ನರಸಿಂಹರಾಜಪುರ: ಚಿತ್ರ ನಟ ದ್ವಾರಕೀಶ್ ನಿಧನಕ್ಕೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಂಜೆ ಅಭಿನವ ಪ್ರತಿಭಾ ವೇದಿಕೆಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಹ ನಿರ್ದೇಶಕ ಆರ್.ಸತೀಶ್ ಆಚಾರ್ ಮಾತನಾಡಿ, ‘ದ್ವಾರಕೀಶ್ ಅವರೊಂದಿಗೆ ಒಂದೆರಡು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಒಳ್ಳೆಯ ವ್ಯಕ್ತಿ. ಹಾಸ್ಯ ಪ್ರಜ್ಞೆ ಉಳ್ಳವರು, ಕ್ರಿಯಾಶೀಲ ಕಲಾವಿದ ಎಂದರು.

ಕಲಾವಿದ ಅಭಿನವ ಗಿರಿರಾಜ್ ಮಾತನಾಡಿ, ‘ದ್ವಾರಕೀಶ್ ಅವರ ಚಿತ್ರಗಳೆಂದರೆ ತುಂಬಾ ಮನರಂಜನೆ ಇರುತ್ತಿತ್ತು. ಟೆಂಟ್ ಸಿನಿಮಾದಲ್ಲಿ ನೋಡಿದ ಪ್ರಚಂಡ ಕುಳ್ಳ, ಅದೃಷ್ಟವಂತ, ಕಿಟ್ಟು ಪುಟ್ಟು ಇತರೆ ಚಿತ್ರಗಳು ನೆನಪಿನಲ್ಲಿ ಉಳಿದಿವೆ. ಅಭಿನವ ಆರ್ಕೆಸ್ಟ್ರಾದಲ್ಲಿ ಗುರು ಶಿಷ್ಯರು ಚಿತ್ರದ ದೊಡ್ಡವರೆಲ್ಲ ಜಾಣರೆಲ್ಲ ಹಾಸ್ಯ ಗೀತೆಗೆ ನೃತ್ಯ ಮಾಡುತ್ತಿದ್ದು ರಾಜ್ಯದೆಲ್ಲೆಡೆ ಹೆಸರುವಾಸಿಯಾಗಿತ್ತು ಎಂದು ನೆನಪಿಸಿಕೊಂಡರು.

ಕಲಾವಿದ ಪುರುಷೋತ್ತಮ್ ಮಾತನಾಡಿದರು. ರಕ್ತದಾನಿ ಬಳಗದ ಅರ್ಜುನ್, ಕಿರಣ್, ಜೇಸಿ ಸಂಸ್ಥೆಯ ಅಜಯನ್, ಸೌಂಡ್ಸ್ ಶಾಮಿಯಾನ ಸಂಘದ ಗೌರವಾಧ್ಯಕ್ಷ ಅರ್ಜುನ್, ಕಲಾವಿದೆ ಮಂಜುಳಾ, ಗ್ರೀಷ್ಮಾ, ಗೀತಾಂಜಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.