ಮಂಗಳೂರು: ಯುವಶಕ್ತಿ ಮತ್ತು ಅನುಭವಿಗಳ ಸಮ್ಮಿಲನದ ಮೂಲಕ ಭಾರತೀಯ ಸೇನೆಗೆ ‘ಬಲ’ ತುಂಬಬಲ್ಲ ಯೋಜನೆ ಅಗ್ನಿಪಥ್. ಆದರೆ ಇದನ್ನು ಜಾರಿಗೊಳಿಸುವ ಮೊದಲೇ ಸಮರ್ಪಕ ಮಾಹಿತಿ ನೀಡುವಲ್ಲಿ ಸೇನೆ ಮತ್ತು ಸರ್ಕಾರ ಎಡವಿರುವುದರಿಂದ ಗೊಂದಲ ಸೃಷ್ಟಿಯಾಗಿ ಗಲಾಟೆಗಳಾಗಿವೆ ಎಂದು ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘ ಅಭಿಪ್ರಾಯಪಟ್ಟಿದೆ.

‘ಭಾರತ ಸೇನೆಗೆ ಸಂಬಂಧಿಸಿ ಇದು ಕ್ರಾಂತಿಕಾರಿ ಯೋಜನೆ. ಆದರೆ ಇದರ ಜಾರಿಯ ಬಗ್ಗೆ ಘೋಷಿಸುವಾಗ ಸಣ್ಣ ಸಣ್ಣ ಮಾಹಿತಿಗಳನ್ನು ಬದಿಗಿರಿಸಿ ಪ್ರಮುಖ ಅಂಶಗಳನ್ನಷ್ಟೇ ಬಹಿರಂಗ ಮಾಡಿದ್ದಾರೆ. ಇದರಿಂದಾಗಿ ಯೋಜನೆಯ ಸೂಕ್ಷ್ಮಗಳು ಹಿನ್ನೆಲೆಗೆ ಸರಿದಿವೆ. ಇದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸಿದ್ದರಿಂದಾಗಿ ದೇಶದ ವಿವಿಧ ಕಡೆಗಳಲ್ಲಿ ಬೆಂಕಿ ಹತ್ತಿಕೊಂಡಿತು’ ಎಂದು ಸಂಘದ ಪೋಷಕ ನಿವೃತ್ತ ಕರ್ನಲ್ ಶರತ್ ಭಂಡಾರಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೇ ಯುವಕರು ಸೇನೆಗೆ ನೇಮಕಗೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ಮೂಡಿತ್ತು. ಅಂದು ಪ್ರಾಣಹಾನಿ ಸಂಭವಿಸಿದ್ದಕ್ಕೆ ಸೈನಿಕರ ಪ್ರಾಯವೂ ಪ್ರಮುಖ ಕಾರಣವಾಗಿತ್ತು ಎಂದು ಹೇಳಿದರು.

‘ಪೂರ್ಣಪ್ರಮಾಣದ ಸೈನಿಕನೊಬ್ಬ ತಯಾರಾಗಬೇಕಾದರೆ 6ರಿಂದ 7 ವರ್ಷಗಳ ತರಬೇತಿ ಬೇಕು. ಆ ಅವಧಿಯನ್ನು 4 ಅಥವಾ ಅದಕ್ಕಿಂತ ಕಡಿಮೆ ವರ್ಷಗಳಿಗೆ ಇಳಿಸುವ ಸಂಬಂಧ ಅಧ್ಯಯನಗಳು ನಡೆಯುತ್ತಿವೆ. ‘ಅಗ್ನಿಪಥ’ವು ಇದಕ್ಕೆ ಪುಷ್ಠಿ ನೀಡಲಿದೆ. ಸಣ್ಣ ವಯಸ್ಸಿನಲ್ಲಿ 4 ವರ್ಷಗಳ ಸೇವೆ ಮುಗಿಸಿ ಹೊರಬರುವ ಯೋಧರು ಪದವಿ ಶಿಕ್ಷಣ ಮುಂದುವರಿಸುವುದಕ್ಕೆ ಅಥವಾ ಉದ್ಯೋಗ ಗಳಿಸುವುದಕ್ಕೆ ಅವಕಾಶವಿದೆ. ಆರ್ಥಿಕವಾಗಿ ಸದೃಢರಾಗುವುದರಿಂದ ಸಣ್ಣ ಉದ್ಯಮ ಅರಂಭಿಸುವುದಕ್ಕೂ ಸಾಧ್ಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಅಗ್ನಿಪಥ ಉದ್ಯೋಗ ಯೋಜನೆಯಲ್ಲ. ಅದೊಂದು ತರಬೇತಿ ಕಾರ್ಯಕ್ರಮ. ಇದನ್ನು ತಿಳಿಯದೆ ಯುವಜನರನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಅಷ್ಟಕ್ಕೂ ದೇಶದ ವಿವಿಧ ಕಡೆಗಳಲ್ಲಿ ಬೆಂಕಿ ಹಚ್ಚಿದವರು ಯಾರೂ ಸೇನೆಗೆ ಸೇರುವ ಆಸಕ್ತಿ ಇರುವವರು ಅಲ್ಲ. ಅಂಥವರು ಸೇನೆಗೆ ಸೇರುವ ಅಗತ್ಯವೂ ಇಲ್ಲ’ ಎಂದು ಅವರು ಹೇಳಿದರು.

ಸಂಘದ ಕಾರ್ಯದರ್ಶಿ ನಿವೃತ್ತ ಕ್ಯಾಪ್ಟನ್ ದೀಪಕ್, ಹಿಂದಿನ ಅಧ್ಯಕ್ಷ ವಿಕ್ರಂ ದತ್ತ, ಜಯಚಂದ್ರ, ಭಗವಾನ್ ದಾಸ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.