ಹೊಸದುರ್ಗ: ‘ಭಾರತದ ಬಲಿಷ್ಠ ಉದ್ಯಮ ಕ್ಷೇತ್ರವನ್ನು ಜಗತ್ತಿಗೆ ಪರಿಚಯಿಸಿದ ಧೀಮಂತ ಉದ್ಯಮಿ ರತನ್ ಟಾಟಾ. ಅವರ ಅಗಲಿಕೆ ಭಾರತದ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ. ಟಾಟಾ ಉದ್ಯಮವನ್ನು ಬಾನೆತ್ತರಕ್ಕೆ ಬೆಳೆಸಿ ತನ್ನ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಬೆಳೆದವರು’ ಎಂದು ಉದ್ಯಮಿ ಡಿ.ಎಸ್.ಪ್ರದೀಪ್ ಅಭಿಪ್ರಾಯಪಟ್ಟರು.

ಪಟ್ಟಣದ ಸದ್ಗುರು ಆಯುರ್ವೇದ ಕಂಪನಿಯಲ್ಲಿ ನಡೆದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯರಿಗಾಗಿ ಕಡಿಮೆ ವೆಚ್ಚದಲ್ಲಿ ನ್ಯಾನೊ ಕಾರ್ ಮಾರುಕಟ್ಟೆಗೆ ತಂದರು. ತಮಗೆ ಬರುತ್ತಿದ್ದ ಆದಾಯದಲ್ಲಿ ಬಹುಪಾಲು ಹಣವನ್ನು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದರು. ರಾಷ್ಟ್ರ ಸೇವೆಗೆ ಅವರ ಕೊಡುಗೆ ಅಪಾರ’ ಎಂದರು.

ಸಭೆಯಲ್ಲಿ ಪುರಸಭಾ ಸದಸ್ಯರಾದ ಸ್ವಾತಿ ಪ್ರದೀಪ್, ನಿವೃತ್ತ ಯೋಧ ಗೋವಿಂದ ಸ್ವಾಮಿ, ಮುಖಂಡರುಗಳಾದ ತುಂಬಿನಕೆರೆ ಬಸವರಾಜ್, ಅಣ್ಣಪ್ಪ, ತಿಪ್ಪೇಶ್ ಸೇರಿ ಸದ್ಗುರು ಸಂಸ್ಥೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.