ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನ್ ಕೀ ಬಾತ್ ಸಕಾರಾತ್ಮಕ ಶಕ್ತಿ: ಸಿ.ಟಿ.ರವಿ

Published : 29 ಸೆಪ್ಟೆಂಬರ್ 2024, 14:04 IST
Last Updated : 29 ಸೆಪ್ಟೆಂಬರ್ 2024, 14:04 IST
ಫಾಲೋ ಮಾಡಿ
Comments

ಕೊಟ್ಟಿಗೆಹಾರ: ಫಲ್ಗುಣಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಮುಖಂಡ ಪಿ.ಪಿ.ಮಲ್ಲೇಶ್ ಅವರ ನಿವಾಸದಲ್ಲಿ ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ವೀಕ್ಷಿಸಿದರು.

ಸಿ.ಟಿ.ರವಿ ಮಾತನಾಡಿ 'ಮನ್ ಕೀ ಬಾತ್ ಕೇಳುಗರು ಈ ಕಾರ್ಯಕ್ರಮದ ನಿಜವಾದ ಶಿಲ್ಪಿಗಳು. ವದಂತಿಗಳು, ನಕಾರಾತ್ಮಕ ವಿಚಾರಗಳು, ಚರ್ಚೆಗಳು ಗಮನ ಸೆಳೆಯುವಷ್ಟು ಸಕಾರಾತ್ಮಕ ವಿಚಾರಗಳು ಜನರನ್ನು ಸೆಳೆಯುವುದಿಲ್ಲ.ಆದರೆ, ಮನ್ ಕೀ ಬಾತ್ ಕಾರ್ಯಕ್ರಮ ಆ ಚಿಂತನೆಯನ್ನು ಸುಳ್ಳು ಮಾಡಿದೆ. ಜನರಿಗೆ ಸಕಾರಾತ್ಮಕ ವಿಚಾರಗಳ ಬಗ್ಗೆ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಈ ಕಾರ್ಯಕ್ರಮಕ್ಕೆ ಸಿಗುತ್ತಿರುವ ಸ್ಪಂದನೆಯೇ ಉತ್ತಮ ಸಾಕ್ಷಿಯಾಗಿದೆ'ಎಂದರು.

ಎಂ.ಕೆ ಪ್ರಾಣೇಶ್ ಮಾತನಾಡಿ 'ಮನ್‌ ಕೀ ಬಾತ್‌ ಕಾರ್ಯಕ್ರಮದ ನಂತರ ದೇಶದ ಪ್ರತಿಯೊಂದು ಭಾಗದಲ್ಲೂ ಸ್ವಚ್ಚತೆಯ ಬಗ್ಗೆ ಆಂದೋಲನದ ರೀತಿಯಲ್ಲಿ ವಿಶೇಷ ಪ್ರಯತ್ನಗಳು ನಡೆದಿವೆ’ ಎಂದರು

 ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಬಣಕಲ್ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ರತೀಶ್ ಕೂಡಹಳ್ಳಿ, ಮುಖಂಡರಾದ ಕಣಚೂರು ವಿನೋದ್, ಧನಿಕ್ ಕೋಡದಿಣ್ಣೆ, ಪರೀಕ್ಷಿತ್ ಜಾವಳಿ, ಬಡವನದಿಣ್ಣೆ ರವಿ, ಶರತ್ ಫಲ್ಗುಣಿ, ಮಲ್ಲೇಶ್, ಪ್ರಮೋದ್, ಬಿ.ಎಸ್.ಕಲ್ಲೇಶ್, ಮರ್ಕಲ್ ಲೋಕೇಶ್, ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT