ಮೊಳಕಾಲ್ಮುರು (ಚಿತ್ರದುರ್ಗ): ತಾಲ್ಲೂಕಿನ ರಾಯಾಪುರದ ಹೊಲವೊಂದರಲ್ಲಿ ಬೃಹತ್ ಗಾತ್ರದ ನೈಸರ್ಗಿಕ ಅಣಬೆಯೊಂದು ಭಾನುವಾರ ಪತ್ತೆಯಾಗಿದೆ.

ಇದು ಒಂದು ಅಡಿ ಎತ್ತರ, ಒಂದು ಅಡಿಗೂ ಹೆಚ್ಚು ಅಗಲ, 5 ಕೆ.ಜಿ. ತೂಕವಿದೆ. ಮೂರು ಕವಲುಗಳಾಗಿ ಅರಳಿರುವ ಈ ಅಣಬೆಯ ಬೇರು ಸಾಕಷ್ಟು ಆಳಕ್ಕೆ ಇಳಿದಿತ್ತು. ಪರೀಕ್ಷಿಸಿದಾಗ ಅದು ತಿನ್ನಲು ಯೋಗ್ಯ ಎಂಬುದು ದೃಢಪಟ್ಟಿದೆ.

ಗ್ರಾಮದ ಪ್ರಕಾಶ್ ಎಂಬುವವರು ಹೊಲದಲ್ಲಿ ನೈಸರ್ಗಿಕ ಅಣಬೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಇದು ಪತ್ತೆಯಾಗಿದೆ. ಇಷ್ಟೊಂದು ದೊಡ್ಡ ಅಣಬೆ ನೋಡಿರುವುದು ಇದೇ ಮೊದಲು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೃಹತ್ ಅಣಬೆ ದೊರೆತಿರುವ ವಿಷಯ ತಿಳಿದು ಗ್ರಾಮದ ಸಾಕಷ್ಟು ಮಂದಿ ನೋಡಲು ಆಗಮಿಸಿದ್ದರು. ಅಣಬೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.