ನರಸಿಂಹರಾಜಪುರ: ಇಲ್ಲಿನ ಎನ್.ಆರ್.ಪುರ ಅಡ್ವೆಂಚರ್ ಆ್ಯಂಡ್ ಮೋಟರ್ಸ್ ಸ್ಫೋರ್ಟ್ಸ್ ಕ್ಲಬ್ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಸಹಕಾರದಲ್ಲಿ ಇದೇ 15ರಂದು ಮಡ್ ಟಸ್ಕರ್ಸ್ 24– 4x4 ಜೀಪ್ ರ್ಯಾಲಿ ಸ್ಪರ್ಧೆಯನ್ನು ತಾಲ್ಲೂಕಿನ ಸೀಗುವಾನಿ ಗ್ರಾಮದ ವ್ಯಾಪ್ತಿಯಲ್ಲಿರುವ ಭದ್ರಾಹಿನ್ನೀರು ಪ್ರದೇಶದಲ್ಲಿ ಆಯೋಜಿಸಿದೆ ಎಂದು ಕ್ಲಬ್ ಅಧ್ಯಕ್ಷ ಇತಿಹಾಸ್ ಖಾಂಡ್ಯ ತಿಳಿಸಿದರು.

ಗುರುವಾರ ಇಲ್ಲಿ ಜೀಪ್ ರ್ಯಾಲಿ ಸ್ಪರ್ಧೆಯ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಉಬ್ಬು, ತಗ್ಗುಗಳಿಂದ ಕೂಡಿದ ದುರ್ಗಮ ಹಾದಿಯಲ್ಲಿ ಹಾದು ಹೋಗಬೇಕಾಗಿರುವ ಈ ರ್ಯಾಲಿಯು 3 ಗುಂಪುಗಳಲ್ಲಿ ನಡೆಯಲಿದೆ. ಪ್ರತಿ ಸ್ಪರ್ಧಿ 500 ಮೀಟರ್ ದೂರ ಕ್ರಮಿಸಬೇಕು, ಮೊದಲು ತಲುಪಿದವರು ವಿಜೇತರಾಗುತ್ತಾರೆ. ಒಟ್ಟು ₹5 ಲಕ್ಷ ಬಹುಮಾನ ನಿಗದಿಪಡಿಸಲಾಗಿದೆ. ಸ್ಪರ್ಧೆಯು ಸ್ಟಾಕ್ ಪೆಟ್ರೋಲ್, ಸ್ಟಾಕ್ ಡೀಸೆಲ್, ಓಪನ್ ಕ್ಲಾಸಸ್ ಹಾಗೂ ಲೇಡಿಸ್ ಓಪನ್ ವಾಹನ ವಿಭಾಗದಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ₹50 ಸಾವಿರ, ತೃತೀಯ ₹30 ಸಾವಿರ ನಿಗದಿಪಡಿಸಲಾಗಿದೆ. ಸ್ಟಾಕ್ ಪೆಟ್ರೋಲ್ ಮತ್ತು ಸ್ಟಾಕ್ ಡಿಸೇಲ್ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ₹50 ಸಾವಿರ, ದ್ವಿತೀಯ ₹25 ಸಾವಿರ ಹಾಗೂ ತೃತೀಯ ₹15 ಸಾವಿರ, ಮಹಿಳೆಯರ ಓಪನ್ ಕ್ಲಾಸಸ್ ವಿಭಾಗದಲ್ಲಿ ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ₹5 ಸಾವಿರ ನಿಗದಿಪಡಿಸಲಾಗಿದೆ ಎಂದರು.

ಪುರುಷರ ವಿಭಾಗಕ್ಕೆ ರಾಜ್ಯದ, ಕೇರಳ, ತಮಿಳುನಾಡು ಮತ್ತಿತತರ ರಾಜ್ಯಗಳ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸುಮಾರು 70 ಸ್ಪರ್ಧಿಗಳು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಮಹಿಳಾ ವಿಭಾಗದಲ್ಲಿ 6 ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದಾರೆ ಎಂದರು.

ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ನ ಮೂಸ ಶರೀಫ್ ಮಾಹಿತಿ ನೀಡಿ, ‘ನಮ್ಮ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಿಮಾಲಯ ಪ್ರದೇಶ, ಮಧ್ಯಭಾರತ ಹಾಗೂ ದಕ್ಷಿಣ ಭಾರತದಲ್ಲಿ400ಕ್ಕೂ ಹೆಚ್ಚು ರ್ಯಾಲಿ ಆಯೋಜಿಸಲಾಗಿದೆ. 32 ವರ್ಷಗಳಲ್ಲಿ 314 ರ್ಯಾಲಿಯಲ್ಲಿ ಭಾಗವಹಿಸಿ ಏಳು ಬಾರಿ ರಾಷ್ಟ್ರ ಮಟ್ಟದ ರ್ಯಾಲಿಯಲ್ಲಿ ವಿಜಯಗಳಿಸಿದ್ದೇನೆ. ಹೆಚ್ಚಿನ ಮೊತ್ತದ ಬಹುಮಾನ ಇಟ್ಟಿದ್ದು, ಹೆಚ್ಚಿನ ಪ್ರೇಕ್ಷರನ್ನು ನಿರೀಕ್ಷಿಸಿದ್ದೇವೆ’ ಎಂದರು.

ಸ್ಪೋರ್ಟ್ಸ್ ಕ್ಲಬ್ನ ಶ್ರೀದತ್, ರಜತ್ ಗೌಡ, ದೇವಂತ್ ರಾಜ್, ರಿತಿನ್ ಪೌಲ್, ಗೌತಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.