ದಾವಣಗೆರೆ: ರಾಹುಗ್ರಸ್ತ ಚಂದ್ರಗ್ರಹಣದ ಪ್ರಯುಕ್ತ ಮೂಢನಂಬಿಕೆ ವಿರೋಧಿಸಿ ಮಾನವ ಬಂಧುತ್ವ ವೇದಿಕೆಯಿಂದ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಸಂಜೆ ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು.

ಸೂರ್ಯ, ಚಂದ್ರಗ್ರಹಣದ ಸಂದರ್ಭ ಮನೆಯಿಂದ ಹೊರಗೆ ಬರಬಾರದು, ಆಹಾರ ಸೇವಿಸಬಾರದು ಎಂಬ ಮೌಢ್ಯವನ್ನು ಧಿಕ್ಕರಿಸಿ ಪ್ರಗತಿಪರ ಚಿಂತಕರು ‘ಮಂಡಕ್ಕಿ–ಮಿರ್ಚಿ’ಯನ್ನು ತಿನ್ನುತ್ತ, ಚಹಾ ಸೇವಿಸಿ ಚಂದ್ರ ಗ್ರಹಣದ ಬಗೆಗಿನ ಮಿಥ್ಯದ ಬಗ್ಗೆ ಸಮಾಲೋಚನೆ ನಡೆಸಿದರು.

‘ಪ್ರಜ್ಞಾವಂತರು ಇಂತಹ ಮೌಢ್ಯಾಚರಣೆ ಬಿಡಬೇಕು’ ಎಂದು ಪ್ರಗತಿಪರ ಚಿಂತಕ ಎ.ಬಿ. ರಾಮಚಂದ್ರಪ್ಪ ಹೇಳಿದರು.

‘ಬಹುಜನರನ್ನು ನಿರಂತರವಾಗಿ ವಿಚಾರಹೀನ ಮಾಡುವ ಪ್ರಯತ್ನ ನಡೆಯುತ್ತಿದ್ದು, ನಮ್ಮನ್ನಾಳುವ ಸರ್ಕಾರಗಳು ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ವೈಚಾರಿಕ ಚಿಂತನೆ ಸರ್ಕಾರದ ಆಶಯವಾಗಬೇಕು. ಆದರೆ ದೇಶದ ಪ್ರಧಾನಿಗಳೇ ಕೋವಿಡ್ ಸಂದರ್ಭ ಗಂಟೆ ಬಾರಿಸಿ, ದೀಪ ಹಚ್ಚುವ ಮೌಢ್ಯಕ್ಕೆ ತಳ್ಳಿದ್ದರು. ಮೌಢ್ಯದಿಂದ ಬಿಡುಗಡೆಗೊಂಡಾಗ ಪ್ರಜಾಸತ್ತಾತ್ಮಕ ವ್ಯವಸ್ಥೆ ಮೂಡುತ್ತದೆ. ಪ್ರಜಾಪ್ರಭುತ್ವದ ಸರ್ಕಾರಗಳನ್ನು ರಚಿಸಲು ಸಾಧ್ಯ’ ಎಂದರು.

ಅನೀಸ್ ಪಾಷಾ, ದಾದಾಪೀರ್ ನವಿಲೇಹಾಳ್, ಶಿವಕುಮಾರ್, ಆದಿಲ್‌ಖಾನ್, ಮಲ್ಲೇಶ್, ಕತ್ತಲಗೆರೆ ತಿಪ್ಪಣ್ಣ, ಸತೀಶ್, ಭೈರೇಶ್ವರ, ಪರಮೇಶ್ವರಪ್ಪ, ರಾಮೇಶ್ವರಿ, ಧನುಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.