ಮಂಗಳೂರು: ಪೊಲೀಸರ ಸೋಗಿನಲ್ಲಿ ಇಲ್ಲಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಆರೋಪಿಗಳು, ಅವರ ಮೊಬೈಲ್ ಸಂಖ್ಯೆಯನ್ನು ಕಾನೂನುಬಾಹಿರ ಚಟುವಟಕೆಗೆ ಬಳಸಲಾಗಿದೆ ಎಂದು ನಂಬಿಸಿ, ₹ 1.70 ಕೋಟಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಇಲ್ಲಿ ಸೆನ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ನನ್ನ ಮೊಬೈಲ್ಗೆ ನ. 11ರಂದು ಬೆಳಿಗ್ಗೆ 9:49ಕ್ಕೆ ಕರೆ ಬಂತು. ಮಾತನಾಡಿದ ವ್ಯಕ್ತಿಯು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದರು. ನನ್ನ ಹೆಸರಿನಲ್ಲಿ ನೋಂದಣಿಯಾದ ಇನ್ನೊಂದು ಮೊಬೈಲ್ ಸಂಖ್ಯೆ ಬಳಸಿ ಮುಂಬೈನ ಅಂಧೇರಿಯಲ್ಲಿ ಹಲವು ಕಾನೂನು ಬಾಹಿರ ಚಟುವಟಿಕೆ ನಡೆಸಲಾಗಿದೆ. ಮಾರ್ಕೆಟಿಂಗ್ ನೆಪದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಕಿರುಕುಳ ಕೊಟ್ಟ ಕುರಿತು ಎಫ್ಐಆರ್ ದಾಖಲಾಗಿದೆ. ತಕ್ಷಣ ಅಂಧೇರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ತಿಳಿಸಿದ್ದರು.’

‘ನಂತರ ಇನ್ನೊಬ್ಬರು ಕರೆ ಮಾಡಿ, ಪ್ರದೀಪ್ ಸಾವಂತ್ ಎಂದು ಪರಿಚಯಿಸಿಕೊಂಡು ಮಾತನಾಡಿದ್ದ. ನರೇಶ್ ಗೋಯೆಲ್ ವಂಚನೆ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಯೋಜನೆಯಲ್ಲಿ ನಾನು ಭಾಗಿಯಾಗಿದ್ದು, ಈ ಬಗ್ಗೆ ಮತ್ತೊಂದು ಎಫ್ಐಆರ್ ಕೂಡಾ ದಾಖಲಾಗಿದೆ. ಅಂಧೇರಿಯ ಕೆನರಾ ಬ್ಯಾಂಕಿನ ಶಾಖೆಯಲ್ಲಿ ನನ್ನ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದೆ. ಇದಕ್ಕೆ ನನ್ನ ಗುರುತಿನ ಚೀಟಿ ಬಳಸಿ ಸಿಮ್ ಖರೀದಿಸಲಾಗಿದೆ. ಈ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಲಿದ್ದೇವೆ ಎಂದು ಆತ ತಿಳಿಸಿದ್ದ.’

‘ಬಳಿಕ ಮೊಬೈಲ್ಗೆ ವಾಟ್ಸ್ ಆ್ಯಪ್ನಲ್ಲಿ ವಿಡಿಯೊ ಕರೆ ಬಂದಿತ್ತು. ಅದರಲ್ಲಿ ಕಾಣಿಸಿಕೊಂಡ ಇಬ್ಬರು ತಮ್ಮನ್ನು ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಹಾಗೂ ಸಿಬಿಐ ಮಹಿಳಾ ಅಧಿಕಾರಿ ಆಕಾಂಕ್ಷಾಎಂದು ಪರಿಚಯಿಸಿಕೊಂಡರು. ನನ್ನ ವಿರುದ್ಧ ಸಿಬಿಐ ಕಚೇರಿಯಲ್ಲಿ ಪ್ರಕರಣ ದಾಖಲಾದ ಹಾಗೆ ನಕಲಿಯ ದಾಖಲೆ ಸೃಷ್ಟಿಸಿ ನನ್ನ ವಾಟ್ಸ್ ಆ್ಯಪ್ಗೆ ಕಳುಹಿಸಿದ್ದರು.ಈ ಪ್ರಕರಣದಿಂದ ಮುಕ್ತಗೊಳಿಸಲು ಹಣದ ಬೇಡಿಕೆ ಇಟ್ಟರು. ಭಯಗೊಂಡ ನಾನು ಆರ್ಟಿಜಿಎಸ್ ಮೂಲಕ ಹಾಗೂ ಆನ್ಲೈನ್ ಮೂಲಕ ಹಂತ ಹಂತವಾಗಿ ₹ 53 ಲಕ್ಷ, ₹ 74 ಲಕ್ಷ, ₹ 44 ಲಕ್ಷ ಸೇರಿ ಒಟ್ಟು ₹ 1.71 ಕೋಟಿ ಹಣವನ್ನು ಅವರು ಸೂಚಿಸಿದ ಬೇರೆ ಬೇರೆ ಖಾತೆಗಳಿಗೆ ನ.13ರಿಂದ ನ. 19ರ ನಡುವೆ ವರ್ಗಾಯಿಸಿದ್ದೇನೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.