ಮಂಗಳೂರು: ‘ಆರೋಗ್ಯ ಹದಗೆಟ್ಟರೆ ಯಾವುದೇ ವ್ಯಕ್ತಿ ಪರಿಪೂರ್ಣ ಜೀವನ ನಡೆಸಲಾಗದು. ಜೀವನದ ಗುಣಮಟ್ಟ ಹಾಗೂ ಆರೋಗ್ಯ ಸುಧಾರಣೆಗೆ ಅಲೋಪಥಿಯ ಜೊತೆಗೆ ಹೋಮಿಯೋಪಥಿ, ಆಯುರ್ವೇದ, ಯುನಾನಿ, ಸಿದ್ಧ, ಪ್ರಕೃತಿ ಚಿಕಿತ್ಸೆಯಂತಹ ವೈದ್ಯ ಪದ್ಧತಿಗಳ ನೆರವನ್ನೂ ಪಡೆಯಬೇಕಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದಿನೇಶ್ ಗುಂಡೂರಾವ್ ಹೇಳಿದರು.

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಹೋಮಿಯೋಪಥಿ ಕಾಲೇಜಿನಲ್ಲಿ ಹೋಮಿಯೋಪಥಿ ಪದ್ದತಿ ಅನುಸರಿಸಲು ಅರಂಭಿಸಿದ 40 ನೇ ವರ್ಷಾಚರಣೆ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಇಲ್ಲಿ ಗುರುವಾರ ಏರ್ಪಡಿಸಿದ್ದ ‘ರೂಬಿಕಾನ್ 2024’ ಹಾಗೂ 27 ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಜನರಲ್ಲಿ ಸ್ವಚ್ಛತೆಯ ಕಾಳಜಿ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದಿವೆ. ಆದರೆ ಬದಲಾದ ಜೀವನಶೈಲಿಯಿಂದಾಗಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ. ಅಧಿಕ ರಕ್ತದೊತ್ತಡ, ಮಧುಮೇಹ, ನರರೋಗ, ಮಾನಸಿಕ, ಹೃದಯ ಸಂಬಂಧಿ ಹಾಗೂ ಮೂತ್ರಕೋಶ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಟಿ.ವಿ., ಸಾಮಾಜಿಕ ಮಾಧ್ಯಮಗಳು, ಮೊಬೈಲ್ ಅತಿ ಬಳಕೆ ಅನೇಕ ತರಹದ ಕೌಟುಂಬಿಕ ಅಸಮತೋಲನಗಳನ್ನೂ ಸೃಷ್ಟಿಸುತ್ತಿದೆ. ಇವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಆರೋಗ್ಯ ಮಟ್ಟ ಸುಧಾರಿಸಲು ವಿವಿಧ ರೀತಿಯ ವೈದ್ಯ ಪದ್ಧತಿಗಳ ಉತ್ತಮ ಅಂಶಗಳನ್ನು ಪರಸ್ಪರ ಪೂರಕವಾಗಿ ಬಳಸಿಕೊಳ್ಳುವ ಅಗತ್ಯವಿದೆ’ ಎಂದರು.

ರಾಷ್ಟ್ರೀಯ ಹೋಮಿಯೊಪಥಿ ಆಯೋಗದ (ಎನ್ಸಿಎಚ್) ಅಧ್ಯಕ್ಷ ಡಾ. ಅನಿಲ್ ಖುರಾನ, ‘ಹೋಮಿಯೋಪಥಿ ವೈದ್ಯರನ್ನು ರೂಪಿಸುವುದರಲ್ಲಿ ಹಾಗೂ ಹೋಮಿಯೋಪಥಿ ಔಷಧಿ ಉತ್ಪಾದನೆಯಲ್ಲಿ ಭಾರತವು ಜಗತ್ತಿನ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ದೇಶದಲ್ಲಿ 3.69 ಲಕ್ಷಕ್ಕೂ ಹೆಚ್ಚು ಹೋಮಿಯೋಪಥಿ ವೈದ್ಯರಿದ್ದಾರೆ. 400ಕ್ಕೂ ಹೆಚ್ಚು ಪ್ರಮಾಣೀಕೃತ ಸಂಸ್ಥೆಗಳು ಹೋಮಿಯೋಪಥಿ ಔಷಧ ತಯಾರಿಸಿ, ವಿದೇಶಗಳಿಗೂ ರಫ್ತು ಮಾಡುತ್ತಿವೆ’ ಎಂದರು.

‘ಪುರಾವೆ ಆಧರಿತ ಅಧ್ಯಯನಕ್ಕೆ ಈಚೆಗೆ ಮಹತ್ವ ನೀಡಲಾಗುತ್ತಿದೆ. ಹೋಮಿಯೋಪಥಿ ಚಿಕಿತ್ಸಾ ವಿಧಾನ ಅನುಸರಿಸುವ ಎಲ್ಲ ವೈದ್ಯರು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎವಿಡಿಎಂ) ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ಅಭಾ) ಗುರುತಿನ ಕಾರ್ಡ್ ಪಡೆದುಕೊಳ್ಳಬೇಕು. ತಮ್ಮ ಚಿಕಿತ್ಸೆಯ ಯಶೋಗಾಥೆಗಳನ್ನು ಎವಿಡಿಎಂ ಪೋರ್ಟಲ್ನಲ್ಲಿ ದಾಖಲಿಸಬೇಕು. ಎಲ್ಲೆಲ್ಲಿ ಹೋಮಿಯೋಪಥಿ ವೈದ್ಯರು ಲಭ್ಯ ಇದ್ದಾರೆ ಎಂಬ ಮಾಹಿತಿ ಹಾಗೂ ಹೋಮಿಯೋಪಥಿ ಮೂಲಸೌಕರ್ಯದ ಮಾಹಿತಿ ಇದರಿಂದ ಸುಲಭವಾಗಿ ಲಭ್ಯವಾಗಲಿದೆ’ ಎಂದರು.

‘ರಾಷ್ಟ್ರೀಯ ಹೋಮಿಯೋಪಥಿ ಸಂಶೋಧನಾ ಮಂಡಳಿಯು (ಸಿಸಿಆರ್ಎಚ್) ಕೋವಿಡ್ ಸಂದರ್ಭದಲ್ಲಿ ರೋಗ ನಿಯಂತ್ರಣಕ್ಕೆ ಸಂಬಂಧಿಸಿದ 1.20 ಕೋಟಿ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿದೆ. ಹೋಮಿಯೋಪಥಿ ಔಷಧ ಸೇವನೆಯಿಂದ ರೋಗಿಗಳು ಬೇಗ ಗುಣಮುಖರಾಗಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಅಲೋಷಿಯಸ್ ಕುವೆಲ್ಲೊ, ‘ನಮ್ಮ ಹೋಮಿಯೋಪಥಿ ಕಾಲೇಜಿಗೆ ಈ ವರ್ಷ ಎ–ಪ್ಲಸ್ ಶ್ರೇಣಿ ಲಭಿಸಿದೆ. ನಮ್ಮಲ್ಲಿ ಏಳು ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳಿದ್ದು, ಸಮುದಾಯ ಆರೋಗ್ಯ ಹಾಗೂ ಚರ್ಮರೊಗಕ್ಕೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳು ಶೀಘ್ರವೇ ಸೇರ್ಪಡೆಯಾಗಲಿವೆ’ ಎಂದರು.

‘ಉತ್ತಮ ಸೌಕರ್ಯ ಹೊಂದಿರುವ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿಯೋಜಿತ ಅಧ್ಯಕ್ಷ ಫಾ.ಪೌಸ್ಟೀನ್ ಲ್ಯೂಕಾಸ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಇಎಸ್ಜೆ ಪ್ರಭುಕಿರಣ್ ಧನ್ಯವಾದ ಸಲ್ಲಿಸಿದರು.

ಉಪ ಪ್ರಾಂಶುಪಾಲರಾದ ವಿಲ್ಮಾ ಮೀರಾ ಡಿಸೋಜ, ಸಹಾಯಕ ಆಡಳಿತಾಧಿಕಾರಿ ಫಾ.ಅಶ್ವಿನ್ ಎಲ್.ಕ್ರಾಸ್ತ, ಡೀನ್ ಫಾ.ಅಂತೋನಿ ಸಿಲ್ವನ್, ಫಾ. ನೆಲ್ಸನ್ ಧೀರಜ್ ಪಾಯಸ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ರಂಜನ್ ಕ್ಲೆಮೆಂಟ್ ಬ್ರಿಟ್ಟೊ, ಪ್ರಿಡಿಕ್ಟಿವ್ ಹೋಮಿಯೋಪಥಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಂಬರೀಷ್, ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ ಯು.ಕೆ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.