ದಾವಣಗೆರೆ: ಹವ್ಯಾಸಿ ರಂಗಭೂಮಿಯ ಪ್ರಯೋಗಶೀಲತೆ ಹಾಗೂ ವೃತ್ತಿ ರಂಗಭೂಮಿಯ ವೈಭವ ಜೊತೆಯಾದರೆ ಕನ್ನಡ ರಂಗಭೂಮಿ ಹೊಸ ಸ್ವರೂಪ ಪಡೆಯಲು ಸಾಧ್ಯವಿದೆ. ವೃತ್ತಿ ರಂಗಭೂಮಿ ಚಟುವಟಿಕೆಗೆ ಸೀಮಿತವಾಗದೇ ಚಳವಳಿಯಾಗಿ ರೂಪುಗೊಳ್ಳಲಿ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ‘ವರ್ತಮಾನದ ವೃತ್ತಿ ರಂಗಭೂಮಿ: ಬಿಕ್ಕಟ್ಟು ಮತ್ತು ಪರಿಹಾರ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಕನ್ನಡ ವೃತ್ತಿ ರಂಗಭೂಮಿಗೆ ಬಹುದೊಡ್ಡ ಪರಂಪರೆ ಇದೆ. ನಟರಾದ ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ ಸೇರಿ ಸಿನಿಮಾ ದಿಗ್ಗಜರು ನಾಟಕ ಕಂಪನಿಗಳಲ್ಲಿ ಸೃಷ್ಟಿಯಾದವರು. ಸಮಾಜದಲ್ಲಿ ಇತ್ತೀಚೆಗೆ ಸಿನಿಮಾ ಸೆಳೆತ ಕಡಿಮೆಯಾಗುತ್ತಿದೆ. ಪರದೆ ಮೇಲೆ ಗೊಂಬೆಗಳನ್ನು ನೋಡಿ ಜನರು ಸಾಕಾಗಿದ್ದಾರೆ. ನಾಟಕಗಳಂತಹ ನೇರ ಪ್ರಸಾರವನ್ನು ಜನ ಇಟ್ಟಪಡುತ್ತಿದ್ದಾರೆ. ರಂಗಭೂಮಿಗೆ ಸಾಕಷ್ಟು ಅವಕಾಶಗಳಿವೆ’ ಎಂದು ಪ್ರತಿಪಾದಿಸಿದರು.

‘ಕಲೆ ವ್ಯವಹಾರವಲ್ಲ, ರಂಗಭೂಮಿ ವ್ಯಾಪಾರವೂ ಅಲ್ಲ. ಸದಭಿರುಚಿಯ ನಾಟಕಗಳನ್ನು ಜನರು ಇಷ್ಟಪಡುತ್ತಾರೆ. ನಾಟ್ಯ, ಸಂಗೀತ, ಕಥೆ, ಚಿತ್ರಕಲೆ, ಅಭಿನಯ ಎಲ್ಲವೂ ನಾಟಕದಲ್ಲಿ

ಇರಬೇಕು. ಮಾತು ಪ್ರಧಾನವಾಗಿರುವ ನಾಟಕಗಳು ಜನರಲ್ಲಿ ಏಕತಾನತೆ ಮೂಡಿಸುತ್ತವೆ. ಪ್ರಯೋಗಶೀಲತೆಗೆ ತೆರೆದುಕೊಂಡು, ವೈಜ್ಞಾನಿಕ ಹಾಗೂ ವೈಚಾರಿಕ ಸ್ಪಷ್ಟತೆಯನ್ನು ಹೊಂದಿರಬೇಕು. ಮೌಢ್ಯವನ್ನು ಬಿತ್ತಬಾರದು’ ಎಂದು ಎಚ್ಚರಿಕೆ ನೀಡಿದರು.

‘ಮೈಸೂರು ರಂಗಾಯಣಕ್ಕೆ ಭೂಮಿಕೆ ಸಿದ್ಧವಾಗಿದೆ. ರಾಜ್ಯದ ಇತರ ರಂಗಾಯಣಗಳು ಪರಿಮಿತಿಯಲ್ಲಿ ಕೆಲಸ ಮಾಡುತ್ತಿವೆ. ವೃತ್ತಿ ರಂಗಾಯಣಕ್ಕೆ ಭೂಮಿಕೆಯನ್ನು ಸಿದ್ಧಪಡಿಸುವ ಜವಾಬ್ದಾರಿ ದಾವಣಗೆರೆ ರಂಗಾಯಣಕ್ಕೆ ಇದೆ. ಸರ್ಕಾರ ಸಾಂಸ್ಕೃತಿಕ ನೀತಿ ರೂಪಿಸುವ ಆಲೋಚನೆಯಲ್ಲಿರುವುದು ರಂಗಭೂಮಿಗೆ ಅನುಕೂಲಕರ. ಗ್ರಾಮೀಣ ಪ್ರದೇಶದ ಕಲಾವಿದರಿಗೆ ಒತ್ತು ಸಿಗಲಿ. ಕಲಾವಿದರಿಗೂ ಉತ್ತಮ ವೇತನ, ಗೌರವಧನ ನಿಗದಿ ಆಗಲಿ’ ಎಂದು ಸಲಹೆ ನೀಡಿದರು.

‘ರಾಜಕೀಯ ಪಕ್ಷಗಳ ಅಧಿಕಾರ ಐದು ವರ್ಷಕ್ಕೆ ಮುಗಿಯುತ್ತದೆ. ಕಲಾವಿದರು ಯಾವುದೇ ರಾಜಕೀಯ ಪಕ್ಷದವರಲ್ಲ. ಜಾತಿ, ಧರ್ಮ, ಲಿಂಗ ತಾರತಮ್ಯಕ್ಕೆ ರಂಗಭೂಮಿಯಲ್ಲಿ ಅವಕಾಶವಿಲ್ಲ. ಕಲಾವಿದರ ಆಲೋಚನೆಗಳು ಉನ್ನತವಾಗಿವೆ. ಚರಿತ್ರೆ, ಪುರಾಣಗಳನ್ನು ಮೂಲಸ್ವರೂಪದಲ್ಲಿಯೇ ನೋಡೋಣ’ ಎಂದು ಹೇಳಿದರು.

‘ವೃತ್ತಿ ರಂಗಭೂಮಿ ರಂಗಾಯಣಕ್ಕೆ ದಾವಣಗೆರೆಯಲ್ಲಿ ಹತ್ತು ಎಕರೆ ಜಾಗ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಇದು ಮತ್ತೊಂದು ನಾಟಕ ಕಂಪನಿ ಆಗುವುದು ಬೇಡ. ವೃತ್ತಿ ರಂಗಭೂಮಿಯ ಇತಿಹಾಸವನ್ನು ಕಟ್ಟಿಕೊಡುವ ವಸ್ತುಸಂಗ್ರಹಾಲಯ ಇರಲಿ. ಇಡೀ ರಾಜ್ಯಕ್ಕೆ ಇದೊಂದು ತರಬೇತಿ ಕೇಂದ್ರವಾಗಿ ರೂಪುಗೊಳ್ಳಲಿ. ಬಸವಣ್ಣನವರ ಅನುಭವ ಮಂಟಪವಾಗಲಿ’ ಎಂದು ಹಾರೈಸಿದರು.

ನಟ ಅರುಣ್ ಸಾಗರ್, ರಂಗಕರ್ಮಿ ಪ್ರಕಾಶ್ ಗರುಡ, ಬಸವರಾಜ ಬೆಂಗೇರಿ ಮಾತನಾಡಿದರು. ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಷೇಕ್ ಮಾಸ್ತರ್, ಶ್ರೀಧರ ಹೆಗಡೆ ಹಾಜರಿದ್ದರು.

ವರ್ತಮಾನದ ಅಗತ್ಯವನ್ನು ಅರ್ಥ ಮಾಡಿಕೊಂಡು ಪ್ರಯೋಗಶೀಲತೆ ಅಳವಡಿಸಿಕೊಂಡಾಗ ವೃತ್ತಿ ರಂಗಭೂಮಿ ಬೆಳೆಯಲು ಸಾಧ್ಯ. ಪೌರಾಣಿಕ, ಸಾಮಾಜಿಕ ನಾಟಕ ಜನರನ್ನು ಮುಟ್ಟುತ್ತವೆ.
ಮಲ್ಲಿಕಾರ್ಜುನ ಕಡಕೋಳ, ನಿರ್ದೇಶಕ ವೃತ್ತಿ ರಂಗಭೂಮಿ ರಂಗಾಯಣ

ನಾನು ಚಿಕ್ಕವನಿದ್ದಾಗ ಅಜ್ಜ ಹಾರ್ಮೋನಿಯಂ ನುಡಿಸುತ್ತಿದ್ದರು. ನನಗೆ ತರಬೇತಿ ನೀಡಲು ಅವರು ಉತ್ಸುಕರಾಗಿದ್ದರು. ರಾತ್ರಿ ನಾಟಕ ನೋಡಿ ಮರುದಿನ ಶಾಲೆಯಲ್ಲಿ ತೂಕಡಿಸಿದ ನೆನಪುಗಳಿವೆ.
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.