗೆ 4 ಸಾವಿರ ಹೆಕ್ಟೇರ್ನಲ್ಲಾದರೂ ಬಿತ್ತನೆಯಾಗಬೇಕಿತ್ತು.

ಹಿಂಗಾರಿನಲ್ಲಿ ಹುರುಳಿ, ಜೋಳ, ಕಡಲೆ, ಅಲಸಂದೆ ಬಿತ್ತನೆ ಮಾಡಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಕಡಲೆ ಬೆಳೆಯನ್ನು ಹೆಚ್ಚಿನದಾಗಿ ಬೆಳೆಯಲಾಗುತ್ತಿದೆ. ಅಕ್ಟೋಬರ್ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಬಿತ್ತನೆ ಕುಂಠಿತವಾಗಿದ್ದು, 3,587 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ 21ರಷ್ಟು ಮಾತ್ರ ಸಾಧನೆಯಾಗಿದೆ. ಕಳೆದ ವರ್ಷ ಈ ವೇಳೆಗೆ 9,829 ಹೆಕ್ಟೇರ್ನಲ್ಲಿ ಬಿತ್ತನೆಯಾಗಿತ್ತು.

ಕಡಲೆ ಬೆಳೆ 9,750 ಹೆಕ್ಟೇರ್ನಲ್ಲಿ ಬಿತ್ತನೆಯಾಗುವ ಗುರಿ ಹೊಂದಿದ್ದು, 905 ಹೆಕ್ಟೇರ್ನಲ್ಲಷ್ಟೇ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 3,359 ಹೆಕ್ಟೇರ್ನಲ್ಲಿ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ಅಂಕಿ–ಅಂಶ ಹೇಳುತ್ತಿದೆ.

ಹಿಂಗಾರು ಬಿತ್ತನೆ ಗಣನೀಯ ಇಳಿಕೆ

ಕಡೂರು: ಮುಂಗಾರು ಮಳೆ ಉತ್ತಮವಾಗಿ ಸುರಿದು ಪ್ರಮುಖವಾದ ರಾಗಿ ಬೆಳೆ ನಿರೀಕ್ಷೆ ಮೀರಿ ಬಿತ್ತನೆಯಾಗಿತ್ತು. ನಂತರ ಮಳೆ ಪ್ರಮಾಣ ಕಡಿಮೆಯಾಗಿ ಹಿಂಗಾರು ಬೆಳೆ ಬಿತ್ತನೆಗೆ ಹಿನ್ನೆಡೆಯಾಗಿದೆ.

ಕಡೂರು ಪ್ರದೇಶದಲ್ಲಿ ಕಸಬಾ ಮತ್ತು ಹಿರೇನಲ್ಲೂರು ಹೋಬಳಿಯಲ್ಲಿ ಹೆಚ್ಚಾಗಿ ಕಡಲೆ ಬೆಳೆಯಲಾಗುತ್ತದೆ. ಕಡಲೆ ಬೆಳೆಗೆ ಒಂದೆರಡು ಬಾರಿ ಮಳೆ ಬಂದರೆ ಸಾಕು. ಕೇವಲ ಇಬ್ಬನಿಗೇ ಸೊಂಪಾಗಿ ಬೆಳೆಯುತ್ತದೆ. ಈ ವೇಳೆಗೆ ಕಡಲೆ ಬೆಳೆ ಬಿತ್ತನೆ ಬಹುತೇಕ ಮುಗಿಯಬೇಕಿತ್ತು.

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆದ ರೈತರು ಭೂಮಿ ತಯಾರಿ ನಡೆಸಿದ್ದರು. ಆದರೆ, ಆ ವೇಳೆಗೆ ಮಳೆ ಕೈಕೊಟ್ಟು ಹಿಂಗಾರು ವಿಫಲವಾಯಿತು ಎನ್ನುವಷ್ಟರಲ್ಲಿ ನಿರಂತರ ಮಳೆ ಸುರಿಯಿತು. ಇದರಿಂದಾಗಿ ಕೆಲವೆಡೆ ಕಡಲೆ ಬಿತ್ತನೆ ತಡವಾಗಿದೆ. ಮತ್ತೆ ಕೆಲವೆಡೆ ಹಿಂಗಾರು ಜೋಳ ಬಿತ್ತನೆಯಾಗಿದೆ.

ಹಿಂಗಾರು ಬೆಳೆಗಳ ಬಿತ್ತನೆ ಗುರಿ 8 ಸಾವಿರ ಹೆಕ್ಟೇರ್ ಇತ್ತು. ಆದರೆ, 2,552 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಶೇ 32 ಗುರಿ ಸಾಧನೆಯಾಗಿದೆ. ಅಲ್ಪ ಪ್ರಮಾಣದಲ್ಲಿ ಅವರೆ, ಉದ್ದು, ಮರೆಳ್ಳು ಸೇರಿ ಇತರ ಬೆಳೆಗಳ ಬಿತ್ತನೆ ಮಾಡಿದ್ದರೂ ಒಟ್ಟಾರೆ ತಾಲ್ಲೂಕಿನಲ್ಲಿ ಹಿಂಗಾರು ಬೆಳೆಗಳ ಬಿತ್ತನೆ ಗಣನೀಯವಾಗಿ ಕಡಿಮೆಯಾಗಿದೆ. ಕೆಲವರು ರಾಗಿ ಕೊಯ್ಲು ಮುಗಿದ ಕೂಡಲೇ ಭೂಮಿ ಹದ ಮಾಡಿ ಹುರುಳಿ ಬಿತ್ತನೆ ಮಾಡುತ್ತಾರೆ. ಈಗ ರಾಗಿ ಕೊಯ್ಲು ತಢವಾಗುವುದರಿಂದ ಹುರುಳಿ ಬಿತ್ತನೆ ಪ್ರಮಾಣವೂ ಕಡಿಮೆಯಾಗುವ ಸಂಭವವಿದೆ.

94.20 ಹೆಕ್ಟೇರ್ನಲ್ಲಿ ಬೆಳೆಹಾನಿ

ಮಳೆಯಿಂದ ಜಿಲ್ಲೆಯಲ್ಲಿ 94.20 ಹೆಕ್ಟೇರ್ನಲ್ಲಿ ಕೃಷಿ ಬೆಳೆಗಳು ಹಾನಿಗೀಡಾಗಿದ್ದು, ₹73.89 ಲಕ್ಷದಷ್ಟು ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. 83.50 ಹೆಕ್ಟೇರ್ನಲ್ಲಿ ಭತ್ತದ ಬೆಳೆ ಹಾನಿಗೀಡಾಗಿದೆ. ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ ತಾಲ್ಲೂಕಿನಲ್ಲಿ ಹೆಚ್ಚು ಭತ್ತದ ಬೆಳೆ ಹಾನಿಗೀಡಾಗಿದೆ. ತರೀಕೆರೆ, ಅಜ್ಜಂಪುರ ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮುಸುಕಿನ ಜೋಳ ಬೆಳೆ ಹಾನಿಗೀಡಾಗಿವೆ. ಅಕ್ಟೋಬರ್ನಲ್ಲಿ ಸುರಿದ ಮಳೆಗೆ ಎನ್.ಆರ್.ಪುರ ತಾಲ್ಲೂಕಿನಲ್ಲಿ ಮಾತ್ರ ಭತ್ತದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

2,142 ಹೆಕ್ಟೇರ್ನಲ್ಲಿ ತೋಟಗಾರಿಕೆ ಬೆಳೆಹಾನಿ

ಜಿಲ್ಲೆಯಲ್ಲಿ ಕೃಷಿ ಬೆಳೆಗಿಂತ ತೋಟಗಾರಿಕೆ ಬೆಳೆಗಳೇ ಹೆಚ್ಚಿನದಾಗಿ ಹಾನಿಯಾಗಿದ್ದು, 2,142 ಹೆಕ್ಟೇರ್ನಲ್ಲಿ ಬೆಳೆಗಳು ಹಾನಿಗೀಡಾಗಿವೆ. ಚಿಕ್ಕಮಗಳೂರು, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ತರಕಾರಿ ಬೆಳೆ, ಕಾಳು ಮೆಣಸು, ಶುಂಠಿ, ಬಾಳೆ, ಅಡಿಕೆ, ವೀಳ್ಯದೆಲೆ, ಬಟಾಣಿ, ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿದೆ. ಬೇಸಾಯ ವೆಚ್ಚದ ಪ್ರಕಾರ ರೈತರ ₹8.71 ಕೋಟಿಯಷ್ಟು ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ಎನ್ಡಿಆರ್ಫ್ ಮತ್ತು ಎಸ್ಡಿಆರ್ಎಫ್ ಪ್ರಕಾರ ಪರಿಹಾರ ಮೊತ್ತ ₹2.09 ಕೋಟಿ ಎಂದು ಅಂದಾಜಿಸಲಾಗಿದೆ. 3,425 ರೈತರು ನಷ್ಟ ಅನುಭವಿಸಿದ್ದಾರೆ.

112 ದೊಡ್ಡ ಕೆರೆಗಳು ಭರ್ತಿ

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 124 ಕೆರೆಗಳ ಪೈಕಿ 112 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಉಳಿದ 12 ಕೆರೆಗಳಲ್ಲಿ ಶೇ 50ರಿಂದ ಶೇ 99ರಷ್ಟು ನೀರಿದೆ. ಕಡೂರು, ಚಿಕ್ಕಮಗಳೂರು, ತರೀಕೆರೆ, ಎನ್.ಆರ್.ಪುರ ತಾಲ್ಲೂಕಿನಲ್ಲಿ ಹೆಚ್ಚು ಕೆರೆಗಳಿವೆ. 16,898 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಅನುಕೂಲ ಆಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಂದಾಜಿಸಿದೆ.

ಜೋಳ, ಕಡಲೆ ಬಿತ್ತನೆ ಹಿನ್ನಡೆ

ತರೀಕೆರೆ: ತಾಲೂಕಿನಲ್ಲಿ ಹಿಂಗಾರು ಮಳೆ ಅತಿಯಾಗಿ ಸುರಿದಿದ್ದರಿಂದ ಜೋಳ ಮತ್ತು ಕಡಲೆ ಬಿತ್ತನೆಗೆ ಹಿನ್ನಡೆಯಾಗಿದೆ.

ಮಳೆಯ ಪ್ರಮಾಣ ಕಡಿಮೆಯಾದರೆ ರೈತರು ಬಿತ್ತನೆಗೆ ಮುಂದಾಗಬಹುದು. ಒಂದು ವೇಳೆ ಮಳೆ ಮುಂದುವರೆದರೆ ಹಿಂಗಾರು ಬಿತ್ತನೆಗೆ ಅನಾನುಕೂಲ ಆಗಲಿದೆ. ಕೆಲವು ಭಾಗದಲ್ಲಿ ಈಗಾಗಲೇ ರೈತರು ಜೋಳ ಬಿತ್ತನೆ ಮಾಡಿದ್ದು, ಇನ್ನೂ ಕಡಲೆ ಬಿತ್ತನೆ ಮಾಡಬೇಕಾಗಿದೆ. ಮಳೆ ಕಡಿಮೆಯಾಗಲಿ ಎಂದು ರೈತರು ಕಾದಿದ್ದಾರೆ.

ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.