ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಎಂಐಎ) ಭದ್ರತೆ ಹೆಚ್ಚಿಸುವ ಸಲುವಾಗಿ ಬಾಂಬ್ ಪತ್ತೆ ಮತ್ತು ವಿಲೇವಾರಿಯ ವಿಶೇಷ ಉಪಕರಣಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ವಿಮಾನನಿಲ್ದಾಣ ಭದ್ರತಾ ತಂಡಕ್ಕೆ (ಎಎಸ್ಜಿ) ಹಸ್ತಾಂತರಿಸಲಾಗಿದೆ.

ವಿಮಾನನಿಲ್ದಾಣದಲ್ಲಿ ಈಚೆಗೆ ನಡೆದ ಸರಳ ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊದ (ಬಿಸಿಎಎಸ್) ಪ್ರಾದೇಶಿಕ ನಿರ್ದೇಶಕ ರಾಜೀವ್ ಕುಮಾರ್ ರೈ ಅವರು ಈ ಉಪಕರಣಗಳನ್ನು ಲೋಕಾರ್ಪಣೆಗೊಳಿಸಿದರು. ಸಿಐಎಸ್ಎಫ್ನ ವಿಮಾನನಿಲ್ದಾಣ ಭದ್ರತಾ ತಂಡವು ಭದ್ರತೆ ಸಂಬಂಧಿಸಿದ ಸಂಕೀರ್ಣ ಅಗತ್ಯಗಳನ್ನು ಪೂರೈಸುವುದಕ್ಕೆ ಬದ್ಧವಾಗಿರಲು ಹಾಗೂ ವಿಮಾನ ನಿಲ್ದಾಣದ ಭದ್ರತೆಗೆ ಆದ್ಯತೆ ನೀಡುವ ಧ್ಯೇಯವನ್ನು ಪಾಲಿಸಲು ಈ ಸಾಧನವು ನೆರವಾಗಲಿದೆ.

ಎಂಐಎಯು ಈ ಹಿಂದೆ ಎಎಸ್ಜಿ ಸಿಬ್ಬಂದಿಗೆ ಗುಂಡು ನಿರೋಧಕ ವಾಹನವನ್ನು ಒದಗಿಸಿತ್ತು. ಮಹಾನಗರಗಳ ವಿಮಾನನಿಲ್ದಾಣಗಳ ಹೊರತಾಗಿ ಈ ಸೌಕರ್ಯವನ್ನು ಹೊಂದಿದ ದೇಶದ ಮೊದಲ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಮಂಗಳೂರು ವಿಮಾನನಿಲ್ದಾಣವು ಪಾತ್ರವಾಗಿತ್ತು.

ಈ ವಿಮಾನನಿಲ್ದಾಣದಲ್ಲಿ ಅತ್ಯಾಧುನಿಕ ಭದ್ರತಾ ಕಾರ್ಯಚರಣೆ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದ್ದು, ಇದರಿಂದ ವಿಮಾನನಿಲ್ದಾಣದ ಎಲ್ಲ ಪ್ರದೇಶಗಳ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಡುವುದು ಸಾಧ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.