ಚಿಕ್ಕಮಗಳೂರು: ಕೊವಿಡ್–19 ದೇಣಿಗೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರಸ್ತಾಪವಿರುವ ಆಡಿಯೋವನ್ನು ವ್ಯಾಟ್ಸಾಪ್ ಗ್ರೂಪ್ಗೆ ಹರಿಯಬಿಟ್ಟಿದ್ದಾರೆಂದು ನಗರದ ಬೇಲೂರು ರಸ್ತೆ ಸರ್ಕಾರಿ ಪಿಯು ಕಾಲೇಜಿನ ಜೀವವಿಜ್ಞಾನ ಉಪನ್ಯಾಸಕ ಬಿ.ಎಸ್.ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ.ಕನಗವಲ್ಲಿ ಆಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ‘ಹಲೋ ಸಿ.ಎಂ ಸಾಹೇಬ್ರೇ ಫ್ರೀ ಇದೀರದ ಕೊರೊನಾ ಪರಿಹಾರಕ್ಕೆ ಜನರ ಹತ್ರ ದುಡ್ಡು ಕೇಳ್ತಿದೀರಿ ದುಡ್ಡು ಎಲ್ಲಿದೆ ಅಂತ ಲಿಸ್ಟ್ ಇಲ್ಲಿದೆ ನೋಡಿ...’ ಆಡಿಯೋ ಕ್ಲಿಪ್ಪಿಂಗ್ ಅನ್ನು ಚಿಕ್ಕಮಗಳೂರು ಪದವಿಪೂರ್ವ ಉಪನ್ಯಾಸಕರ ಬಳಗ ವ್ಯಾಟ್ಸಾಪ್ ಗುಂಪಿಗೆ ಹರಿಯಬಿಟ್ಟಿದ್ದಾರೆ. ನಾಗರಿಕ ಸೇವಾ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದುರಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.