ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಬಾಧೆಯಿಂದ ತತ್ತರಿಸಿದ್ದಾರೆ. ಈ ರೋಗ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಪತ್ರ ಬರೆದಿದ್ದಾರೆ.

‘ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಕಾಡುತ್ತಿದ್ದು, ಅಡಿಕೆಯನ್ನೇ ನಂಬಿರುವ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ರೋಗದ ಬಗ್ಗೆ ರೈತರಿಗೆ, ಕೃಷಿ ವಿಸ್ತರಣಾ ವಲಯದವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕೀಟ ನಾಶಕ ಸಿಂಪಡಣೆಗೆ ಕ್ರಮವಹಿಸಬೇಕು’ ಎಂದು ಸಂಸದ ಕೋರಿದ್ದಾರೆ.

‘ಹವಾಮಾನ ವೈಪರೀತ್ಯ, ತೀವ್ರ ರೋಗ ಬಾಧೆ, ಮಿತಿಮೀರಿದ ಕೀಟನಾಶಕ ಸಿಂಪಡನೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಜಿಲ್ಲೆಯಲ್ಲಿ ಅಡಿಕೆ ಇಳುವರಿ ಕುಂಠಿತಗೊಂಡಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯಲು ಪೂರಕ ವಾತಾವರಣವಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಸಾಂಪ್ರದಾಯಿಕ ಬೆಳೆಯಾಗಿ ಕಾಫಿ ಬೆಳೆಯಲು ಕಾಫಿ ಮಂಡಳಿಯಿಂದ ಅಗತ್ಯ ತಾಂತ್ರಿಕ ನೆರವು, ತರಬೇತಿ ಹಾಗೂ ಮಾರುಕಟ್ಟೆ ಒದಗಿಸಬೇಕು’ ಎಂದು ಕೋರಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯುಷ್ ಗೊಯೆಲ್ ಅವರಿಗೂ ಕ್ಯಾ.ಚೌಟ ಪತ್ರ ಬರೆದಿದ್ದಾರೆ.

ಕೊಡಗು ಮತ್ತಿತ್ತರ ಜಿಲ್ಲೆಗಳಲ್ಲಿ ಕಾಫಿ ಮಂಡಳಿ ಮತ್ತು ಕೇಂದ್ರೀಯ ಕಾಫಿ ಬೆಳೆ ಸಂಶೋಧನಾ ಸಂಸ್ಥೆಯಿಂದ ಏನೆಲ್ಲಾ ಬೆಂಬಲ, ಸೌಲಭ್ಯ, ತಾಂತ್ರಿಕ ನೆರವು ಲಭಿಸುತ್ತಿದೆಯೋ ಅವುಗಳನ್ನು ದಕ್ಷಿಣ ಕನ್ನಡದ ಕಾಫಿ ಬೆಳೆಗಾರರಿಗೂ ಒದಗಿಸಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.