ಮೂಡುಬಿದಿರೆ: ಮಂಗಳೂರು ಅರಣ್ಯ ಸಂಚಾರಿ ದಳ ಅಧಿಕಾರಿಗಳು ಬುಧವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ತಮಿಳುನಾಡಿನಿಂದ ಮಂಗಳೂರು ಬಂದರಿಗೆ ಮಿನಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಸುಮಾರು ₹ 4.15 ಕೋಟಿ ಮೌಲ್ಯದ ರಕ್ತ ಚಂದನ ಮರದ ದಿಮ್ಮಿಗಳ ಸಹಿತ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನ ರಾಜೇಶ್ ರೆಡ್ಡಿ, ಕೇರಳ ಆನೆಕ್ಕಲ್‌ನ ಸುಭಾಸ್, ಶಾಮೀರ್ ಮತ್ತು ಮಹಮ್ಮದ್ ಕುಂಞಿ, ತಮಿಳುನಾಡು ತಿರುವೆಳ್ಳೂರಿನ ಪಾಲರಾಜ್, ದಿನೇಶ್ ಕುಮಾರ್ ಹಾಗೂ ಕೊಯಮತ್ತೂರಿನ ಅನಿಲ್ ಕುಮಾರನ್ನು ಬಂಧಿತರು.

ಮಂಗಳೂರು-ಉಡುಪಿ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ನೇತೃತ್ವದ ತಂಡ ಮೂಲ್ಕಿ ಸಮೀಪದ ಕೆಂಚನಕೆರೆ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಬಂದರು ಕಡೆ ಹೋಗುತ್ತಿದ್ದಮಿನಿ ಲಾರಿ ನಿಲ್ಲಿಸಿ ತಪಾಸಣೆ ನಡೆಸಿದಾಗ 316 ರಕ್ತ ಚಂದನ ಮರದ ದಿಮ್ಮಿಗಳು ಪತ್ತೆಯಾದವು. ಅವುಗಳನ್ನು ಮಾವಿನ ಹಣ್ಣು ತುಂಬಿರುವ ಗೋಣಿ ಚೀಲಗಳಿಂದ ಮುಚ್ವಲಾಗಿತ್ತು. ಮಿನಿ ಲಾರಿಗೆ ಬೆಂಗಾವಲಾಗಿದ್ದ ಮಹೇಂದ್ರ ಬೊಲೆರೊ ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಸಂಪತ್ ಪಟೇಲ್, ಉಪವಲಯ ಅರಣ್ಯಾಧಿಕಾರಿಗಳಾದ ಕರುಣಾಕರ ಆಚಾರ್ಯ, ಪ್ರದೀಪ ಬಿ.ಎಸ್, ಕಾಂತರಾಜ್, ವಿಕಾಸ್ ಶೆಟ್ಟಿ, ಕೃಷ್ಣಪ್ಪ ಜೆ., ಸಿಬ್ಬಂದಿ ಪಾಲ್ಗೊಂಡಿದ್ದರು. ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಹಾಗೂ ಇತರ ಅಧಿಕಾರಿಗಳು ಪ್ರಕರಣದ ಪತ್ತೆಗೆ ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.