ನಾಯಕನಹಟ್ಟಿ: ಆರೋಗ್ಯ ರಕ್ಷಿಸುವ ಆರೋಗ್ಯ ತಾಣಗಳ ಸುತ್ತ ಸ್ವಚ್ಛತೆ ಮರೀಚಿಕೆಯಾಗಿ, ಅನಾರೋಗ್ಯಕ್ಕೆ ಆಹ್ವಾನ ನೀಡುತ್ತಿವೆ.

ಹೋಬಳಿಯಲ್ಲಿನ 48 ಹಳ್ಳಿಗಳಿಗೂ ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರವೊಂದೇ ಆಸರೆ. ಹೋಬಳಿಯ ಮುಸ್ಟಲಗುಮ್ಮಿಯಲ್ಲಿ ಪಾಥಮಿಕ ಆರೋಗ್ಯ ಕೇಂದ್ರವಿದ್ದು, ಅದರ ವ್ಯಾಪ್ತಿಯಲ್ಲಿ ಮಲ್ಲೂರಹಳ್ಳಿ, ಎನ್.ಮಹದೇವಪುರ, ಗುಂತಕೋಲಮ್ಮನಹಳ್ಳಿ, ಅಬ್ಬೇನಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ಉಪಕೇಂದ್ರಗಳಿವೆ.

ನೆಲಗೇತನಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನೇರಲಗುಂಟೆ, ಕುದಾಪುರ, ಗೌಡಗೆರೆ, ಬೋಸೆದೇವರಹಟ್ಟಿ, ಜೋಗಿಹಟ್ಟಿ ಗ್ರಾಮಗಳಲ್ಲೂ ಆರೋಗ್ಯ ಉಪಕೇಂದ್ರಗಳಿವೆ. ಆದರೆ ಮುಸ್ಟಲಗುಮ್ಮಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿದರೆ ಉಳಿದ ಆಸ್ಪತ್ರೆಗಳಲ್ಲಿ ಸ್ವಚ್ಛತೆ ದೂರವಾಗಿದೆ.

ಆಸ್ಪತ್ರೆಗಳ ಸುತ್ತ ಕಸಕಡ್ಡಿ ಬೆಳೆದಿದೆ. ಇದರಿಂದ ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಸೊಳ್ಳೆಗಳ ಕಾಟವೂ ಮಿತಿ ಮೀರಿದೆ. ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿ ಹಲವು ವರ್ಷಗಳಿಂದ ಸೀಮೆಜಾಲಿ ಗಿಡಗಳು ಬೆಳೆದಿದ್ದು, ಸುತ್ತಲೂ ಕಸಕಡ್ಡಿ ಇರುವುದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ.

ನೆಲಗೇತನಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿಯೂ ಪಾರ್ಥೇನಿಯಂ, ಬೂದಿ, ಕಸದರಾಶಿ ಇದೆ. ಆಸ್ಪತ್ರೆಯ ಆವರಣ ವಿಶಾಲವಾಗಿದ್ದರೂ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಕಾಲುಹಾದಿಯಲ್ಲಿ ಓಡಾಡುತ್ತಾರೆ.

ಅಬ್ಬೇನಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಆರೋಗ್ಯ ಉಪಕೇಂದ್ರದಲ್ಲೂ ಹಲವು ವರ್ಷಗಳಿಂದ ನೈರ್ಮಲ್ಯದ ಕೊರತೆ ಇದೆ. ಆಸ್ಪತ್ರೆಯ ಸುತ್ತ ಗಿಡಗಳು ಬೆಳೆದಿವೆ. ಪಕ್ಕದಲ್ಲಿನ ಚರಂಡಿ ಸ್ವಚ್ಛತೆ ಮಾಯವಾಗಿದೆ. ಆರೋಗ್ಯ ಕೇಂದ್ರಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಿದೆ. ಜೋಗಿಹಟ್ಟಿ, ಕುದಾಪುರ ಗ್ರಾಮಗಳಲ್ಲಿರುವ ಆರೋಗ್ಯ ಉಪ ಕೇಂದ್ರಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಪ್ರಸ್ತುತ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಡೆಂಗಿ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆಸ್ಪತ್ರೆಗಳ ನೈರ್ಮಲ್ಯ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊರಾಂಗಣದಲ್ಲಿ ಸ್ವಚ್ಛತೆ ದೂರ

ಹೊಸದುರ್ಗ: ಸ್ವಚ್ಛತೆ ವಿಷಯದಲ್ಲಿ ಕಾಯಕಲ್ಪ ಪ್ರಶಸ್ತಿ ಪಡೆದಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮತ್ತೆ ಸ್ವಚ್ಛತೆಯ ಸವಾಲು ಎದುರಾಗಿದೆ.

ಆಸ್ಪತ್ರೆ ಹೊರಾಂಗಣದಲ್ಲಿ ಸ್ವಚ್ಛತೆ ದೂರವಾಗಿದೆ. ಚರಂಡಿಗಳಲ್ಲಿ ಕಸ ತುಂಬಿರುವ ಕಾರಣ ಸೊಳ್ಳೆಗಳ ಹಾವಳಿ ಇದೆ.

100 ಹಾಸಿಗೆ ಹೊಂದಿರುವ ಆಸ್ಪತ್ರೆಯ ಒಳಾಂಗಣದಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ. ಆದರೆ ಹೊರಾಂಗಣದಲ್ಲಿ ಅಷ್ಟಕಷ್ಟೇ ಎಂಬಂತಾಗಿದೆ.

‘ರೋಗಿಗಳ ಸಂಬಂಧಿಗಳು ಇಲ್ಲಿ ಎಲೆ ಅಡಿಕೆ ಉಗುಳುವುದು ಹೆಚ್ಚಾಗಿದೆ. ಈ ಬಗ್ಗೆ ನಾಮಫಲಕ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಆಸ್ಪತ್ರೆ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಬೇಕು’ ಎನ್ನುತ್ತಾರೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಆರ್. ರಾಕೇಶ್.

ಕಸ–ಕಡ್ಡಿ ನಡುವೆ ‘ಆಸ್ಪತ್ರೆ’

ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಗುಟ್ಕಾ, ಎಲೆ ಅಡಿಕೆ ಉಗುಳದಂತೆ ಎಚ್ಚರಿಕೆ ನೀಡಲಾಗಿದೆ. ಪಾರ್ಥೇನಿಯಂ ಗಿಡಗಳ ಸ್ವಚ್ಛತೆ ಕೈಗೊಳ್ಳಲಾಗುವುದು. ಗೂಡಂಗಡಿಗಳ ತೆರವಿಗೆ ಪೌರಾಯುಕ್ತರಿಗೆ ಪತ್ರ ಬರೆಯಲಾಗುತ್ತದೆ.
ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ

ಸ್ವಚ್ಛತೆ ಮಾಯ: ರೋಗ ಭೀತಿ

ಪರಶುರಾಂಪುರ: ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಪರಶುರಾಂಪುರ ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಮೂಲಸೌಲಭ್ಯದ ಜೊತೆಗೆ ಸ್ವಚ್ಛತೆ ಕೊರತೆಯೂ ಎದುರಾಗಿದೆ.

30 ಹಾಸಿಗೆಯ ಈ ಆಸ್ಪತ್ರೆಗೆ ನಿತ್ಯ 250ರಿಂದ 300 ಜನ ರೋಗಿಗಳು ಬರುತ್ತಾರೆ. ಅವರಲ್ಲಿ ಅಂದಾಜು 50ಕ್ಕೂ ಹೆಚ್ಚು ಅಡಮಿಟ್ ಆಗುತ್ತಾರೆ. ಹಾಸಿಗೆ ಕೊರತೆ ಜೊತೆಗೆ ಶೌಚಾಲಯಗಳು ದುಃಸ್ಥಿತಿಗೆ ತಲುಪಿವೆ. ಆಸ್ಪತ್ರೆಯಲ್ಲಿ ದುರ್ವಾಸನೆ ಹೆಚ್ಚಿದೆ. ರೋಗ ಉಲ್ಬಣಿಸುವ ಭಯ ಕಾಡುತ್ತಿದೆ.

ಹೋಬಳಿ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಹಳ್ಳಿಗಳಿದ್ದು, ಗಡಿಭಾಗದಿಂದ 50 ಕಿ.ಮೀ. ದೂರವಿರುವ ಹಳ್ಳಿಗಳಿಂದ ಹೆಚ್ಚಿನ ಚಿಕಿತ್ಸೆಗೆ ಚಳ್ಳಕೆರೆಗೆ ಹೋಗಬೇಕಾದ ಸ್ಥಿತಿ ಇದೆ. ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರಕ್ಕೆ 50 ಹಾಸಿಗೆಯ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ತಜ್ಞ ವೈದ್ಯರನ್ನು ನೇಮಿಸಬೇಕು ಎಂಬುದು ಜನರ ಆಗ್ರಹ.

‘ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಇಲ್ಲಿಗೆ ಬಂದರೆ ಕಾಯಿಲೆ ಹೆಚ್ಚಾಗುತ್ತದೆ ಎಂಬ ಭಯ ಜನರಲ್ಲಿ ಮೂಡುವಂತಹ ಪರಿಸ್ಥಿತಿ ಇದೆ’ ಎನ್ನುತ್ತಾರೆ ಪಿಲ್ಲಹಳ್ಳಿಯ ಚಿತ್ರಲಿಂಗಪ್ಪ.

ಹಾಸಿಗೆ ಕೊರತೆ ಕಾರಣಕ್ಕೆ ಕೆಲವೊಮ್ಮೆ ಒಂದೇ ಹಾಸಿಗೆಯ ಮೇಲೆ ಇಬ್ಬರನ್ನು ಮಲಗಿಸಿ ಚಿಕಿತ್ಸೆ ನೀಡುವುದು ಸಾಮಾನ್ಯವಾಗಿದೆ.

‘ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೌಚಾಲಯ ಹಾಳಾಗಿದೆ. ಸ್ವಚ್ಛತೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಪರಶುರಾಂಪುರದ ನಾಗರಾಜ ದೂರುತ್ತಾರೆ.

ಪೂರಕ ಮಾಹಿತಿ: ವಿ.ಧನಂಜಯ, ಶ್ವೇತಾ ಜಿ., ಜೆ.ತಿಮ್ಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.