ಸಂತೇಬೆನ್ನೂರು (ದಾವಣಗೆರೆ): ಸಮೀಪದ ಸೂಳೆಕೆರೆ (ಶಾಂತಿಸಾಗರ) ಬಳಿಯ ಶೃಂಗಾರ್‌ಬಾಗ್ ಮೀಸಲು ಅರಣ್ಯದಲ್ಲಿ 54 ಎಕರೆ ಭೂಮಿ ಒತ್ತುವರಿಯನ್ನು ಅರಣ್ಯ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

ಶೃಂಗಾರ್‌ಬಾಗ್ ಹಾಗೂ ಬುಳ್ಳನಾಯಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 54 ಎಕರೆ ಒತ್ತುವರಿ ಆಗಿತ್ತು. 17 ಜನರಿಗೆ ನೋಟಿಸ್ ನೀಡಿದ್ದು, ಒತ್ತುವರಿದಾರರು ಎಸಿಎಫ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಒತ್ತುವರಿಗೆ ಸಂಬಂಧಿಸಿ ದಾಖಲೆಗಳನ್ನು ಹಾಜರುಪಡಿಸಲಿಲ್ಲ. ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ತೆರವಿಗೆ ಆದೇಶ ನೀಡಿತ್ತು ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಜಗದೀಶ್ ಮಾಹಿತಿ ನೀಡಿದರು.

ಶುಕ್ರವಾರ 52 ಎಕರೆ ಒತ್ತುವರಿ ತೆರವಾಗಿದೆ. 2 ಎಕರೆಯಲ್ಲಿ 4 ಕಚ್ಚಾ ಮನೆಗಳಿವೆ. ನಿವಾಸಿಗಳಿಗೆ ತೆರವಿಗೆ ಸಮಯ ನೀಡಲಾಗಿದೆ ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ, 15 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.