ಮಂಗಳೂರು: ಷೇರು ಮತ್ತು ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ವಹಿವಾಟಿನಲ್ಲಿ ಹೆಚ್ಚಿನ ಲಾಭ ಒದಗಿಸುವು ಆಮಿಷ ತೋರಿಸಿ ₹43.32 ಲಕ್ಷ ವಂಚನೆ ಮಾಡಿದ ಬಗ್ಗೆ ಇಲ್ಲಿನ ಸೆನ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ನನ್ನ ವಾಟ್ಸ್ಆ್ಯಪ್ಗೆ ಸೆ. 25ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಸಂದೇಶ ಕಳುಹಿಸಿದ್ದ ವ್ಯಕ್ತಿ ತನ್ನನ್ನು ಮಂಜು ಪಚಿಸಿಯ ಎಂದು ಪರಿಚಯಿಸಿಕೊಂಡಿದ್ದ. ಷೇರು ಮತ್ತು ಐಪಿಒ ವಹಿವಾಟಿನಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ಒಂದು ಆನ್ಲೈನ್ ಕೊಂಡಿಯನ್ನು ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದ. ಇನ್ನೊಂದು ಕೊಂಡಿಯನ್ನು ಕಳುಹಿಸಿದ್ದ. ಈ ಬಗ್ಗೆ ಸಲಹೆ ನೀಡಲು ಟೆಲಿಗ್ರಾಂ ಆ್ಯಪ್ನ ಈ ಕೊಂಡಿ ಕಳುಹಿಸಿದ್ದರು. ಅದರಲ್ಲಿ ಅವರು ಸಲಹೆ ನೀಡಿದ ಖಾತೆಗಳಿಗೆ ಸೆ 26ರಿಂದ ಅ. 23ರ ನಡುವೆ ಒಮ್ಮೆ ₹ 22 ಲಕ್ಷ, ಮತ್ತೊಮ್ಮೆ ₹ 19.82 ಲಕ್ಷ, ಇನ್ನೊಮ್ಮೆ ₹ 1.5 ಲಕ್ಷ ಸೇರಿ ಒಟ್ಟು ₹ 43.32 ಹಣ ಪಾವತಿಸಿದ್ದೆ. ಹೂಡಿದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಸಲಹೆ ನೀಡಿದ ವ್ಯಕ್ತಿಗಳು ಶೇ 25ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಿದರು. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಯಿತು. ನನಗೆ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಒತ್ತಾಯಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.