ಮಂಗಳೂರು: 'ಪಾಕಿಸ್ತಾನದ ಕುನ್ನಿಗಳೆ... ಎಂದು ಘೋಷಣೆ ಕೂಗಿದರೆ ಪಾಕ್ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸಾಮ್ರಾಜ್ಯ ಉಳ್ಳಾಲದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ ಅಂದ ಹಾಗಾಯಿತು ಎಂದು ವಿಧಾನ ಪರಿಷತರ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಟಿ.ರವಿ ಹೇಳಿದರು.

ಉಳ್ಳಾಲ ತಾಲ್ಲೂಕಿನ ಬೋಳಿಯಾರ್ ಈಚೆಗೆ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿ ಇರಿದ ಘಟನೆಗೆ ಇಲ್ಲಿ ಸುದ್ದಿಗೋಷ್ಟಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, 'ಮಂಗಳೂರು ಪೊಲೀಸ್ ಕಮಿಷನರ್ ಅವರು ಪಾಕಿಸ್ತಾನದ ಕುನ್ನಿಗಳನ್ನು ಗುರುತಿಸಿ, ಅವರ ಮೇಲೆ ಪ್ರಕರಣ ಹಾಕಿ ಅವರನ್ನ ಗಡೀಪಾರು ಮಾಡಬೇಕು. ಅಥವಾ ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು' ಎಂದರು.

'ಭಾರತ್ ಮಾತಾಕೀ ಜೈ ಎಂದಾಗ ಹಾಗೂ ಪಾಕಿಸ್ತಾನಕ್ಕೆ ಬೈದಾಗ ನಮಕ್ ಹರಾಮ್ಗಳು ಮಾತ್ರ ಪ್ರಚೋದನೆಗೆ ಒಳಗಾಗುತ್ತಾರೆ. ಆದರೆ, 'ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಮಸೀದಿಯ ಎರಡೂ ಬದಿ ನಿಂತಿದ್ದವರು ಪ್ರಚೋದನೆಗೊಳಗಾಗಿ ಚೂರಿಯಿಂದ ಇರಿದಿದ್ದಾರೆ' ಎಂದು ಮಂಗಳೂರಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಅವರು ಏಕೆ ಪಾಕಿಸ್ತಾನದ ಕಮಿಷನರ್ ಥರ ವರ್ತಿಸುತ್ತಾರೋ ತಿಳಿಯದು. ಅವರು ಪಾಕಿಸ್ತಾನದ ಅಧಿಕಾರಿಯಲ್ಲ, ಭಾರತದ ಪೊಲೀಸ್ ಅಧಿಕಾರಿ. ಅವರ ಹೇಳಿಕೆ ಸಮರ್ಥನೀಯವಲ್ಲ. ಅದನ್ನು ವಾಪಸ್ ಪಡೆಯಬೇಕು. ಮಸೀದಿಯವರು ಕೊಟ್ಟ ದೂರಿಗೆ ತಕ್ಷಣ ಬಿ ವರದಿ ಸಲ್ಲಿಸಬೇಕು' ಎಂದು ಒತ್ತಾಯಿಸಿದರು.

ಇರಿತಕ್ಕೆ ಒಳಗಾದ ಹರೀಶ್, ನಂದ ಕುಮಾರ್ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ರಾಜಧರ್ಮದ ಬಗ್ಗೆ ಮಾತನಾಡುವ ವಿಧಾನಸಭಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ತೆರಳಿದ್ದಾಗ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ದರೆ ಅವರು ಆಸ್ಪತ್ರೆಯಲ್ಲೇ ಇರುತ್ತಿದ್ದರು. ಆದರೆ ಗಾಯಾಳುಗಳು ಭಾರತ ಮಾತೆಯ ಸುಪುತ್ರರಾದ ಕಾರಣ ಅವರು ಆಸ್ಪತ್ರೆಗೆ ಬಂದರೂ ಅವರಬ್ಬು ಭೇಟಿಯಾಗಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.