ಮಂಗಳೂರು: ನಗರದಲ್ಲಿ ಕೋಟೆಕಣಿಯ ವೃದ್ಧ ದಂಪತಿ ಮನೆಯಲ್ಲಿ ದರೋಡೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಡ್ಡಿ ಗ್ಯಾಂಗ್ ಸದಸ್ಯರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅವರಲ್ಲಿ ಇಬ್ಬರ ಕಾಲಿಗೆ ಪೊಲೀಸರು ಬುಧವಾರ ಬೆಳಿಗ್ಗೆ ಗುಂಡು ಹಾರಿಸಿದ್ದಾರೆ.
.ಮಂಗಳೂರು: ‘ಚಡ್ಡಿ ಗ್ಯಾಂಗ್’ನ ನಾಲ್ವರು ದರೋಡೆಕೋರರ ಬಂಧನ.
ದರೋಡೆ ಮಾಡಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಸಕಲೇಶಪುರದಲ್ಲಿ ಹಾಸನ ಜಿಲ್ಲಾ ಪೊಲೀಸರು ಮಂಗಳವಾರ ಬಂಧಿಸಿದ್ದರು.

ಮಧ್ಯಪ್ರದೇಶದ ಗುನಾ ಜಿಲ್ಲೆಯ ರಾಜು ಸಿಂಘಾನಿಯ (24 ವರ್ಷ), ಭೂಪಾಲ್ ನ ಮಯೂರ್ (30 ವರ್ಷ), ಬಾಲಿ (22 ವರ್ಷ), ಗುಣಾ ಜಿಲ್ಲೆಯ ವಿಕ್ಕಿ (21 ವರ್ಷ) ಬಂಧಿತ ಆರೋಪಿಗಳು. ಮಂಗಳವಾರವೇ ಅವರನ್ನು ಮಂಗಳೂರಿಗೆ ಕರೆತರಲಾಗಿತ್ತು.
.ಬೆಂಗಳೂರು | ಎಟಿಎಂ ಯಂತ್ರ ಧ್ವಂಸ: ₹16.56 ಲಕ್ಷ ದರೋಡೆ.
ಕೋಟೆಕಣಿಯ ವೃದ್ಧ ದಂಪತಿಯ ಮನೆಯಲ್ಲಿ ಕದ್ದ ಕಾರನ್ನು ಆರೋಪಿಗಳು ಮೂಲ್ಕಿಯಲ್ಲಿ ಬಿಟ್ಡು ಪರಾರಿಯಾಗಿದ್ದು, ಸ್ಥಳ ಮಹಜರು ನಡೆಸಲು ಅವರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಪಡುಪಣಂಬೂರಿನ ಬಳಿ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಇಬ್ಬರ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳಾದ ರಾಜು ಸಿಂಘಾನಿಯ ಮತ್ತು ಬಾಲಿ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಗೊತ್ತಾಗಿದೆ.
.ನೆಲಮಂಗಲ: ಸಿನಿಮೀಯ ಶೈಲಿಯಲ್ಲಿ ₹50 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.